ಮೋದಿ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು: “ಮೋದಿ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗವಷ್ಟೇ. ಜನರ ಮನಸ್ಥಿತಿಯನ್ನು ಸಜ್ಜು ಮಾಡುವ ವ್ಯಾಖ್ಯಾನ ಬಿಟ್ಟರೆ ಇದರಲ್ಲಿ ಬೇರೆನೂ ಇಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಸಹ ರಾಜಕೀಯ ತಂತ್ರ ಹೊಂದಿದ್ದೇವೆ. ಪ್ರತಿಯೊಂದು ಪಕ್ಷವು ಒಂದೊಂದು ತಂತ್ರ ಅನುಸರಿಸುತ್ತವೆ. ಎಕ್ಸಿಟ್ ಪೋಲ್ ಸುಳ್ಳಾಗಲಿದೆ. ಇಂಡಿಯಾ ಒಕ್ಕೂಟ ಬಹುಮತ ಪಡೆಯುತ್ತದೆ ಮತ್ತು ಸರ್ಕಾರ ರಚಿಸುತ್ತದೆ” ಎಂದರು.

ಇದನ್ನೂ ಓದಿ: ವಿಚಾರಣೆಗೆ ಅಸಹಕಾರ; ಹೊರಗೆ ಬಂದ ಕೂಡಲೇ ನೋಡಿಕೊಳ್ಳುವುದಾಗಿ ಅಧಿಕಾರಿಗಳನ್ನು ಬೆದರಿಸಿದ ಪ್ರಜ್ವಲ್‌ ರೇವಣ್ಣ

“ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ ಡಿಕೆಶಿ, ಹೆಚ್ಚು ಮಳೆ ಸುರಿದು ತೊಂದರೆ ಉಂಟಾಗಿರುವ ಭಾಗಗಳನ್ನು ಪರಿಶೀಲನೆ ನಡೆಸಲಾಗುವುದು” ಎಂದರು.

“ಪರಿಷತ್ ಚುನಾವಣೆ ಮತದಾನ ಮುಗಿದ ನಂತರ ಅಧಿಕಾರಿಗಳ ಸಭೆ ನಡೆಸಲಾಗುವುದು. ತೊಂದರೆಗಳನ್ನು ನಿವಾರಿಸಲಾಗುವುದು” ಎಂದರು.

ಇದನ್ನೂ ನೋಡಿ: ಅಮ್ಮ ಎಂಬ ಭಾವಕ್ಕಿರುವ ಕಸುವು ಅನುಭವಿಸಿಯೇ ಅರಿಯಬೇಕು – ಪ್ರತಾಪ್ ಸಿಂಹJanashakthi Media

Donate Janashakthi Media

Leave a Reply

Your email address will not be published. Required fields are marked *