ನನ್ನ ಮಗನಿಗೆ ‘ಶಾಸಕ ರಾಜ್​ಕುಮಾರನೇ ಅಪ್ಪ’ : ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲಿಸಿದ ಮಹಿಳೆ

ಬೆಂಗಳೂರು: ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ವಿರುದ್ಧ ಸ್ಫೋಟಕ ಆರೋಪ ಕೇಳಿ ಬರುತ್ತಿದ್ದು, ನನ್ನ ಮಗನಿಗೆ ಲೀಗಲ್​ ಉತ್ತರದಾಯಿತ್ವ ಕೊಡಿ, ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ. ನನ್ನ ಮಗನಿಗೆ ನ್ಯಾಯ ಬೇಕು ಅಂತ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆ ದೂರು ನೀಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್​ಗೆ ದೂರು ಸಲ್ಲಿಸಿದ್ದಾರೆ.

ಶಾಸಕ ತೇಲ್ಕೂರ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ತೇಲ್ಕೂರ್ ಜತೆ ಸಂಪರ್ಕದಿಂದ ನನಗೆ ಗಂಡು ಮಗು ಜನಿಸಿದೆ. 14 ವರ್ಷದ ಮಗನನ್ನು ತಮ್ಮ ಮಗನೆಂದು ಒಪ್ಪಿಕೊಳ್ಳಬೇಕು. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಒಪ್ಪಿಕೊಳ್ಳಬೇಕು. ತನಿಖೆ ನಡೆಸಿ ಕಾನೂನು ಪ್ರಕಾರ ನ್ಯಾಯಕೊಡಿಸಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?: ಶಾಸಕ ರಾಜಕುಮಾರ್ ಪಾಟೀಲ್​ಗೆ ಬ್ಲ್ಯಾಕ್​ಮೇಲ್ ಪ್ರಕರಣ ಸಂಬಂಧಿಸಿ ವಿಚಾರಣೆಯಲ್ಲಿ ಶಾಸಕ ತೇಲ್ಕೂರ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ರಾಜಕುಮಾರ್ ಪಾಟೀಲ್​ ಹಾಗೂ ನಾನು ಒಂದೇ ಹಳ್ಳಿಯವರು. 16 ವರ್ಷವಿದ್ದಾಗಲೇ ನನ್ನ ಮತ್ತು ಅವರ ಮಧ್ಯೆ ಸಂಬಂಧವಿತ್ತು. ನನ್ನ ತಂದೆಗೆ ಗೊತ್ತಾಗಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ರು. ಮದುವೆ ನಂತರ ನಾನು ಬೆಂಗಳೂರಿನಲ್ಲಿಯೇ ಸೆಟ್ಲ್ ಆಗಿದ್ದೆ. ಬಳಿಕ ಮತ್ತೆ ಶಾಸಕರು ನನ್ನ ಮನೆಗೆ ಬರಲು ಆರಂಭಿಸಿದರು. ಮನಗೆ ಬಂದು ಲೈಂಗಿಕವಾಗಿ ಸಹಕರಿಸುವಂತೆ ನನಗೆ ಒತ್ತಡ ಹೇರಿದ್ದರು. ಸಹಕರಿಸದಿದ್ರೆ ನನ್ನ ಗಂಡನಿಗೆ ಹೇಳುವುದಾಗಿ ಬೆದರಿಸುತ್ತಿದ್ದರು. ಬ್ಲ್ಯಾಕ್​ಮೇಲ್ ಮಾಡಿ ನನ್ನ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆನಂತರದಲ್ಲಿ ಶಾಸಕ ಪಾಟೀಲ್​ನಿಂದ ನನಗೆ ಮಗು ಆಯ್ತು. ಈ ವಿಚಾರ ಗೊತ್ತಾಗಿ ನನ್ನ ಗಂಡ ನನಗೆ ವಿಚ್ಛೇಧನ ನೀಡಿದ್ರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬಲವಂತವಾಗಿ ಎಳೆದೊಯ್ದ ಪೊಲೀಸರು:  ಫೆಬ್ರವರಿ 6 ರಂದು ವಿಧಾನಸೌಧ ಪೊಲೀಸರು ಬಲವಂತವಾಗಿ ಎಳೆದೊಯ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಂದು ರಾತ್ರಿ 10ಕ್ಕೂ ಹೆಚ್ಚು ಜನ ಮನೆಗೆ ನುಗ್ಗಿದ್ರು, ಯಾಕೆ ಏನು ಎತ್ತ ಹೇಳದೆ ಠಾಣೆಯಲ್ಲಿ ಕೂಡಿ ಹಾಕಿದ್ದರೂ,  ನನ್ನ ಮೇಲೆ ಕಂಪ್ಲೆಂಟ್​  ಇಲ್ಲ, ಕೇಸ್ ಇಲ್ಲ, ಫೋನ್ ಕಿತ್ಕೊಂಡಿದ್ದಾರೆ. ಸ್ಟೇಷನ್​ನಲ್ಲಿ ಫೈವ್ ಸ್ಟಾರ್​ ಟ್ರೀಟ್​ಮೆಂಟ್ ಎಲ್ಲಾ ಕೊಟ್ಟಿದ್ದಾರೆ, ಅವರು ಹೇಳಿದಂತೆ ಬರೆದುಕೊಟ್ಟರೆ ಸೆಟ್ಲ್​ ಮೆಂಟ್ ಮಾಡ್ತಾರಂತೆ.

ಪೊಲೀಸರಿಂದ ನನಗೆ ತೊಂದರೆ ಆಗಿಲ್ಲ, ದೊಡ್ಡವರಿಂದ ತೊಂದರೆ ಆಗಿದೆ,  ಇಷ್ಟು ಕೊಡ್ತಾರೆ ನೀವು ಒಪ್ಪಿಕೊಳ್ಳಿ ಅಂತ ಸೆಟ್ಲ್​ಮೆಂಟ್​​ಗೆ ಕೂತಿದ್ದರು, ಕಾಂಗ್ರೆಸ್​ನವರು ಹೇಳಿ ಮಾಡ್ಸಿದ್ದಾರೆ ಅಂತ ಬರೆದುಕೊಡಬೇಕಂತೆ, ನನಗೂ ಕಾಂಗ್ರೆಸ್​ಗೂ ಯಾವ ಸಂಬಂಧವೂ ಇಲ್ಲ, ಯಾರೂ ಗೊತ್ತಿಲ್ಲ. 8 ವರ್ಷದಿಂದಲೂ ನ್ಯಾಯ ಕೇಳ್ತಿದ್ದೇನೆ, ಸಿಎಂಗೆ ದೂರು ಕೊಟ್ಮೇಲೆ ಇಷ್ಟೆಲ್ಲಾ ಆಗಿದೆ.

ಅವ್ನು ನನ್ನ ಮಗನಿಗೆ ಒಂದು ಜೀವನ ಕೊಟ್ಟರೆ ಸಾಕು, ಬೇರೆ ಏನೂ ಬೇಕಿಲ್ಲ, ನನ್ನ ಜೀವನ ಕಷ್ಟ ಪಟ್ಟುಕೊಂಡು ನೋಡಿಕೊಂಡು ಬಂದಿದ್ದೇನೆ, ಈಗ ನೋಡಿದ್ರೆ ನನ್ನ ಮೇಲೆನೇ ದೌರ್ಜನ್ಯ ನಡೀತಿದೆ ಎಂದು ಮಹಿಳೆ ಆರೋಪ ಮಾಡುತ್ತಿದ್ದು, 14 ವರ್ಷದ ಮಗನಿಗೆ ಅವರೇ ಅಪ್ಪ ಅಂತ ಒಪ್ಪಿಕೊಳ್ಳಲಿ, ನನಗೆ ಸ್ಟೇಷನ್ ಸೆಟ್ಲ್​ಮೆಂಟ್ ಬೇಡ, ಲೀಗಲ್ ಆಗಿ ತಗೋತೀನಿ ಎಂದು ಮಹಿಳೆ ಮನವಿ ಮಾಡಿದ್ದಾರೆ. ಇನ್ನೂ ಈ ಮಹಿಳೆಯ ಪರ ವಕೀಲ ಜಗದೀಶ್ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ವಿವವರಣೆ ಕೇಳಿದ ಬಿಜೆಪಿ ರಾಜ್ಯಾಧ್ಯಕ್ಷ : ಸೇಡಂ ಶಾಸಕ ರಾಜ್​​ಕುಮಾರ್​​​​ ಪಾಟೀಲ್ ವಿರುದ್ಧ ಕೇಳಿ ಬಂದಿರೋ ಆರೋಪದ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ನಳಿನ್​​ ಕುಮಾರ್​​ ಕಟೀಲ್​ ತಾಕೀತು ಮಾಡಿದ್ದು, ನಿಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಪಕ್ಷಕ್ಕೆ ಮುಜುಗರ ತರುತ್ತೆ, ಎಲೆಕ್ಷನ್​​ ಹತ್ತಿರವಾಗ್ತಿರೋ ಸಂದರ್ಭದಲ್ಲಿ ಪಕ್ಷಕ್ಕೆ ಹಿನ್ನಡೆ ಆಗುತ್ತೆ. ಆರೋಪದ ಸತ್ಯಾಸತ್ಯತೆ ಏನು ಅನ್ನೋ ವಿವರಣೆ ನೀಡಿ ಎಂದು ರಾಜಕುಮಾರ್​​ ಪಾಟೀಲ್​​​ಗೆ ಸೂಚನೆ ಕೊಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *