ಬೆಂಗಳೂರು | ಸಕ್ರಿಯ ನಾಗರಿಕರಾಗಿರಲು ಅಣಕು ಚುನಾವಣೆ ಸಹಕಾರಿ – ರಘುನಂದನ

ಬೆಂಗಳೂರು : ದೇಶ್ ಅಪ್ನಾ ಯೇನ್ ಸಹಯೋಗ್ ಫೌಂಡೇಶನ್ ಅವರ ಆಕ್ಟಿಜೇನ್ ಕ್ಲಬ್‌ ನಿಂದ ಅಣಕು ಚುನಾವಣೆ  ಚಟುವಟಿಕೆ  ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಜಿಲ್ಲಾ ಸಂಯೋಜಕರಾದ ರಘುನಂದನ ಅಣಕು ಚುನಾವಣೆ ಇದು ವಿಧ್ಯಾರ್ಥಿಗಳಲ್ಲಿ ಜಾಗೃತಿ ಮಾಹಿತಿ ಮತ್ತು ಸಕ್ರಿ ಯ ನಾಗರಕರನ್ನಾಗಲು ಈ ಚಟುವಟಿಕೆ ಸಹಕಾರಿಯಾಗಲಿದೆ ಎಂದು  ತಿಳಿಸಿದರು.  ಬೆಂಗಳೂರು

ಇದನ್ನೂ ಓದಿ : ಮೈಸೂರು | ಸಂಗೀತ ವಿವಿಯಿಂದ ಎಚ್‌. ಜನಾರ್ಧನ್ (ಜನ್ನಿ) ಸೇರಿದಂತೆ ಮೂವರಿಗೆ ಡಾಕ್ಟರೇಟ್‌

ಬೆಂಗಳೂರು ದಕ್ಷೀಣ ಜಿಲ್ಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹೂಡಿ ಶಾಲೆಯಲ್ಲಿ ಅಣಕು ಮತದಾನ’ ಚಟುವಟಿಕೆ ಮಾಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ಚಟುವಟಿಕೆಯನ್ನೂ ನಡೆಸಲಾಯಿತು. ಇದೇ ವೇಳೆ ಅಧಕ್ಷ್ಯ ಮತ್ತು ಉಪಾಧಕ್ಚ್ಯ ಹಾಗೂ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಅಣಕು ಮತದಾನದ ಯಶಸ್ಸು, ಭಾಗವಹಿಸುವಿಕೆ ನಿರ್ದೇಶನ ನಿಡಲಾಯಿತು.

ವಿದ್ಯಾರ್ಥಿಗಳಿಗೆ ಮತದಾನದ ಪ್ರಕ್ರಿಯೆ, ಇವಿಎಂ (EVM) ಮತ್ತು ವಿವಿಪ್ಯಾಟ್ (VVPAT) ಬಳಕೆಯ ಬಗ್ಗೆ ಅರಿವು ಮೂಡಿಸಿದರು ಇದರಲ್ಲಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು  ಭಾಗವಹಿಸಿದರು. ಅಣಕು ಮತದಾನದ ಪ್ರಾರಂಭದ ಸಮಯ, ಅಭ್ಯರ್ಥಿಗಳ ಏಜೆಂಟರ ಉಪಸ್ಥಿತಿ, ಮತ್ತು ಇವಿಎಂ ಯಂತ್ರವನ್ನು ‘ಶೂನ್ಯ (Clear)’ ಮಾಡುವುದು. ಶಿಕ್ಷಕರು ಮಾರ್ಗದರ್ಶನ ಮಾಡಿದರು.

ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಕಾರ್ಯವೈಖರಿ,  ಚುನಾವಣಾಧಿಕಾರಿಗಳ  ಹೇಳಿಕೆಗಳನ್ನು  ಮಕ್ಕಳಿಗೆ ತಿಳಿಸಿದರು. ‘ಅಣಕು ಮತದಾನ ಕಡ್ಡಾಯ’, ‘ಮತಗಳ ಅಳಿಸುವಿಕೆ ಕಡ್ಡಾಯ’ ಎಂಬಂತಹ ಚುನಾವಣಾ ಆಯೋಗದ ನಿರ್ದೇಶನಗಳು ತಿಳಿಸಿದರು.

ವಿದ್ಯಾರ್ಥಿಗಳು ರಹಸ್ಯ ಮತಪೇಟ್ಟಿಗೆಯ ಒಂದು ಬಾರಿಗೆ ಒಬ್ಬ ವಿದ್ಯಾರ್ಥಿಯಂತೆ ಮತ ಚಲಾವಣೆ ಮಾಡಿ ನಂತರ ಫಲಿತಾಂಶ ಪ್ರಕಟಗೊಂಡು ಚುನಾವಣೆಯಲ್ಲಿ ಗೆದ್ದವರ ಹೆಸರನ್ನು ಪ್ರಕಟಮಾಡಿದರು. ಈ ಮೂಲಕ ವಿಧ್ಯಾರ್ಥಿಗಳಲ್ಲಿ ಅಣುಕು ಚುನಾವಣೆಯ ಪ್ರಕಿಯೆಗಳ ಮಹತ್ವವನ್ನೂ ದೇಶ್‌ ಅಪ್ನಾಯೇನ್‌ ಸಹಯೋಗ ಪೌಂಡೆಷನ್‌ ನವರು ಜಾಗೃತಿ ಮೂಡಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದರು.

ಇದನ್ನೂ ನೋಡಿ : ಕಾರ್ಮಿಕರ ಮಕ್ಕಳ ʼಶಿಕ್ಷಾದೀಪʼ ಸಿoಘ್ವಿ ಚಾರಿಟೇಬಲ್ ಟ್ರಸ್ಟ್ Janashakthi Media

 

Donate Janashakthi Media

Leave a Reply

Your email address will not be published. Required fields are marked *