ಮಧ್ಯಪ್ರದೇಶ: ಮಧ್ಯಪ್ರದೇಶದ ವಿಜಯಪುರ ವಿಧಾನಸಭಾ ಕ್ಷೇತ್ರದ ಗೋಥಾ ಗ್ರಾಮದಲ್ಲಿ ಉಪಚುನಾವಣೆ ಬೆನ್ನಲೇ ದಲಿತ ಇಡೀ ಗ್ರಾಮಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಆಥಾತಕಾರಿ ಘಟನೆ ನಡೆದಿದೆ.
ವಿಧಾನಸಭೆಯ ಉಪಚುನಾವಣೆ ಬುಧವಾರದಂದು ನಡೆದ ಬೆನ್ನಲ್ಲೇ ದುಷ್ಕರ್ಮಿಗಳು ಗುರುವಾರ ದಲಿತರ ಪ್ರಾಬಲ್ಯ ಇರುವ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ದುಷ್ಕೃತ್ಯ ನಡೆಸಿದ್ದಾರೆ. ಗ್ರಾಮಸ್ಥರು ಆಶ್ರಯ ಪಡೆಯಲು ಪೊಲೀಸ್ ಠಾಣೆ ಪ್ರವೇಶಿಸಿದರು.
ಇದನ್ನೂ ಓದಿ: ಶಿಕ್ಷಕಿಯ ಕುರ್ಚಿಯ ಕೆಳಗೆ ಬಾಂಬ್ ಫಿಕ್ಸ್ ಮಾಡಿದ ವಿದ್ಯಾರ್ಥಿಗಳು
ವಿಜಯಪುರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾರಣ ನಿರ್ಮಾಣವಾಗಿದೆ. ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಇದು ವಿಕೋಪಕ್ಕೆ ತಿರುಗಿದೆ. ಕನಿಷ್ಠ ಮೂವರಿಗೆ ಗಾಯಗಳಾಗಿವೆ.
ಇದನ್ನೂ ನೋಡಿ: ಯುದ್ಧ : ವಿಶ್ವ ಕಾರ್ಪೊರೇಟ್‌ಗಳ ಸಂಚು – ಡಾ. ಅಮರ್ ಕುಮಾರ್ Janashakthi Media