ಮೈಸೂರು : ಮೀಸಲಾತಿ ಬದಲಾವಣೆಗಾಗಿ ಹಲವು ಸಮುದಾಯಗಳು ಹೋರಾಟ ಮಾಡುತ್ತಿದ್ದರೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದರೇ ಆದ ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೀಸಲಾತಿ ಬದಲಾವಣೆ ವಿಚಾರವಾಗಿ ಎರಡು ಸಮುದಾಯಗಳು ಪ್ರಭಲ ಹೋರಾಟ ನಡೆಸುತ್ತಿವೆ. ರಾಜ್ಯ ಸರಕಾರ ಅವರಿಗೆ ಸ್ಪಷ್ಟ ಸಂದೇಶ ನೀಡದೆ ದಿನ ದೂಡುತ್ತಿದೆ. ಸರಕಾರದ ಈ ಬೇ ಜವಬ್ದಾರಿ ನಾಳೆ ಸರಕಾರವನ್ನು ಬೀದಿಗೆ ತಂದು ನಿಲ್ಲಿಸುತ್ತದೆ ಎಂದು ಎಚ್ಚರಿಸಿದರು.
ಪಂಚಮಸಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸಿ ಎಂದು ತಿರುಗಿಬಿದ್ದಿದ್ದಾರೆ. ಅವರನ್ನ ಸೇರಿಸುತ್ತೀರೇನೊ..? 2ಎ ಅಲ್ಲಿ ಇರುವವರಿಗೆ ಹಾಗಿದ್ರೆ ಮೀಸಲಾತಿ ಹೆಚ್ವು ಮಾಡ್ತಿರಾ..? ಹಾಗೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೆ..? ಈ ವಿಚಾರವಾಗಿ ಸರ್ಕಾರದ ಸ್ಪಷ್ಟ ನಿಲುವು ಬೇಡವೆ..? ಈ ವಿಚಾರದಲ್ಲಿ ಎಲ್ಲರೂ ಗೊಂದಲದಲ್ಲಿ ಇದ್ದೇವೆ. ಸರ್ಕಾರ ಬಂದು ಎರಡು ವರ್ಷ ಆದರೂ ಎಲ್ಲೆಲ್ಲಿ ನಾಯಕತ್ದ ಕೊರತೆ ಇದೆ ಜನಾಂಗ ಸಮಸ್ಯೆ ಇದೆ, ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನ ಅಲೋಚನೆ ಮಾಡಿದ್ದೇರೇನು..? ಎಂದು ಕಿಡಿಕಾರಿದರು.
ಇದು ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಇದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ,ಸಮಿತಿ ರಚನೆ ಮಾಡಿ ಅದನ್ನು ಜಾರಿಗೆ ತರಲು ದಾಖಲೆ ಕೊಡಿ, ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಇದು ಮಾತ್ರ ನಮ್ಮಿಂದ ಸಾಧ್ಯ ಅಂತ ಸರ್ಕಾರ ಹೋರಾಟಗಾರರಿಗೆ ಹೇಳಿದೆಯೇ..? ವೇದಿಕೆಯಲ್ಲಿ ಕೇಳಿದಾಗಲೆಲ್ಲಾ ಮೀಸಲಾತಿ ಕೊಡಲು ಆಗಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೀರಾ.? ಇದನ್ನ ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸರಕಾರಕ್ಕೆ ಸಲಹೆ ನೀಡಿದರು.
ಸರಕಾರ ಬಂದು ಎರಡು ವರ್ಷ ಆದರೂ ಎಲ್ಲೆಲ್ಲಿ ನಾಯಕತ್ವದ ಕೊರತೆ ಇದೆ, ಜನಾಂಗ ಸಮಸ್ಯೆ ಇದೆ, ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನು ಅಲೋಚನೆ ಮಾಡಿದ್ದೀರಾ ? ಎಂದು ಸರಕಾರಕ್ಕೆ ಪ್ರಶ್ನಿಸಿದರು.
ಕೊವೀಡ್ ನಿಂದ ರಾಷ್ಟ್ರ ತತ್ತರಿಸಿ ಹೋಗಿದೆ. ರೈತರ ದೊಡ್ಡ ಚಳುವಳಿಯಾಗುತ್ತಿದೆ. ಎಂಪಿಗಳ ಸಂಬಳ ಕಡಿತವಾಗಿದೆ. ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಮೋದಿಯವರ ಮೇಲೆ ವಿಶ್ವಾಸವಿಟ್ಟು ಜನ ಎರಡನೇ ಬಾರಿ ಗೆಲ್ಲಿಸಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ನಾವು ಪಕ್ಷದ ಸಂಘಟನೆಗೆ ದುಡಿದಿರುವಂತವರು, ಕಾರ್ಯಕಾರಣಿಯಲ್ಲಿರುವವರು. ನಮ್ಮ ಬಿಚ್ಚು ಮನಸ್ಸಿನ ಸಲಹೆ ನಾಯಕರಿಗೆ ತಿಳಿಸೋಣ. ಮೀಸಲಾತಿ ವಿಚಾರವಾಗಿ ಸರ್ಕಾರ ಹಿಂದೇಟು ಹಾಕದೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನಮ್ಮ ಹೇಳಿಕೆಗಳು ಸ್ಪಷ್ಟವಾಗಿರಬೇಕು ಎಂದರು