ರಾಯಚೂರು: ನೀರಿನ ವ್ಯವಸ್ಥೆ ಕಲ್ಪಿಸದ ಶಾಸಕರ ನಡೆಗೆ ಮುದಗಲ್ ಪಟ್ಟಣದ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಆರೋಪಿಸಿದ್ದಾರೆ.
ಇದನ್ನು ಓದಿ :-‘ಅಮ್ಮ’ ನಿನಗೂ ಒಂದು ದಿನ
ಮುದಗಲ್ ಪಟ್ಟಣದ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಚುನಾವಣೆ ವೇಳೆ ಗೆದ್ದ ಮೂರೇ ದಿನದಲ್ಲಿ ನೀರಿನ ವ್ಯವಸ್ಥೆ ಮಾಡುವುದಾಗಿ ಹುಸಿ ಭರವಸೆಯನ್ನು ನೀಡಿದ್ದರು. ಆದರೆ 3 ಬಾರಿ ಶಾಸಕರಾದ್ರೂ ಮುದಗಲ್, ಲಿಂಗಸ್ಗೂರು, ಹಟ್ಟಿ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಜ್ವಲಂತ ಸಮಸ್ಯೆಯಾಗಿಯೇ ಉಳಿದು ಬಿಟ್ಟಿದೆ.
ಹೀಗಾಗಿ ಶಾಸಕರ ನಡೆಗೆ ಆಕ್ರೋಶ ಹೊರಹಾಕಿದ್ದು, ತಾಲೂಕಿನಾದ್ಯಂತ ನೀರಿಗಾಗಿ ಹಾಹಾಕಾರ ಇದ್ರೂ ಕ್ಯಾರೇ ಎನ್ನುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಬರ್ತಾರೆ, ಚುನಾವಣೆ ಮುಗಿದ ಮೇಲೆ ಮಾಯ ಆಗ್ತಾರೆ. ಇನ್ನೂ ಇದೇ ವೇಳೆ ನೀರು ಕೇಳಿದ ಜನತೆಯ ಮೇಲೆಯೇ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಹಾಗೂ ಮುಖಂಡರು ಗೂಂಡಾ ವರ್ತನೆ ತೋರಿದ್ದಾರೆ.
ಇದನ್ನು ಓದಿ :-ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಪ್ರಕಟಣೆ
ಇಂದು ಪುರಸಭೆಯ ಕಸದ ವಾಹನ ಉದ್ಘಾಟಿಸಲು ಲಿಂಗಸ್ಗೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು ಬಂದಿದ್ದರು. ಈ ವೇಳೆ ಜನರು ಕಿಡಿಕಾರಿದ್ದಾರೆ.