ಬೆಂಗಳೂರು: ಏಳು ಬಾರಿ ಗೆದ್ದು ಪ್ರಭಾವಿ ರಾಜಕಾರಣಿ ಕರೆಸಿಕೊಂಡಿರುವ ಶಾಸಕ ರಾಮಲಿಂಗ ರೆಡ್ಡಿ ಯಾವ ನೈತಿಕತೆ ಪ್ರಾಮಾಣಿಕತೆ ಇದೆ ಎಂದು ಬಿಜೆಪಿಯು ಮತದಾರರಿಗೆ ಹಣದ ಆಮಿಷ ನೀಡುತ್ತ ಇದ್ದಾರೆ ಎಂದು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜನನಿ ವತ್ಸಲ ಆರೋಪಿಸಿದರು.
ಇನ್ನೂ ಚುನಾವಣೆಯೇ ಆರಂಭವಾಗಿಲ್ಲ. ಆದರೆ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ಸ್ವತಃ ಕೈಯಾರೆ, ಅಲ್ಲಿನ ಹೆಣ್ಣು ಮಕ್ಕಳಿಗೆ ಸೀರೆ ಮತ್ತು ಮುಖ್ಯವಾಗಿ ಕುಕ್ಕರ್ ನೀಡುತ್ತ ಮತಗಳನ್ನು ಗಟ್ಟಿ ಮಾಡಿಕೊಳ್ಳುತ್ತ ಇರುವುದು ಶೋಚನೀಯ ಎಂದು ತಿಳಿಸಿದರು.
7 ಬಾರಿ ಗೆದ್ದು ಸೋಲಿಲ್ಲದ ಸರದಾರ ಎಂದು ಕರೆದುಕೊಂಡಿರುವ ರಾಮಲಿಂಗಾರೆಡ್ಡಿ ಅವರ ಹಿಂಬಾಲಕರಿಗಷ್ಟೆ ಸರ್ಕಾರದಲ್ಲಿ ಇರುವ ಯೋಜನೆಗಳು. ಮತ ಹಾಕಿದ ಜನಕ್ಕೆ ಕುಕ್ಕರ್ ನಿಕ್ಕರ್, ಪ್ರಶ್ನೆ ಮಾಡುವಂತೆ ಇಲ್ಲ, ಏನನ್ನೂ ಕೇಳುವಂತಿಲ್ಲ ಯಾಕೆಂದರೆ ಕುಕ್ಕರ್, ಹಣ ಕೊಟ್ಟು ಅವರ ಸ್ವತಂತ್ರವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಬಿಟಿಎಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಡಿತರ ಅಂಗಡಿಗಳಲ್ಲಿ ತೂಕದಲ್ಲಿ ಮೋಸ, ಕೊಡುವ ಅಕ್ಕಿಯಲ್ಲಿ ಮೋಸ, ಎಲ್ಲಾ ಹಂತಗಳಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದ್ದರೂ ತಡೆಯುವ ಯೋಚನೆ ಮಾಡಿಲ್ಲ. ಸ್ವಚ್ಛ ಜನಪರ ಕೆಲಸ ಮಾಡುವ ಅಗತ್ಯ ಇಲ್ಲ. ಯಾಕೆಂದರೆ ಅವರಿಗೆಲ್ಲ ಕುಕ್ಕರ್ ಕೊಟ್ಟು ಕುರಿಗಳನ್ನು ಮಾಡುತ್ತ ಇದ್ದರೆ. ರಾಮಲಿಂಗಾರೆಡ್ಡಿ ಒಂದು ಗಣ್ಯ ಸ್ಥಾನದಲ್ಲಿ ಇದ್ದು, ಭ್ರಷ್ಟ ನೀಚ ದೃಷ್ಟ ಮಾಡುವ ಕೆಲಸಗಳನ್ನೆಲ್ಲ ಅವರು ಮತ್ತು ಹಿಂಬಾಲಕರು ಮಾಡುತ್ತಿರುವುದು ಸಂವಿಧಾನಾತ್ಮಕ ದ್ರೋಹ, ಪ್ರಜಾಪ್ರಭುತ್ವಕ್ಕೆ ವಂಚನೆಯಾಗಿದೆ ಎಂದು ಜನನಿ ವತ್ಸಲ ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ