ಬೆಂಗಳೂರು: ರಾಜ್ಯದಲ್ಲಿ ಪಿಎಸ್‌ಐ ಮತ್ತು ಕೆಇಎ ಪರೀಕ್ಷೆ ಅಕ್ರಮದ ಬಿಸಿ ಕಾವೇರುತ್ತಿದೆ. ಇದಕ್ಕೆಲ್ಲ ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂಬ ಆರೋಪ ಮಾಡುತ್ತಿರುವ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರ ಮಾಡಿದ್ದು ನೀವು, ತಿಂದು ತೇಗಿದ್ದು ನೀವು, ರಾಜೀನಾಮೆ ಮಾತ್ರ ನಾನು ಕೊಡ್ಬೇಕಾ? ಎಂದು ಚಾಟಿ ಬೀಸಿದ್ದಾರೆ.
ನವೆಂಬರ್-09 ರಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ ಡಿ ಪಾಟೀಲ್ ನನ್ನ ಆಪ್ತ ಎಂಬ ಬಿಜೆಪಿ ಆರೋಪಕ್ಕೆ, ಬಿಜೆಪಿಯವರು ಈಗ ಏರು ಧ್ವನಿಯಲ್ಲಿ ಮಾತನಾಡ್ತಿದ್ದಾರೆ. ಮೊದಲೇ ಮಾತನಾಡಿದ್ದಿದ್ರೆ ಪ್ರತಿಪಕ್ಷ ನಾಯಕರು ಸಿಗ್ತಿದ್ರೇನೋ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಪಿಎಸ್ಐ ಹಗರಣ: ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ – ಸಚಿವ ಪ್ರಿಯಾಂಕ್ ಖರ್ಗೆ
ಹಲವು ನಾಯಕರು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದನ್ನು ಕೇಳಿ ಸಂತೋಷವಾಗಿದೆ. ಅವರು ನನಗೆ ತೋಡಿದ ಖೆಡ್ಡಾದಲ್ಲಿ ಅವರೇ ಬೀಳ್ತಿದ್ದಾರೆ. ಅವರೇ ತಿಂದು ತೇಗಿದವರು. ಇಂದು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ ಇದೆ. ಕಿಯೋನಿಕ್ಸ್ ನಲ್ಲಿ ದೊಡ್ಡ ಅಕ್ರಮ ಅನ್ನುತ್ತಿದ್ದಾರೆ. ಇವರು ಮಾಡಿದ ಅಕ್ರಗಳು ಒಂದೊಂದಾಗಿ ಬರ್ತಿದೆ ಈಗ. ಥರ್ಡ್ ಪರ್ಟಿ ಆಡಿಟ್ ಆಗದೆ ಇರೊ 16 ಕೋಟಿ ಟೆಂಡರ್ ಮಾತ್ರ ಬಾಕಿ ಇದೆ ಇನ್ನೆಲ್ಲವನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ.
ಕಿಯೋನಿಕ್ಸ್ ನಲ್ಲಿ ಅಕ್ರಮ ಅಂತಿದಾರಲ್ಲ ಅವರು ಮಾಡಿರೋ ಅಕ್ರಮವನ್ನೇ ಈಗ ಆಡಿಟ್ ಮೂಲಕ ಬಯಲಿಗೆಳೆಯುತ್ತಿದ್ದೇವೆ. ಸುಮಾರು 500 ಕೋಟಿ ಅಷ್ಟು ಅವ್ಯವಹಾರ ಆಗಿದೆ. ಇದು ಜನತೆಯ ದುಡ್ಡು ಅಲ್ವೇ? ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. 1 ಲಕ್ಷ ಇರೋದಕ್ಕೆ 5 ಲಕ್ಷ ಕೊಟ್ಟು ಖರೀದಿಸಿದ್ದಾರೆ. 38% ನಿಂದ 1770% ವರೆಗೆ ಅಕ್ರಮವೆಸಗಿದ್ದಾರೆ. 3000 ಬೆಲೆ ಬಾಳುವುದನ್ನ 60 ರೂ ಗೆ ಮಾರಿದ್ದಾರೆ. 30 ಸಾವಿರದ ಕಂಪ್ಯೂಟರ್ ಅನ್ನು 80 ಸಾವಿರ ರೂ ಬೆಲೆ ಕೊಟ್ಟು ಖರೀದಿಸಿದ್ದಾರೆ. ಸಿಸಿಟಿವಿ 12 ಸಾವಿರ ಇರುವುದಕ್ಕೆ 60 ಸಾವಿರ ರೂ ಕೊಟ್ಟಿದ್ದಾರೆ. ಕಂಪ್ಯೂಟರ್ ಡೆಸ್ಟ್ 1.4 ಲಕ್ಷಕ್ಕೆ ಖರೀದಿಸಿದ್ದಾರೆ. ಎಂಎಸ್ ಆಫೀಸ್ 13ಗೆ 5000 ಆಗಬಹುದು. 2.74 ಲಕ್ಷ ರೂ ಕೊಟ್ಟು ಪರ್ಚೇಸ್ ಮಾಡಿದ್ದಾರೆ. ಇವೆಲ್ಲವೂ ಬಿಜೆಪಿ ಅವಧಿಯಲ್ಲಿ ಮಾಡಿರುವುದು. ಇದನ್ನ ಥರ್ಡ್ ಪಾರ್ಟಿ ಇನ್ಸ್ ಪೆಕ್ಷನ್ ಇಲ್ಲದೆ ದುಡ್ಡು ಕೊಟ್ಟಿದ್ದಾರೆ ಎಂದು ಆರೋಪಿಸಿದರು.