ಬೆಂಗಳೂರು: ರಾಜ್ಯದ 236 ತಾಲೂಕುಗಳ ಪೈಕಿ 224 ತಾಲೂಕುಗಳು ಬರದಿಂದ ತತ್ತರಿಸುತ್ತಿದ್ದು, ಲೋಕಸಭೆ ಚುನಾವಣೆಯ ಕಾನೂನು ಮತ್ತು ಮಾದರಿ ನೀತಿ ಸಂಹಿತೆ ಕರ್ನಾಟಕ ರಾಜ್ಯದ ಬರಪರಿಹಾರ ಬಿಡುಗಡೆಗೆ ಅಡ್ಡಿಯಾಗುವುದಿಲ್ಲ.ಆದ್ದರಿಂದ ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ₹ 4,663 ಕೋಟಿ ಮತ್ತು ಹೆಚ್ಚುವರಿ ಬೆಂಬಲ ನಿಧಿ ₹ 18,171 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕರ್ನಾಟಕಕ್ಕೆ ಬರ ಪರಿಹಾರ ನಿಧಿಯನ್ನು ತೆರವುಗೊಳಿಸಲು ಚುನಾವಣಾ ಆಯೋಗವು ಉನ್ನತಾಧಿಕಾರ ಸಮಿತಿಯ ಸಭೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ತಪ್ಪಾಗಿ ಪ್ರತಿಪಾದಿಸಿದೆ, ಇದು ಕಾನೂನಿನ ದೃಷ್ಟಿಯಲ್ಲಿ ಅಗತ್ಯವಿಲ್ಲ. ಚುನಾವಣಾ ಆಯೋಗವು ಉನ್ನತಾಧಿಕಾರ ಸಮಿತಿಯ ಸಭೆ ನಡೆಸಲು ಅನುಮತಿ ನೀಡಿಲ್ಲ ಎಂಬ ಕಾರಣ ನೀಡಿ ಬರ ಪರಿಹಾರ ಬಿಡುಗಡೆ ವಿಳಂಬವನ್ನು ಕೇಂದ್ರ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಕರ್ನಾಟಕದ ಜನರು ಸಾಕಷ್ಟು ಪರಿಹಾರ ಧನದ ಕೊರತೆಯಿಂದ ಬಳಲುತ್ತಿದ್ದಾರೆ. ಕುಡಿಯುವ ನೀರು, ಮೇವು, ಉದ್ಯೋಗ ಮತ್ತು ಬೆಳೆ ನಷ್ಟದಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು…,” ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ: “ಹಿಂದೂಗಳು ವೋಟ್ ನಮಗೆ ಬೇಡ” ಸಿಎಂ ಸಿದ್ದರಾಮಯ್ಯ ಕುರಿತು ಸುಳ್ಳು ಸುದ್ದಿ ಹಂಚಿಕೆ
ಬೆಂಗಳೂರಿನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಡಿಕೆಶಿ, ಬರ ಪರಿಹಾರ ಸೇರಿದಂತೆ ವಿಪತ್ತು ಪರಿಹಾರಕ್ಕಾಗಿ ಹಲವಾರು ಪ್ರಸ್ತಾವನೆಗಳನ್ನು ತೆರವುಗೊಳಿಸಲು ಉನ್ನತಾಧಿಕಾರ ಸಮಿತಿಯ ಸಭೆ ನಡೆಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಮಾರ್ಚ್ 28 ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಹೇಳಿದರು.
ಹಕ್ಕಿನ ವಿಷಯವಾಗಿ, ಸಂಬಂಧಪಟ್ಟ ರಾಜ್ಯಗಳಲ್ಲಿ ವಿಪತ್ತು ಸಂಭವಿಸಿದಾಗ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಮತ್ತು ಇತರ ನಿಧಿಗಳಿಗೆ ರಾಜ್ಯಗಳು ಅರ್ಹವಾಗಿವೆ ಎಂದು ಅವರು ಒತ್ತಿ ಹೇಳಿದ ಡಿಕೆಶಿ,”ಮೇಲಿನ ಸಂಗತಿಗಳು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತಾಧಿಕಾರ ಸಮಿತಿಯ ಸಭೆಯನ್ನು ತಕ್ಷಣವೇ ನಡೆಸುವಂತೆ ಮತ್ತು ಎನ್‌ಡಿಆರ್‌ಎಫ್‌ನಿಂದ ₹ 4,663 ಕೋಟಿ ಮತ್ತು ಹೆಚ್ಚುವರಿ ಬೆಂಬಲ ನಿಧಿಯಿಂದ ₹ 18,171 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಕರ್ನಾಟಕದ ಬರ ಪೀಡಿತ ಪ್ರದೇಶಗಳ ಜಾನುವಾರುಗಳಿಗೆ, ರೈತರಿಗೆ ಬೆಳೆ ನಷ್ಟವಾಗಲು ₹ 4,663 ಕೋಟಿ ಮತ್ತು ಹೆಚ್ಚುವರಿ ₹ 18,171 ಕೋಟಿ ಎನ್‌ಡಿಆರ್‌ಎಫ್‌ನಿಂದ ಬಿಡುಗಡೆ ಮಾಡಲು ಮತ್ತು ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.