ತೈಲಗಳ ಜೊತೆಗೆ ಏಥನೊಲ್ ಮಿಶ್ರಣ ಮಾಡುವ ಗುರಿಯನ್ನು ಭಾರತ ಐದು ವರ್ಷಗಳಷ್ಟು ಮೊದಲೇ ಸಾಧಿಸಿದೆ ಎಂದು ಎದೆ ತಟ್ಟಿಕೊಳ್ಳುತ್ತಿದೆ. ಇದರ ಹಿಂದೆ ದೊಡ್ಡ ಭ್ರಷ್ಟಾಚಾರದ ಕರ್ಮಕಾಂಡ ಇದೆಯೇ ಎಂಬ ಆಧಾರಸಹಿತ ಪ್ರಶ್ನೆಯೂ ಎದ್ದಿದೆ. ವರಮಾನ ತೆರಿಗೆ ಇಲಾಖೆಯ ತನಿಖೆಯಿಂದ ಬಹಳ ವಿಷಯಗಳು ಹೊರಗೆ ಬಂದಿವೆ. ಇದರ ಎಳೆಗಳನ್ನು ಹಿಡಿದುಕೊಂಡು ಹೊರಟರೆ ಉದ್ದ ಕಥೆಯೊಂದು ಪದರು ಪದರಾಗಿ ತೆರೆದುಕೊಳ್ಳುತ್ತದೆ. ತೈಲ
-ಜಿ. ಎಸ್ ಮಣಿ
ಹಿಂದೆ ಬಿಜೆಪಿ ಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ (ಇಂದಿನ ಕೇಂದ್ರ ರಸ್ತೆ ಸಾರಿಗೆ ಸಚಿವರು, ಹಿಂದೆ ಮಹಾರಾಷ್ಟ್ರ ಸರ್ಕಾರದಲ್ಲೂ ಮಂತ್ರಿಯಾಗಿದ್ದವರು) ಅವರ ‘ಪೂರ್ತಿ ಶಕ್ತಿ ಮತ್ತು ಸಕ್ಕರೆ’ ಎಂಬ ಕಂಪನಿ ಇದೆ. ಈ ಕಂಪನಿಯಲ್ಲಿ ಹದಿನೆಂಟು ಕಂಪನಿಗಳು ಹೂಡಿಕೆ ಮಾಡಿದ್ದವು. ಈ ಕಂಪನಿಗಳನ್ನು ಹುಡುಕಿಕೊಂಡು ಹೋದರೆ ಅವುಗಳಲ್ಲೆಲ್ಲ ನಾಲ್ಕು ಜನ ಹೂಡಿಕೆ ಮಾಡಿದ್ದರು. ಈ ನಾಲ್ವರು ಕೂಲಿಕಾರರು, ಭದ್ರತಾ ಸಿಬ್ಬಂದಿಗಳು ಮತ್ತು ಜ್ಯೋತಿಷಿಗಳಾಗಿದ್ದರು. ತೈಲ
ಇವರಿಗೆ ನಿತಿನ್ ಗಡ್ಕರಿಯವರು ಆಧಾರರಹಿತ ಸಾಲ ನೀಡಿದ್ದರು. ಹೀಗೆ ಪದರು ಪದರು ಕಂಪನಿಗಳು, ಅನಾಮಿಕ ಅಥವಾ ಪುಟ್ಟ ಪುಟ್ಟ ಗುರುತಿನ ವ್ಯಕ್ತಿಗಳು ಈ ಕಂಪನಿಗಳ ಹಿಂದೆ. 2010 ರಲ್ಲಿ 20 ಕಂಪನಿಗಳು ಇದ್ದರೆ ಅದರಲ್ಲಿ 18 ಕಂಪನಿಗಳು ಸ್ವಾಧೀನಪಡಿಸಿಕೊಂಡ ಕಂಪನಿಗಳು. ತೈಲ
ಇದನ್ನೂ ಓದಿ: ಬೆಳಗಾವಿ |ವಿವಿದ ಬೇಡಿಕೆ ಈಡೇರಿಸುವಂತೆ ಶಾಸಕರಿಗೆ ಮನವಿ – ವಸತಿ ಶಾಲಾ ವಿಷಯ ಶಿಕ್ಷಕರ ಸಂಘ
ಯಾವುದೇ ಆದಾಯ ಇಲ್ಲದವು!! ಈ ಎಲ್ಲ ಕಂಪನಿಗಳಿಗೆ ನಾಲ್ಕು ಜನ ಸಾಮುದಾಯಿಕ ನಿರ್ದೇಶಕರುಗಳು. ಅವರುಗಳೆಂದರೆ, ಕಾವ್ಡೆ ಪಾಂಡುರಂಗ್ ಜಡೆ, ಮನೋಹರ್ ಮಾಧವ ರಾವ್ ಪನಸೆ, ನಿಶಾತ್ ವಿಜಯ್ ಅಗ್ನಿಹೋತ್ರಿ ಮತ್ತು ಸಾಗರ್ ಶ್ರೀಪಾದ್ ಕೊತ್ವಾಲಿವಾಲೆ. ಈ ಎಲ್ಲ ನಿರ್ದೇಶಕರುಗಳು 2009 ರ ಮೊದಲ ಅರ್ಧ ದಲ್ಲಿ ಪೂರ್ವಾನ್ವಯವಾಗುವಂತೆ ನೇಮಕವಾದವರು.
ನಂತರ ನಡೆದ ತನಿಖೆಯಲ್ಲಿ ನಿತಿನ್ ಗಡ್ಕರಿ ಅವರು ಖುಲಾಸೆ ಆದರು. ಅಧಿಕಾರದಲ್ಲಿ ಇರುವವರು ಖುಲಾಸೆ ಆಗುವುದು ನಿಯಮ. ಪೂರ್ತಿ ಶಕ್ತಿ ಮತ್ತು ಸಕ್ಕರೆ ಕಂಪನಿಯ ಮೇಲಿನ ತನಿಖೆ ನಡೆಯುತ್ತಲೇ ಇದೆ.
ಈಗ ನಿತಿನ್ ಗಡ್ಕರಿ ಅವರ ಎರಡು ಮಕ್ಕಳು ಮಾನಸ್ ಅಗ್ರೋ ಮತ್ತು ಸಿಯಾನ್ ಅಗ್ರೋ ಕಂಪನಿಗಳನ್ನು ನಡೆಸುತ್ತಾರೆ.ಅವರದ್ದು ಎರಡು ಸಮೂಹ ಕಂಪನಿಗಳಿವೆ. ಅವುಗಳು ಏಥನೊಲ್ ಉತ್ಪಾದನೆ ಮಾಡುತ್ತವೆ. ಅವುಗಳ ಒಟ್ಟು ವಹಿವಾಟು 11000 ಕೋಟಿ ರೂಪಾಯಿಗಳು ಎಂದು ಗಡ್ಕರಿ ಅವರೇ ಒಂದು ಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ. ನೀವು ನಿಮ್ಮ ವಾಹನಗಳಲ್ಲಿ ಬಳಸುವ ಇಂಧನದಲ್ಲಿ ಏಥನೊಲ್ ಇದೆ. ಅದು ತನ್ನ ಮಕ್ಕಳ ಕಂಪನಿಗಳಲ್ಲೇ ಉತ್ಪಾದನೆ ಆದದ್ದು ಎಂದು ಹೆಮ್ಮೆಯ ಮೆಲಕು ಹಾಕುತ್ತಾರೆ.
ಸಿಯಾನ್ ಸಮೂಹದ ವಹಿವಾಟು 2024 ರ ಮಾರ್ಚಿಯಲ್ಲಿ 17 ಕೋಟಿ ರೂಪಾಯಿಗಳಿದ್ದು ಲಾಭ 5 ಕೋಟಿ ರೂಪಾಯಿಗಳಷ್ಟಿದ್ದದ್ದು 2025 ರ ಮಾರ್ಚಿ ವೇಳೆಗೆ ವಹಿವಾಟು 510 ಕೋಟಿ ರೂಪಾಯಿಗಳಿಗೆ ಏರಿ ಲಾಭ 52 ಕೋಟಿ ರೂಪಾಯಿಗಳಿಗೆ ಏರಿದ್ದು ಏಥನೊಲ್ ಮಹಿಮೆಯಿಂದ ಎಂದು ಹೇಳಬಹುದೇ?
ಏಥನೊಲ್ ಗೆ ಯಾಕೆ ಇಷ್ಟು ಪ್ರಾಮುಖ್ಯತೆ ಬಂತು? ತೈಲದಲ್ಲಿ ಏಥನೊಲ್ ಮಿಶ್ರಣ ಮಾಡುವ ತರಾತುರಿ ಮತ್ತು ನಮ್ಮ ದೇಶದ ಗುರಿ ಐದು ವರ್ಷ ಮೊದಲೇ ಏಕೆ ಸಾಧಿಸಿತು ಎಂಬುದಕ್ಕೆಲ್ಲಾ ಇನ್ನೂ ಹೆಚ್ಚಿನ ವಿವರಣೆ ಬೇಕೆ?
ಏಥನೊಲ್ ಕಂಪನಿಗಳ ಷೇರು ಮಾರುಕಟ್ಟೆಯಲ್ಲಿ ಷೇರು ಬೆಲೆಗಳು ಏರುತ್ತಿದ್ದು ಅವು ಪ್ರಬಲ ಕಂಪನಿಗಳೆಂದು ಗುರುತಿಸಲ್ಪಡತೊಡಗಿವೆ. ಹೀಗೆ ಈ ಕಂಪನಿಗಳು ಲಾಭ ಮಾಡತೊಡಗಿದರೆ ಅಂತಹ ಲಾಭದಿಂದ ಲಾಬಿ ಮಾಡುವ ಕೆಲಸವನ್ನೂ ಮಾಡಿಯಾರಲ್ಲವೇ?
ಸರ್ಕಾರ “ವಿವಿಧ ದೇಶಗಳಲ್ಲಿ ಏಥನೊಲ್ ಮಿಶ್ರಿತ ಇಂಧನದ ಅನುಷ್ಠಾನ ಆಗಿದೆ. ಇದರಿಂದ ತೊಂದರೆಗಳು ಇಲ್ಲ. ಲಾಭಗಳು ದೊಡ್ಡ ಪ್ರಮಾಣದಲ್ಲಿ ಇವೆ” ಎಂದು ಸ್ಪಷ್ಟನೆ ನೀಡುತ್ತಲೇ ಇದೆ. ಆದರೆ, ಬಳಕೆದಾರರು ಕಡಿಮೆ ಮೈಲೆಜ್, ಇಂಜಿನ್ ತೊಂದರೆಗಳು, ಇನ್ಸೂರೆನ್ಸ್ ತೊಡಕುಗಳು, ಬೆಲೆ ಲಾಭ ಇಲ್ಲದೆ ಇರುವುದು, ಇತ್ಯಾದಿ ಸಮಸ್ಯೆಗಳನ್ನು ಎತ್ತುತ್ತಲೇ ಇದ್ದಾರೆ. ಇದೆಲ್ಲ ದೇಶದಲ್ಲಿನ ಪೆಟ್ರೋಲ್ ಲಾಬಿಯ ಕೆಲಸ ಎಂದು ಸ್ವತಃ ಗಡ್ಕರಿ ಹೇಳುತ್ತಾರೆ. ಬರುವ ದಿನಗಳಲ್ಲಿ ಏಥನೊಲ್ ಮಿಶ್ರಣ ಪ್ರಮಾಣವನ್ನು ಈಗಿನ ಶೇ 20 ರಿಂದ ಶೇ 27 ಕ್ಕೆ ಏರಿಸುವ ಮಾತೂ ಆಡಿದ್ದಾರೆ.
ಇದನ್ನೂ ನೋಡಿ: ಏನ್ ಸರ್ (SIR) ಇದು! ಮತದಾನದ ಹಕ್ಕಿಗೆ ಯಾಕೆ ಕೊಕ್ಕೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
ಐದು ವರ್ಷ ಮೊದಲೇ ಗುರಿ ಸಾಧಿಸಿದ ಸರ್ಕಾರ ಬಳಕೆದಾರರಿಗೆ ಇದರ ಲಾಭದ ಮನದಟ್ಟು ಮಾಡಿಕೊಟ್ಟು ನಂತರ ಅನುಷ್ಠಾನ ಮಾಡುವ ತಾಳ್ಮೆ ಯಾಕೆ ತೋರಲಿಲ್ಲ ಎಂಬ ಪ್ರಶ್ನೆ ದೊಡ್ಡದಾಗಿ ಎದ್ದಿದೆ. ನಿಜವಾಗಿ ಸರ್ಕಾರ ಹೇಳುವ ಲಾಭಗಳು ಇದ್ದಿದ್ದರೆ ಅವುಗಳನ್ನು ವಿವರಿಸಿ ಜನರಿಗೆ ಮನದಟ್ಟು ಮಾಡಿಕೊಟ್ಟು ನಂತರ ಜಾರಿಗೆ ತರಬಹುದಿತ್ತಲ್ಲವೇ?
ಇದೊಂದು ದೊಡ್ಡ ಹಗರಣ ಎಂಬ ಸಂದೇಹ ಬರುವುದೇ ಈ ಕಾರಣಕ್ಕಾಗಿ.
(ದಿ ವಯರ್ ಜಾಲತಾಣ ಪತ್ರಿಕೆಯ ಕ್ರಾಕ್ಕಾನೋಮಿಕ್ಸ್ ಅಂಕಣದ ವೀಡಿಯೋದ ಮತ್ತು ವಿವಿಧ ಮೂಲಗಳ ಆಧಾರದಿಂದ)
