ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಆಸಕ್ತಿ ತೋರಬೇಕು ಎಂದು ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
SFI ಗಂಗಾವತಿ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಶೈಕ್ಷಣಿಕ ಸಮಸ್ಯೆಗಳಾದ ಶಿಕ್ಷಕರ ನೇಮಕ, ಶಾಲೆಗಳಿಗೆ ಅನುದಾನ, ವಿದ್ಯಾರ್ಥಿ ಶಿಷ್ಯವೇತನ, ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಲು ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ಈ ಹೋರಾಟದಲ್ಲಿ ಹಲವು ಶಾಲೆ ಮತ್ತು ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕರ್ನಾಟಕ
ಹೋರಾಟವನ್ನು ಉದ್ದೇಶಿಸಿ ಎಸ್.ಎಫ್.ಐನ ರಾಜ್ಯಾಧ್ಯಕ್ಷ ಶಿವಪ್ಪ ಎನ್. ಮಾತನಾಡಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯಾಗದೆ ಇನ್ನು ಹಾಗೆ ಉಳಿದಿದೆ. ಕಲ್ಯಾಣ ಕರ್ನಾಟಕ ಹೆಸರು ಮಾತ್ರ ಬದಲಾಗಿದೆ. ಇಲ್ಲಿ ಶೈಕ್ಷಣಿಕ ಸಮಸ್ಯೆಗಳು ದಿಗಣಗೊಂಡಿವೆ. ಹಾಗೆಯೇ ಅನೇಕ ವಿದ್ಯಾರ್ಥಿಗಳಿಗೆ ಶಾಲಾ/ಕಾಲೇಜು ಫೀಸ್ ಕಟ್ಟಲು ಸಾಧ್ಯವಾಗದೆ ಡ್ರಾಪ್ ಔಟ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತು ಹಳ್ಳಿಗಳಿಗೆ ಬಸ್ಸುಗಳು ಹಾಗೂ ಇತರ ಶೈಕ್ಷಣಿಕ ಸಮಸ್ಯೆಗಳು ದ್ವಿಗುಣಗೊಂಡಿವೆ.
ಶಾಲೆಗೆ ಶಿಕ್ಷಕರಿಲ್ಲ ಶ್ಯೂನ್ಯ ಶಿಕ್ಷಕ ಶಾಲೆಗಳಿವೆ. ಪ್ರಾದೇಶಿಕ ಅಸಮಾನತೆ ಈ ಭಾಗದಲ್ಲಿ ಹೆಚ್ಚಿದೆ. ಇಲ್ಲಿನ ರಾಜಕಾರಣಿಗಳು ಶೈಕ್ಷಣಿಕ ಸಮಸ್ಯೆಗಳು ಕುರಿತು ಎಚ್ಚರಿಕೆ ವಹಿಸಬೇಕು. ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನವದೆಹಲಿ |ಎಲ್ ಪಿ ಜಿ ಸಿಲಿಂಡರ ಬೆಲೆ ಇಳಿಕೆ ಗೃಹ ಬಳಕೆಯ ಸಿಲಿಂಡರನಲ್ಲಿ ಯಾವುದೆ ಬದಲಾವಣೆಯಿಲ್ಲ
ಸ್ಥಳೀಯ ಎಂಎಲ್ಎ ಗಾಳಿ ಜನಾರ್ದನ್ ರೆಡ್ಡಿ ಅವರು ಕ್ಷೇತ್ರದ ಬಗ್ಗೆ ಕಿಂಚಿತ್ತು ಗಮನವಹಿಸುತ್ತಿಲ್ಲ. ಮತ್ತು ನೂತನ ವಸತಿ ನಿಲಯಗಳು ತೆರೆಯುವ ಸಂದರ್ಭದಲ್ಲಿ ಹೆಚ್ಚು ಗಮನವಹಿಸುವುದು ಅಗತ್ಯವಿದೆ. ಶೈಕ್ಷಣಿಕ ಕ್ಷೇತ್ರವನ್ನು ಮರೆತರೆ ಮುಂದಿನ ದಿನದಲ್ಲಿ ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತವೆ ಎಂದು ಎಚ್ಚರಿಸಿದ್ದರು. ಹಾಗೂ SFI ರಾಜ್ಯ ಸಮಿತಿ ನವೆಂಬರ್ ತಿಂಗಳಲ್ಲಿ ನಡೆಯುವ ಬೆಳಗಾವಿ ಅಧಿವೇಶಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.
ರಾಜ್ಯ ಉಪಾಧ್ಯಕ್ಷ ಡಾ.ದೊಡ್ಡಬಸವರಾಜ್ ಮಾತನಾಡಿ ಹೈದರಾಬಾದ್ ಕರ್ನಾಟಕ ಇನ್ನು ಹಾಗೆ ಉಳಿದಿದೆ ಕಲ್ಯಾಣದ ಕನಸು ಸಾಧ್ಯವಾಗುತ್ತಿಲ್ಲ. ಅಭಿವೃದ್ದಿಗಾಗಿ ಬರುವ ಅನುದಾನ ಎಲ್ಲಿ ಹೋಗುತ್ತಿದೆ? ಸ್ಥಳೀಯ ರಾಜಕಾರಣಿಗಳಿಗೆ ಹಿತಾಸಕ್ತಿ ಕೊರತೆ ಹೆಚ್ಚಿದೆ. ನೀಚ ರಾಜಕಾರಣ ಮಾಡುವುದು ನಿಲ್ಲಿಸಲಿ.ಅಭಿವೃದ್ಧಿಗೆ ಇಲ್ಲಿನ ಅಧಿಕಾರಿಗಳು ಹೆಚ್ಚು ಗಮನವಹಿಸಬೇಕು. ಅವರು ಪಡೆಯುವ ಸಂಬಳಕ್ಕಾದರು ನ್ಯಾಯ ಬದ್ಧವಾಗಿ ಸೇವೆ ಸಲ್ಲಿಸಬೇಕಿದೆ. ಇದನ್ನೆಲ್ಲ ವಿರೋಧಿಸಿ ಸೆಪ್ಟೆಂಬರ್ 15 ರಿಂದ ರಾಜ್ಯದಲ್ಲಿ ಶೈಕ್ಷಣಿಕ ಜಾಥ ಕೈಗೊಳ್ಳಲಾಗುವುದು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವು ಎಂದರು.

ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಮಾತನಾಡಿ ಗಂಗಾವತಿ ತಾಲೂಕಿನಲ್ಲಿ ಹಳ್ಳಿಗಳಿಗೆ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯಗಳು ಸಿಗುತ್ತಿಲ್ಲ ಕೊಡುವೆ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲ. ಶೈಕ್ಷಣಿಕ ಬೇಡಿಕೆಗಳು ಈಡೇರಿಸದಿದ್ದರೆ ಗಂಗಾವತಿಯನ್ನು ಬಂದ್ ಮಾಡುವುದಾಗಿ ಕರೆ ನೀಡಿದರು.
ನಂತರ ಬಸ್ ಡಿಪೋ ವ್ಯವಸ್ಥಾಪಕರು ಮತ್ತು ತಹಸಿಲ್ದಾರ್ರು ಹೋರಾಟದ ಸ್ಥಳಕ್ಕೆ ಆಗಮಿಸಿ ಬೇಡಿಕೆಯ ಮನವಿಯನ್ನು ಸ್ವೀಕರಿಸಿ 10 ದಿನದ ಒಳಗಾಗಿ ಬಸ್ಸಿನ ಸಮಸ್ಯೆ ಬಗೆಹರಿಸಿ ಮತ್ತು ತಾಲೂಕು ಮಟ್ಟದ ಸಭೆಯನ್ನು ಕರೆದು ಶೈಕ್ಷಣಿಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಮುಖಂಡರಾದ ಬಾಲಾಜಿ, ಷರೀಫ್ ಶರಣ ಬಸವ, ರಾಜ್ಯ ಸಮಿತಿ ಸದಸ್ಯರಾದ ನಾಗರಾಜ್, ಬಸಯ್ಯ, ದರ್ಶನ್ ಅಂಕಿತ, ಐಶ್ವರ್ಯ, ಪವಿತ್ರ, ಶುಷ್ಮ, ಭುವನೇಶ್ವರಿ, ದುರುಗಮ್ಮ, ಅಮೃತ, ಅನು ಕೆ. ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ: ಮೈಸೂರು ದಸರಾ ಉದ್ಘಾಟನೆ : ಬಿಜೆಪಿಯ ಧರ್ಮದ್ವೇಷಕ್ಕೆ ಸಾಹಿತಿಗಳ ಆಕ್ರೋಶ
