ನಾಪತ್ತೆಯಾಗಿದ್ದ ಅಂಗನವಾಡಿ ಕಾರ್ಯಕರ್ತೆ ಶವವಾಗಿ ಪತ್ತೆ; ಕೊಲೆ ಶಂಕೆ

ಖಾನಾಪುರ: ಅಕ್ಟೋಬರ್‌ 5ರಂದು ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ ಬಳಿ ಸೇತುವೆಯೊಂದರ ಕೆಳಗೆ ತಾಲ್ಲೂಕಿನ ನಂದಗಡ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಪಾಟೀಲ (50) ಅವರ ಶವ ಪತ್ತೆಯಾಗಿದೆ. ಅಂಗನವಾಡಿ

ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಅಶ್ವಿನಿ ಅವರ ಶವದ ಮುಖ ಮತ್ತು ತಲೆಯ ಭಾಗದಲ್ಲಿ ಗಾಯದ ಗುರುತುಗಳಿವೆ.

ಇದನ್ನೂ ಓದಿ: 2023ರ ಸೈಬ‌ರ್ ಅಪರಾಧ ಪ್ರಕರಣ: ಶೇ.51 ರಷ್ಟು ಪಾಲು ಬೆಂಗಳೂರಿನಲ್ಲೇ ವರದಿ

ಅಶ್ವಿನಿ ಅವರು ಅಕ್ಟೋಬರ್.2 ರಂದು ನಂದಗಡದಿಂದ ಕಕ್ಕೇರಿ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗದ ಕಾರಣ ಅವರ ಕುಟುಂಬದ ಸದಸ್ಯರು ನಂದಗಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಭಾನುವಾರ ಪತ್ತೆಯಾದ ಅವರ ಶವದ ಬಳಿ ಅವರ ಮೊಬೈಲ್ ದೊರೆತಿದ್ದು, ಅದರಲ್ಲಿರುವ ಕೆಲವು ಸಂದೇಶಗಳು ಅವರ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ನೋಡಿ: ನಿಮ್ಮ ಶ್ವಾನಕ್ಕೆ ನೀವೇ ತರಬೇತಿ ನೀಡಿ . ಡಾ : ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *