ಬೆಂಗಳೂರು: ರಿಕವರಿ ಮಾಡಿದ್ದ ಚಿನ್ನ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ನಗರದ ಕಾಟನ್ ಪೇಟೆ ಠಾಣೆಯ ಪಿಎಸ್‌ಐ ಓರ್ವರನ್ನು ಅಮಾನತು ಮಾಡಿರುವ ಘಟನೆ ನಡೆದಿದೆ. ಸಂತೋಷ್ ಅಮಾನತುಗೊಂಡಿರುವ ಪಿಎಸ್‌ಐ. ಬೆಂಗಳೂರು
ಕಮಿಷನರ್ ದಯಾನಂದ್ ಸಂತೋಷ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅವರು 2022ರಲ್ಲಿ ಹೊಸೂರು ಗೇಟ್ ಠಾಣೆ ಪಿಎಸ್‌ಐ ಆಗಿದ್ದಾಗ ಕೇಸ್ ವೊಂದರಲ್ಲಿ ರಿಕವರಿ ಮಾಡಿದ್ದ ಚಿನ್ನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: 3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ: ಲಕ್ಷ್ಮೀ ಹೆಬ್ಬಾಳಕರ್
ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದೆ ಎಂದು ಹೇಳಿ 950 ಗ್ರಾಂ ಚಿನ್ನದ ಗಟ್ಟಿ ಕೊಡು ಫೋಟೋ ತೆಗೆಸಿ ಹಿಂದಿರುಗಿಸುತ್ತೇನೆ ಎಂದು ಹೇಳಿ ಚಿನ್ನದ ಗಟ್ಟಿ ಪಡೆದು ಎಸ್ಕೇಪ್ ಆಗಿದ್ದರು. ಬಳಿಕ ಅಂಗಡಿ ಮಾಲೀಕ ಚಿನ್ನ ಕೇಳಿದಾಗ ಹಣ ಕೊಡುತ್ತೇನೆಂದು ಚೆಕ್ ಕೊಟ್ಟಿದ್ದರು.
ಕೊಟ್ಟ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಚಿನ್ನದ ಅಂಗಡಿ ಮಾಲೀಕ ಕೇಳಿದಾಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ ಐ ಮೇಲೆ ದೂರು ದಾಖಲಾಗಿತ್ತು. ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪಿಎಸ್ ಐ ಸಂತೋಷ್ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ನೋಡಿ: ಮಾದೇಶ್ವರ ಮತ್ತು ಮಂಟೇಸ್ವಾಮಿ ಬಗ್ಗೆ ನಮಗೆಷ್ಟು ಗೊತ್ತು? Janashakthi Media