ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಮಿಸ್‌ : ದೆಹಲಿಯತ್ತ ಪ್ರಯಾಣ ಬೆಳೆಸಿದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ದೆಹಲಿಗೆ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಗದೀಶ್ ಶೆಟ್ಟರ್ ದೆಹಲಿಗೆ ಪ್ರಯಾಣ ಬೆಳೆಸಿದರು.

ಮೊದಲ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಅವರ ಹೆಸರು ಇರದ ಕಾರಣ ಸಾಕಷ್ಟು ಅವರ ಅಭಿಮಾನಿಗಳು ಶೆಟ್ಟರ್ ನಿವಾಸಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದರು‌. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಜೆ ಫೋನ್ ಮಾಡಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಶೆಟ್ಟರ್ ದೂರವಾಣಿಯಲ್ಲಿಯೇ ನಿನ್ನೆ ನಡ್ಡಾ ಜೊತೆಗೆ ಮಾತನಾಡಿದ್ದು ಅವರ ಸ್ಟ್ಯಾಂಡ್ ನಾನು ತಿಳಿಸಿದ್ದರು ಎನ್ನಲಾಗಿದೆ‌.

ತಮಗೆ ಟಿಕೆಟ್ ಸಿಗೋ ಹೋಪ್ಸ್ ಇಟ್ಟುಕೊಂಡು ದೆಹಲಿಗೆ ಹೊರಟಿದ್ದಾರೆ. ದೆಹಲಿಗೆ ಹೋಗುವ ಮುನ್ನ ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, “ರಾಷ್ಟ್ರೀಯ ನಾಯಕರು ದೆಹಲಿಗೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಯಡಿಯೂರಪ್ಪ ಅವರನ್ನ ಭೇಟಿಯಾಗಬೇಕಿತ್ತು. ಆದರೆ, ಬೇಗ ಹೋಗಬೇಕಾಗಿರುವ ಕಾರಣ ಬೆಂಗಳೂರು ಏರ್ಪೋರ್ಟ್ ನಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ಮಂತ್ರಿ ಸ್ಥಾನ ಸಿಗದಿದ್ದರೂ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕೆಲಸ ಮಾಡುವುದಕ್ಕೆ ಮಂತ್ರಿ ಸ್ಥಾನವೇ ಬೇಕು ಅಂತೇನಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಯಕರಿಂದ ಪಾಸಿಟಿವ್ ರೆಸ್ಪಾನ್ಸ್ ಬರಬಹುದು” ಎಂದು ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯ ಮಾಡಲು ಅಧಿಕಾರ ಮುಖ್ಯವಲ್ಲ, ನಾನು ಮುಖ್ಯಮಂತ್ರಿ ಆಗಿ ಸಭಾಪತಿ ಆಗಿ ಹಾಗೂ ಆರು ಸಲ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಆದರೆ ಈಗ ಟಿಕೆಟ್ ಮೊದಲ ಪಟ್ಟಿಯಲ್ಲಿ ಕೈ ಬಿಟ್ಟಿದ್ದು ಯಾವ ಕಾರಣ ಅಂತಾ ಗೊತ್ತಿಲ್ಲದ ಕಾರಣ ದೆಹಲಿಗೆ ಹೋದ ನಂತರ ಗೊತ್ತಾಗಲಿದೆ ಎಂದರು.

ಬಿಎಸ್ ವೈ ಭೇಟಿ ಮಾಡುವೆ :
ಯಡಿಯೂರಪ್ಪನವರನ್ನು ಭೇಟಿಯಾಗಬೇಕಿತ್ತು. ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗ್ತಾ ಇದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್‌ವೈ ಭೇಟಿ ಮಾಡುತ್ತೇನೆ. ಯಾವುದೇ ಸ್ಥಾನಮಾನ ಇಲ್ಲದೆ ಎರಡು ವರ್ಷದಿಂದ ಪಕ್ಷದಲ್ಲಿ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ ಎಂದರು.
ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ. ಯಾವುದೇ ಕಾರಣದಲ್ಲಿ ನಾನೂ ನಿವೃತ್ತಿ ಘೋಷಣೆ ಮಾಡಲು ಸಿದ್ದನಿದ್ದೆ. ಆದ್ರೆ ರಾಜಕಾರಣದಲ್ಲಿ ಗೌರವಿತವಾಗಿ ಹೊರಗಡೆ ಹೋಗಬೇಕು. ಆದರೆ ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ನನ್ನ ಸಾಫ್ಟ್ ಕಾರ್ನರ್ ನನ್ನನ್ನು ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬಂದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾದ ನಂತರ ನನ್ನ‌ ನಿರ್ಧಾರ ಪ್ರಕಟಿಸುತ್ತೇನೆ. ವರಿಷ್ಠರ ಭೇಟಿ ನಂತರ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ – ಮಾಜಿ ಸಿಎಂ ಜಗದೀಶ್ ಶೆಟ್ಟರ್

ಖುದ್ದು ರಾಷ್ಟ್ರೀಯ ಅಧ್ಯಕ್ಷರೇ ಫೋನ್ ಮಾಡಿದ್ದರಿಂದ ದೆಹಲಿಗೆ :
ದೆಹಲಿ ಪ್ರಯಾಣದ ಮುನ್ನ ಮಾಧ್ಯಮದ ಜೊತೆಗೆ ಮಾತನಾಡಿದ ಶೆಟ್ಟರ್, ಯಡಿಯೂರಪ್ಪನವರನ್ನು ಭೇಟಿಯಾಗಬೇಕಿತ್ತು, ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗ್ತಾ ಇದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್‌ವೈ ಭೇಟಿ ಮಾಡುತ್ತೇನೆ. ಯಾವುದೇ ಸ್ಥಾನಮಾನ ಇಲ್ಲದೆ ಎರಡೂ ವರ್ಷದಿಂದ ಪಕ್ಷದಲ್ಲಿ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ ಎಂದರು.

ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ. ಯಾವುದೇ ಕಾರಣದಲ್ಲಿ ನಾನೂ ನಿವೃತ್ತಿ ಘೋಷಣೆ ಮಾಡಲು ಸಿದ್ದನಿದ್ದೆ. ಆದ್ರೆ ರಾಜಕಾರಣದಲ್ಲಿ ಗೌರವಿತವಾಗಿ ಹೊರಗಡೆ ಹೋಗಬೇಕು. ಆದರೆ ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ನನ್ನ ಸಾಪ್ಟ್ ಕಾರ್ನರ್ ನನ್ನನ್ನು ಇಲ್ಲಿಯವರೆಗೆ ಬಂದಿದೆ. ರಾಷ್ಟ್ರ ಅಧ್ಯಕ್ಷರನ್ನ ಭೇಟಿಯಾದ ನಂತರ ನನ್ನ‌ ನಿರ್ಧಾರ ಪ್ರಕಟಿಸುತ್ತೇನೆ. ವರಿಷ್ಠರ ಭೇಟಿ ನಂತರ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು

Donate Janashakthi Media

Leave a Reply

Your email address will not be published. Required fields are marked *