ಬೆಂಗಳೂರು| ಬಸ್‌ ನಲ್ಲಿ ಪ್ರಯಾಣಿಕರ ಕಣ್ಣೆದುರೇ ಮೊಬೈಲ್‌ ಕಳ್ಳತನ

ಬೆಂಗಳೂರು: ನಗರದಲ್ಲಿ ಮೊಬೈಲ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬಿಎಂಟಿಸಿ ಬಸ್‌ ನಲ್ಲಿ ಪ್ರಯಾಣಿಸುವವರು ಆತಂಕ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಬ್ಬರು ಕಳ್ಳರು ಸಮನ್ವಯತೆಯಿಂದ ಕೆಲಸ ಮಾಡಿ ಪ್ರಯಾಣಿಕರೊಬ್ಬರ ಕಣ್ಣೆದುರೇ ಮೊಬೈಲ್‌ ಎಗರಿಸಿರುವ ಕೃತ್ಯ ನಡೆದಿದೆ. ಬೆಂಗಳೂರು

ಬಸ್‌ ನಲ್ಲಿ ಯಾವುದೇ ರಷ್‌ ಇಲ್ಲದಿದ್ದರೂ ಮುಂದಿರುವ ಪ್ರಯಾಣಿಕರ ಬೆನ್ನಿಗೆ ಹೊಡೆದು ಅವಸರ ನಟಿಸಿದ ಕಳ್ಳ ಬಳಿಕ ಪ್ರಯಾಣಿಕರ ಜೇಬಿಗೇ ಕೈ ಬಿಟ್ಟಿದ್ದಾನೆ. ಬಳಿಕ ಅಲ್ಲಿಂದ ಮೊಬೈಲ್‌ ಕಸಿದು ಅದನ್ನು ತನ್ನ ಸಹಚರನಿಗೆ ವರ್ಗಾಯಿಸಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರ

ಕ್ಷಣ ಮಾತ್ರದಲ್ಲಿಯೇ ಮೊಬೈಲ್‌ ಕಳೆದುಕೊಂಡಿರುವುದು ಗೊತ್ತಾದರೂ ಸಹ ಪ್ರಯಾಣಿಕನಿಗೆ ಕಳ್ಳರು ಚಳ್ಳೆ ಹಣ್ಣು ತಿನಿಸಿದ್ದಾರೆ.

ಈ ಕೃತ್ಯದಿಂದ ಪ್ರಯಾಣಿಕರು ಬಸ್‌ ನಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಮೊಬೈಲ್‌ ಕಳ್ಳರಿಗೆ ಕಡಿವಾಣ ಹಾಕಲು ಬಿಎಂಟಿಸಿ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media

Donate Janashakthi Media

Leave a Reply

Your email address will not be published. Required fields are marked *