ಅಕ್ರಮ ಹಣ ವರ್ಗಾವಣೆ ಆರೋಪ: ಶಾಸಕ ವೀರೇಂದ್ರ ಪಪ್ಪಿ ನ್ಯಾಯಾಲಯಕ್ಕೆ ಹಾಜರು

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮವಾಗಿ ಆನ್ಲೈನ್ ಬೆಟ್ಟಿಂಗ್ ಕಂಪೆನಿಗಳನ್ನು ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಇ.ಡಿ ಅಧಿಕಾರಿಗಳು ‌ಆಗಸ್ಟ್‌ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಕ್ರಮ

ಆಗಸ್ಟ್ 22 ರಂದು ವೀರೇಂದ್ರ ಪಪ್ಪಿ ಮನೆಯ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಬಳಿಕ ಅವರನ್ನು ಸಿಕ್ಕಿಂ ನಲ್ಲಿ ಬಂಧಿಸಿ 5 ದಿನಗಳ ಕಾಲ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ ಬಳಿಕ ಇಂದು 5 ದಿನದ ಕಸ್ಟಡಿ ಅಂತ್ಯಗೊಂಡಿದ್ದು, ಬೆಂಗಳೂರಿನ 35ನೇ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿತು.

ಬೆಂಗಳೂರಿನ 35ನೇ ಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ಗಜಾನನ ಭಟ್ ಅವರ ಮುಂದೆ ವೀರೇಂದ್ರ ಅವರನ್ನು ಹಾಜರು ಪಡಿಸಿದಾಗ ಇಡಿ ಅಧಿಕಾರಿಗಳ ವಿರುದ್ಧವೇ ಪಪ್ಪಿ ತಿರುಗಿ ಬಿದ್ದಿದ್ದು, ನನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಇಡಿ ಅಧಿಕಾರಿಗಳೇ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆ ಸ್ವಾಗತಾರ್ಹ ಬಿಜೆಪಿ ಹಾಗೂ ಮತಾಂಧರ ವಿರೋಧಕ್ಕೆ ಕೆಪಿಆರ್‌ಎಸ್‌ ಖಂಡನೆ

ಇಡಿ ದಾಳಿಯ ವೇಳೆ ವೀರೇಂದ್ರ ಅವರ ಮನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಯಷ್ಟು ನಗದು ಸಿಕ್ಕಿದ್ದರೆ, 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಸುಮಾರು 6 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಸುಮಾರು 10 ಕೆಜಿ ಬೆಳ್ಳಿ ಇಡಿ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.

ಆನ್‌ಲೈನ್‌ ಬೆಟ್ಟಿಂಗ್‌, ಆಫ್‌ಲೈನ್‌ ಬೆಟ್ಟಿಂಗ್‌, ಅಕ್ರಮ ಹಣ ವರ್ಗಾವಣೆ ಆರೋಪವಿತ್ತು. ಇದೇ ಹಿನ್ನೆಲೆಯಲ್ಲಿ ಚಿತ್ರದುರ್ಗದ ಶಾಸಕರಿಗೆ ಸಂಬಂಧ ಪಟ್ಟ ಸುಮಾರು 31 ಸ್ಥಳದ ಮೇಲೆ ಇ.ಡಿ. ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಚಿನ್ನದ ಸಾಮ್ರಾಜ್ಯವೇ ಸಿಕ್ಕಿದೆ.

ವೀರೇಂದ್ರ ಪಪ್ಪಿ ಸಿಕ್ಕಿಂ ಗೆ ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಡಿ ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದ್ದು, ಇನ್ನೊಂದೆಡೆ ಸಿಕ್ಕಿಂ ನಿಂದಲೇ ನೇರವಾಗಿ ಶನಿವಾರ ರಾತ್ರಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

ಬೆಳಗ್ಗೆ ಬೆಂಗಳೂರಿನ ಕೋರಮಂಗಲದ ಎನ್‌ಜಿವಿಯಲ್ಲಿರುವ 35 ಸಿಸಿಹೆಚ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇ.ಡಿ ಅಧಿಕಾರಿಗಳು 14 ದಿನ ಕಸ್ಟಡಿಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಆಗಸ್ಟ್‌ 28ರ ವರೆಗೆ ಮಾತ್ರ ಇಡಿ ಕಸ್ಟಡಿ ನೀಡಿ ಆದೇಶ ಹೊರಡಿಸಿದೆ.

ನ್ಯಾಯಾಧೀಶರ ಮುಂದೆ ಶಾಸಕ ವೀರೇಂದ್ರ ಪಪ್ಪಿ ಸಾಲು ಸಾಲು ದೂರು

ಇದೀಗ ಇಂದು ಬೆಂಗಳೂರಿನ ಸಿಎಂಎಂ ನ್ಯಾಯಾಲಯಕ್ಕೆ ವೀರೇಂದ್ರ ಪಪ್ಪಿ ಅವರನ್ನು ಹಾಜರುಪಡಿಸಿದ್ದು, ಈ ವೇಳೆ ಇಡಿ ಅಧಿಕಾರಿಗಳ ಬಗ್ಗೆಯೇ ಸಾಲು ಸಾಲು ದೂರು ನೀಡಿದ್ದಾರೆ. ಟ್ಯಾಪ್ ನೀರು, ಸರಿಯಿಲ್ಲದ ಊಟ, ಗಾಳಿ-ಬೆಳಕಿಲ್ಲದ ಕೊಠಡಿ, ಕಿಟಕಿಯ ಕೊರತೆಯಿದೆ ಎಂದು ಪಪ್ಪಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ಫುಡ್ ಪಾಯ್ಸನಿಂಗ್‌ನಿಂದ ಉಸಿರಾಟದ ತೊಂದರೆ, ಒಂದು ಕುರ್ಚಿಯ ಕೊರತೆ, ಮತ್ತು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಆಹಾರ, ಶುದ್ಧ ಕುಡಿಯುವ ನೀರು, ಮೊಸರು, ಕುರ್ಚಿ, ಮತ್ತು ಸರಿಯಾದ ಆಹಾರ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ನಾನು ಸತ್ತರೆ ಅದಕ್ಕೆ ಇ. ಡಿ ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಕೂಡ ಮಾಡಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ | ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟಿನ ಬಗ್ಗೆ ತನಿಖೆಯಾಗಲಿ – ಎಡಪಕ್ಷಗಳ ಆಗ್ರಹ

Donate Janashakthi Media

Leave a Reply

Your email address will not be published. Required fields are marked *