ಬೆಂಗಳೂರು : ಮುಡಾ ಹಗರಣಕ್ಕೆ ಸಬಂಧಿಸಿದಂತೆ ಇಡಿ ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದಿರುವ ವಿಚಾರವಾಗಿ, ಬಿಜೆಪಿಯವರ ಹಗರಣಗಳನ್ನು ಮುಚ್ಚಿ ಹಾಕಲು ಪತ್ರ ಸೋರಿಕೆ ಮಾಡಿದ್ದಾರೆ. ಇವರು ದೆಹಲಿಗೆ ಹೋಗಿದ್ದು, ಭಿನ್ನಮತ ಸೆಟಲ್ ಮಾಡಲು ಅಲ್ಲ. ಹೈಕಮಾಂಡ್ ಕೈಕಾಲು ಹಿಡಿದು ಈ ಪತ್ರ ಲೀಕ್ ಮಾಡಿಸಿದ್ದಾರೆ.
ಇಡಿ ಪತ್ರವನ್ನು ನಾವು ಒಪ್ಪುವುದಿಲ್ಲ. ಈ ಪತ್ರದ ಬಗ್ಗೆಯೂ ಒಂದು ತನಿಖೆ ಆಗಬೇಕು. ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದರು.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 5 ಮಹಿಳೆಯರ ಬಂಧನ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ʼಇಡಿ ಸಿಬಿಐ ಐಟಿ ಕೇಂದ್ರ ಸರ್ಕಾರದ ಕೈಗಾಂಬೆಗಳಾಗಿವೆ. ಬಿಜೆಪಿ ದುರ್ಬಲ ಇರುವ ರಾಜ್ಯಗಳಲ್ಲಿ, ಭೂ ಬಿಡುತ್ತಾರೆ ಸಿಬಿಐ, ಐಟಿ, ಇಡಿ ಅಧಿಕಾರಿಗಳನ್ನು ಭೂ ಬಿಡುತ್ತಾರೆ. ಕೇಂದ್ರದವರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿದ್ದಾರೆ. ಇಡಿ ಕೇಂದ್ರ ಸರ್ಕಾರದ ಪಾಲಿಟಿಕಲ್ ಟೂಲ್ ಆಗಿದೆ. ಇಡಿ ಹಣದ ವ್ಯವಹಾರದ ಬಗ್ಗೆ ಮಾತ್ರ ತನಿಖೆ ಮಾಡುತ್ತದೆ. ಆದರೆ ಮುಡಾ ಕೇಸ್ನಲ್ಲಿ ತುರ್ತಾಗಿ ಇಡಿ ECIR ದಾಖಲಿಸಿದ. ಲೋಕಾಯುಕ್ತ ಎಫ್‌ಐಆರ್ ಆದ ಮರುದಿನವೇ ECIR ದಾಖಲು ಮಾಡಿಕೊಂಡಿದೆ.
ಬಿಜೆಪಿಯೇತರ ಆಡಳಿತವಿರುವ ಕಡೆ ಮಾತ್ರ ಈ ರೀತಿ ಮಾಡುತ್ತಾರೆ. ಲೋಕಾಯುಕ್ತ ಜಾರಿ ನಿರ್ದೇಶನಾಲಯದ ಸಹಾಯ ಕೇಳಿಲ್ಲ. ಸೈಟ್ ಹಿಂದಿರುಗಿಸಿರುವ ಕಾರಣ ಇಡಿ ವ್ಯಾಪ್ತಿಗೆ ಕೇಸ್ ಇಲ್ಲ. ಅದಕ್ಕೆ ಇಂಥ ಪತ್ರಗಳನ್ನು ಅವರು ಸೋರಿಕೆ ಮಾಡುತ್ತಿದ್ದಾರ. ಲೋಕಾಯುಕ್ತಕ್ಕೆ ತನಿಖೆಯ ಬಗ್ಗೆ ನಿರ್ದೇಶನ ಮಾಡುತ್ತಿದ್ದಾರೆ ಅನಿಸುತ್ತಿದೆ. ಇಡಿಯವರೇ ಪತ್ರ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಇಡಿ ತನಿಖೆ ಆಂತರಿಕವಾಗಿ ಮಾಡಬೇಕು ಅಲ್ವಾ?ʼ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇದನ್ನೂ ನೋಡಿ : ಮಹಾರಾಷ್ಟ್ರ | ಸಿಎಂ’ ಸ್ಥಾನಕ್ಕಾಗಿ ಬಿಜೆಪಿ & ಶಿಂಧೆ ಬಣದ ನಡುವೆ ‘ಮಹಾ’ ಬಿಕ್ಕಟ್ಟು ! ಯಾರಾಗ್ತಾರೆ ಸಿಎಂ!?#mahayuti