ಲಕ್ನೊ: ಪ್ರವಾಹಪೀಡಿತ ರಸ್ತೆಯೊಂದರಲ್ಲಿ ಬೈಕ್ ನಲ್ಲಿ ಹಿಂದೆ ಕುಳಿತು ಹೋಗುತ್ತಿರುವ ಮಹಿಳೆಯೊಬ್ಬರಿಗೆ ಗುಂಪೊಂದು ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಲಕ್ನೊದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉತ್ತರ
ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಬಳಿ ಇರುವ ತಾಜ್ ಹೋಟೆಲ್ ಸೇತುವೆಯ ಕೆಳಗೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಜಲಾವೃತವಾದ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದರು.
ಇದನ್ನೂ ಓದಿ : ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಷೇರು ಮಾರಕಟ್ಟೆಯಲ್ಲಿ 700 ಅಂಕ ಕುಸಿದ ಸೆನ್ಸೆಕ್ಸ್: 4 ಲಕ್ಷ ಕೋಟಿ ನಷ್ಟ!
Lucknow: A viral video shows people mistreating a woman during rain and causing a ruckus under the Taj Hotel bridge. Police intervened, dispersed the crowd, and are identifying those involved pic.twitter.com/7TJxUYKmIv
— IANS (@ians_india) July 31, 2024
ಕೆಲವು ಯುವಕರು ಅದೇ ನೀರಿನಲ್ಲಿ ಆಟವಾಡುತ್ತಿದ್ದರು, ಈ ಬೈಕ್ ಆ ದಾರಿಯಲ್ಲಿ ಹೋಗುತ್ತಿದ್ದಂತೆ ನೀರನ್ನು ಬೈಕ್ ಮೇಲೆ ಎರಚಲು ಶುರು ಮಾಡಿದ್ದರು. ಬಳಿಕ ಬೈಕ್ ಮುಂದೆ ಹೋಗದಂತೆ ತಡೆದ ಬಳಿಕ ಬೈಕ್ನಲ್ಲಿದ್ದ ಮಹಿಳೆ ಸೇರಿ ಇಬ್ಬರು ಸವಾರರು ಕೆಳಗೆ ನೀರಿನಲ್ಲಿ ಬಿದ್ದಿದ್ದಾರೆ.
ಆದರೂ ಅವರು ನೀರನ್ನು ಎರಚುವುದನ್ನು ಬಿಟ್ಟಿರಲಿಲ್ಲ. ಮಹಿಳೆಯನ್ನು ಕೂಡಲೇ ಅಲ್ಲಿದ್ದವರ್ಯಾರೋ ಕೆಳಗಿನಿಂದ ಮೇಲಕ್ಕೆ ಎತ್ತಿದ್ದಾರೆ. ವಿಡಿಯೋದಲ್ಲಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ಕೂಡ ಕಾಣಬಹುದಾಗಿದೆ.
ವರದಿಗಳ ಪ್ರಕಾರ, ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕಿರುಕುಳ ನೀಡಿದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.