ಪ್ರತಿಯೊಂದು ಪಯಣದಂತೆ ಈ ಪಯಣವೂ ಕೂಡ ಅಂತ್ಯವಾಗಿದೆ: ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್‌ ಟೀಮ್ ನ ಮಾಜಿ ನಾಯಕಿ , ಏಕದಿನ ಪಂದ್ಯದ ನಾಯಕಿ ,ಬಲಗೈ ಬ್ಯಾಟರ್‌ ಮಿಥಾಲಿ ರಾಜ್ ಇಂದು  (8ಜೂನ್)ರಂದು  ಅಂತರರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಟೀಮ್ ಇಂಡಿಯಾ ಪರ ಸುಮಾರು 23 ವರ್ಷಗಳ ಕಾಲ ಕ್ರಿಕೆಟ್​ ಆಡಿದ್ದ ಮಿಥಾಲಿ ರಾಜ್‌  ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು. ಭಾರತದ ಪರ 232 ಏಕದಿನ ಪಂದ್ಯಗಳು ಮತ್ತು 50.68 ಸರಾಸರಿಯಲ್ಲಿ 7805 ರನ್ ಗಳಿಸಿದ್ದರು. ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಭಾರತಕ್ಕಾಗಿ 333 ಪಂದ್ಯಗಳಿಂದ 10,868 ರನ್ ಗಳಿಸುವ ಮೂಲಕ  2ನೇ ಸ್ಥಾನ ಪಡೆದಿದ್ದರು

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಮಹಿಳಾ ಆಟಗಾರ್ತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಇಂದು 8 ಜೂನ್‌ ಮಧ್ಯಾಹ್ನ ಮಿಥಾಲಿ ರಾಜ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ವಿದಾಯದ ಕುರಿತು ತಿಳಿಸಿದ್ದಾರೆ.

ತನ್ನ 39ನೇ ವಯಸ್ಸಿನಲ್ಲಿ ವೃತ್ತಿ ಬದುಕಿಗೆ ವಿಧಾಯ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಿಥಾಲಿ, ‘ಮೊಟ್ಟ ಮೊದಲ ಬಾರಿಗೆ ನೀಲಿ ಬಣ್ಣದ ಜರ್ಸಿ ತೊಟ್ಟು ನಾನು ನನ್ನ ದೇಶವನ್ನು ಪ್ರತಿನಿಧಿಸಿದ್ದಾಗ ಪುಟ್ಟ ಬಾಲಕಿಯಾಗಿದ್ದೆ. ಅತ್ಯಂತ ದೀರ್ಘ ಕಾಲದ ನನ್ನ ಕ್ರಿಕೆಟ್ ಪಯಣದಲ್ಲಿ ಸಾಕಷ್ಟು ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದೇನೆ. 23 ವರ್ಷಗಳ ನನ್ನ ವೃತ್ತಿ ಜೀವನ, ನನ್ನ ಜೀವನದ ಅತ್ಯುನ್ನದ ಕ್ಷಣಗಳಲ್ಲಿ ಒಂದಾಗಿದೆ. ಪ್ರತಿಯೊಂದು ಪಯಣಗಳ ಶುರುವಿನ ನಂತರದ ಅಂತ್ಯದಂತೆ  ಈ ಪಯಣವೂ ಕೂಡ ಅಂತ್ಯವಾಗಿದೆ ಹಾಗೂ ಇಂದು ನಾನು ಅಂತರ್‌ ರಾಷ್ಟ್ರೀಯ ಕ್ರಿಕೆಟ್‌ನಎಲ್ಲಾ ಮಾದರಿಗಳಿಗೆ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

1999 ರಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಬಳಿಕ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದರು. ಅಲ್ಲದೆ ಇವರ ನಾಯಕತ್ವದಲ್ಲಿ ಭಾರತವು 2005 ಹಾಗೂ 2017 ರ ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್‌ಗೆ ತಲುಪಿತ್ತು ಎಂಬುದು ವಿಶೇಷ.

 

ಪ್ರಶಸ್ತಿ:2003ರಲ್ಲಿ ಅರ್ಜುನ ಪ್ರಶಸ್ತಿ.2015 ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಾಮ್‌ ಮುಖರ್ಜಿ ರವರಿಂದ ಪದ್ಮಶ್ರೀ ಪ್ರಶಸ್ತಿ, 2012ರಲ್ಲಿ ಯೂತ್ ಸ್ಪೋರ್ಟ್ಸ್ ಐಕಾನ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಮತ್ತು ವರ್ಷದ ವೋಗ್ ಕ್ರೀಡಾಪಟು.2021 ರಲ್ಲಿ ಧ್ಯಾನ್ ಚಂದ್  ಖೇಲ್‌ ರತ್ನ ಪ್ರಶಸ್ತಿ ಗಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *