ಚಿತ್ರದುರ್ಗ : ರಾಜ್ಯ ಸರ್ಕಾರದ ವಿರುದ್ಧ ಇದೀಗ ಗುತ್ತಿಗೆದಾರರು ಸಿಡಿದೆದಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜ್ ಅವರ ಮಗ ಹಸ್ತಕ್ಷೇಪ ಮಾಡುತ್ತಿದ್ದರೆ, ಲೋಕೋಪಯೋಗಿ ಸಚಿವರಾದ ಜಾರಕಿಹೊಳಿ ಅವರ ಮಗನದ್ದೇ ಕಾರು ಬಾರು ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಚಿವರ
ಎಲ್ಲಾ ಇಲಾಖೆಗಳಲ್ಲಿ ಕಾಣದ ಕೈಗಳು ಹಾಗೂ ಸಚಿವರ ಸಂಬಂಧಿಗಳು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಸ್ವತಃ ಗುತ್ತಿಗೆದಾರರೇ ಆರೋಪಿಸಿದ್ದಾರೆ.
ಹೌದು, ವಿವಿಧ ಇಲಾಖೆಗಳಲ್ಲಿ ಸಚಿವರ ಸಂಬಂಧಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವರಿಗೆ ರಾಜ್ಯ ಗುತ್ತಿಗೆದಾರರ ಅಧ್ಯಕ್ಷ ಆರ್. ಮಂಜುನಾಥ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಸಚಿವರ
ಈ ಕುರಿತು ಗುತ್ತಿಗೆದಾರರ ರಾಜ್ಯ ಅಧ್ಯಕ್ಷ ಆರ್. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಇದುವರೆಗೂ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಸರಿಯಾದ ಪೇಮೆಂಟ್ ಆಗುತ್ತಿಲ್ಲ. ನಮ್ಮ ಸಣ್ಣ ಗುತ್ತಿಗೆದಾರರಿಗೆ ತುಂಭಾ ಸಮಸ್ಯೆ ಆಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ತೊಂದರೆ ಇದೆ. ಸಿಎಂ ಮತ್ತು ಡಿಸಿಎಂ ಹಾಗೂ ಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಯಾರ್ಯಾರೂ ಕೂಡಾ ಸಣ್ಣ ಗುತ್ತಿಗೆದಾರರ ಕಡೆ ಗಮನ ಹರಿಸಿಲ್ಲ. ಜೇಷ್ಠತೆ ಕೂಡಾ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ.. ಲೋಕೋಪಯೋಗಿ ಸಚಿವರಾದ ಜಾರಕಿಹೊಳಿ ಸಾಹೇಬ್ರು ಬಗ್ಗೆ ಗೌರವ ಇದೆ. 3-4 ತಿಂಗಳಿಂದ ಅವರ ಸಂಬಂಧಿಯೊಬ್ಬರು ಇಲಾಖೆಯಲ್ಲಿ ತಲೆ ಹಾಕಿದ್ದಾರೆ. ಸಿನಿಯಾರಿಟಿ ಪ್ರಕಾರ ಪೇಮೆಂಟ್ ಮಾಡಲು ಸಚಿವರು ನಿರ್ಧಾರ ಮಾಡಿರ್ತಾರೆ. ಅದನ್ನ ಬದಲಾವಣೆ ಮಾಡಿ ಮಧ್ಯ ಸಂಬಂಧಿ ಪೇಮೆಂಟ್ ಮಾಡಿಸುತ್ತಾರೆ. ಸೆಕ್ರೆಟರಿಗಳನ್ನ ಕೇಳಿದ್ರು ಕೂಡಾ ನಮಗೆ ಗೊತ್ತಿಲ್ಲ ಅಂತಾರೇ, ಮತ್ಯಾರಿಗೆ ಗೊತ್ತು. ಸಣ್ಣ ಗುತ್ತಿಗೆದಾರರಿಗೆ 5-50 ಲಕ್ಷ ಇವರುವವರಿಗೆ ಪೇಮೆಂಟ್ ಕ್ಲಿಯರ್ ಆಗಬೇಕು. ಜೇಷ್ಟತೆ ಆಧಾರದಲ್ಲಿ ಗುತ್ತಿಗೆದಾರರ ಬಿಲ್ ಕ್ಲಿಯರ್ ಆಗಬೇಕು. ಸಂಬಂಧಿಗಳ ಹಾವಳಿಯನ್ನು ಸಚಿವರು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಡಿಸಿಎಂ ಡಿಕೆಶಿ ಅವರು 3 ನೇ ತಾರೀಖು ಮೀಟಿಂಗ್ ಮಾಡಿದ್ದರು. ಎಲ್ಲಾ ಎಂಡಿಗಳಿಗೂ ನಾವು ಪತ್ರ ಬರೆದರು ಕೂಡಾ ಪ್ರಯೋಜನ ಇಲ್ಲ. ಬಲಾಢ್ಯರಿಗೆ 100-150 ಕೋಟಿ ಪೇಮೆಂಟ್ ಮಾಡುತ್ತಿದ್ದಾರೆ. ಸಣ್ಣ ಕಂಟ್ರಾಕ್ಟರ್ ಗಳಿಗೆ ಮಾತ್ರ ಪೇಮೆಂಟ್ ಮಾಡುತ್ತಿಲ್ಲ. ಡಿಸಿಎಂ ಡಿಕೆಶಿ ಅವರ ಜಲ ಸಂಪನ್ಮೂಲ ಇಲಾಖೆಯಲ್ಲೂ ಯಾವುದೇ ಪೇಮೆಂಟ್ ಮಾಡಿಲ್ಲ, ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜ್ ಅವರ ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅನುದಾನದ ವಿಷ್ಯದಲ್ಲಿ, ಪೇಮೆಂಟ್ ಮಾಡುವ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸರ್ಕಾರದಲ್ಲಿ ಸಚಿವರ ಸಂಬಂಧಿಗಳ ಹಸ್ತಕ್ಷೇಪಕ್ಕೆ ಆರ್. ಮಂಜುನಾಥ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ : ಬ್ಯಾಟಿಂಗ್ ಪಿಚ್‌ನಲ್ಲಿ RR ಸೋತಿದ್ದ್ಯಾಕೆ? DC ಓಟಕ್ಕೆ ಬ್ರೇಕ್ ಹಾಕುತ್ತಾ RCB! #ipl2025 #RCB #DC ಸಚಿವರ