ಬೆಂಗಳೂರು: ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದಿಂದ ಹೊರ ಬಂದಿದ್ದಾರೆ.
ಕಲರ್ಸ್ ಕನ್ನಡದ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಲ್ಲಿರುವ ಪ್ರೋಮೋ ಪೋಸ್ಟ್ ಆಗಿದೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಅವರು ‘ಬಿಗ್ ಬಾಸ್’ ಮನೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಹೋಗಿಲ್ಲ ಎಂದು ಖುದ್ದು ಪ್ರದೀಪ್ ಈಶ್ವರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ :ಶಾಸಕ ಸ್ಥಾನದಿಂದ ವಜಾಗೊಳಿಸಲು ಸ್ಪೀಕರ್ಗೆ ದೂರು ಬಿಗ್ ಬಾಸ್
ವಾಹಿನಿಗಳ ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದು ತಪ್ಪೇನೂ ಇಲ್ಲ. ನಾನು ಬಿಗ್ ಬಾಸ್ ಮನೆಗೆ ಹೋಗಿದ್ದು ಕೇವಲ ಎರಡ್ಮೂರು ತಾಸು ಮಾತ್ರ. ಅಲ್ಲಿನ ಸ್ಪರ್ಧಿಗಳಿಗೆ ಉತ್ತೇಜಿಸಲು ಹೋಗಿದ್ದೆ. ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ಧೈರ್ಯ ತುಂಬಿದ್ದೇನೆ. ಇದನ್ನು ಯಾಕೆ ವಿವಾದ ಮಾಡಲಾಗುತ್ತಿದೆ ಗೊತ್ತಿಲ್ಲ. ನೂರು ದಿನ ಹೋಗಿದ್ದರೆ ಮಾತನಾಡಬಹುದಿತ್ತು. ಹೋಗಿದ್ದೆ ಮೂರು ತಾಸು ಎಂದು ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು. ಬಿಗ್ ಬಾಸ್
ಸಂಘಟನೆಗಳಿಂದ ಸ್ಪೀಕರ್ ಗೆ ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವ್ರು ದೂರು ನೀಡಿದ್ದಾರೆ. ಅವರ ಅಸ್ತಿತ್ವ ಕೂಡ ಉಳಿಸಿಕೊಳ್ಳಬೇಕು ಯಾರು ಬೇಕಾದ್ರು ದೂರು ಕೊಡಲಿ, ಬೈಯಲಿ, ಹೋಗಳಲಿ ಎಲ್ಲರಿಗೂ ಸ್ವತಂತ್ರ ಇದೆ ಎಂಬುದಾಗಿ ಅವರು ಹೇಳಿದ್ದಾರೆ. ಸಾಕಷ್ಟು ರಾಜಕಾರಣಿಗಳು ಫಿಲಂ ನಲ್ಲಿ, ಸೀರಿಯಲ್ ನಲ್ಲಿ ಮಾಡಿದ್ದಾರೆ ಆ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಈ ವಿಡಿಯೋ ನೋಡಿ : ಸುದೀಪ್ ಅಭಿನಯದ ಚಿತ್ರಗಳ ಪ್ರಸಾರ ನಿಲ್ಲಿಸಿ : ವಕೀಲರ ಆಗ್ರಹ ಬಿಗ್ ಬಾಸ್