ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ಒಂದರಲ್ಲಿ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತು ಎಸ್ಟಿ ಕಲ್ಯಾಣ ಖಾತೆ ಸಚಿವರಾಗಿರುವ ಸಚಿವ ನಾಗೇಂದ್ರ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 10 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ನೀಡಿದೆ.ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಲದ ನ್ಯಾ.ಜೆ.ಪ್ರೀತ್ ಈ ಮಾಲಕ ವಿಚಾರಣೆಯನ್ನ ಜುಲೈ 26 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಆರೋಪಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ಮತ್ತು ಸರಕಾರಕ್ಕೆ ರಾಜಸ್ವ ನಷ್ಟ ಮಾಡಿ 22.282 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಅಕ್ರಮದಿಂದ ಸರಕಾರಕ್ಕೆ 2.82 ಕೋಟಿ ರೂಪಾಯಿ ನಷ್ಟವಾಗಿತ್ತು 2015ರಲ್ಲಿ ಅಕ್ರಮ ಗಣಿಗಾರಿಕೆ ಕೇಸ್ ಪ್ರಕರಣದ ಹಿನ್ನೆಲೆಯಲ್ಲಿಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದ್ದನ್ನೂ ಓದಿ:ಬಳ್ಳಾರಿ ಗಣಿಗಾರಿಕೆ: ಪರಿಸರ ವಿನಾಶ-ಅದರ ಪುನಶ್ಚೇತನ
ಮಾಜಿ ಸಚಿವ, ಶಾಸಕ ಜಿ.ಜನಾರ್ದನ ರೆಡ್ಡಿ, ಸಚಿವ ಬಿ. ನಾಗೇಂದ್ರ, ವಿ.ಚಂದ್ರಶೇಖರ್, ಮೆಹಫೂಜ್‌ಅಲಿ ಖಾನ್, ಮಧುಕರ್ ವರ್ಮ, ಸಿ.ಶ್ರೀಕಾಂತ್, ಕೆ. ನಾಗರಾಜ, ದೇವಿ ಮತ್ತು ಮಧುಶ್ರೀ ಎಂಟರ್‌ಪ್ರೈಸಸ್ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ ಕಾಯಿದೆ ಸೆಕ್ಷನ್ 4(1), 4(1ಎ) 21 ಮತ್ತು 23ರಡಿ ಹಾಗೂ ಈಗಲ್ ಟ್ರೇಡರ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಎಲ್ಲಾಆರೋಪಿಗಳಿಗೂ ಸಮನ್ಸ್ ಜಾರಿ-ಗೊಳಿಸಬೇಕು” ಎಂದು ಆದೇಶಿಸಿದೆ.ಲೋಕಾಯುಕ್ತದ ತನಿಖಾಧಿಕಾರಿ ದಾಖಲಿಸಿದ್ದ ಖಾಸಗಿ ದೂರಿನ ಕುರಿತು ವಿಚಾರಣೆ ನಡೆಸಿದ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಜೆ. ಪ್ರೀತ್ ಈ ಕುರಿತು ಆದೇಶ ಎಲ್ಲಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.