ತುಮಕೂರು: ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿ ಭವಿಷ್ಯ ನಿಧಿ ವಂತಿಕೆ ಪಾವತಿಸಿದರೆ 58 ವರ್ಷ ವಯಸ್ಸಾದಾಗ ಮಾಸಿಕ ಕನಿಷ್ಟ ಪಿಂಚಣಿಯನ್ನು 1000 ರೂ ಪಾಯಿಗಳಷ್ಸ ಮಾತ್ರ ನೀಡಲಾಗಿದೆ.. ಇದು ಏನೇನು ಸಾಲದು ಮತ್ತು ಒಮ್ಮೆ ನಿಗಧಿಯಾದ ಪಿಂಚಣಿಯು ಹೆಚ್ಚಳವೆ ಮಾಡದೆ ಇರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘವು ಪ್ರತಿಭಟನೆ ನಡೆಸಿತು.
ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಚಾಲಕ ಟಿ. ಜಿ. ಶಿವಲಿಂಗಯ್ಯ ಭಾಗವಹಿಸಿ ಮಾತನಾಡುತ್ತಾ, ಅವರು, ಮಾಸಿಕ ಕನಿಷ್ಟ ಪಿಂಚಣಿಯನ್ನು 6000 ರೂ ನಿಗಧಿ ಮಾಡಿ ಪಿ. ಎಫ್ ಪಿಂಚಣಿಗೆ ಬೆಲೆ ಏರಿಕೆ ಅಧಾರಿತವಾಗಿ ತುಟ್ಟಿ ಭತ್ಯಯನ್ನು ನೀಡುವಂತೆ ಎಲ್ಲಾ ಪಿಂಚಣಿದಾರರ ಆನಾರೋಗ್ಯದ ಸಮಯದ ಚಿಕಿತ್ಸಾ ವೆಚ್ಚಗಳನ್ನು ಭರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಬಿಜೆಪಿಯ ದಾಳವಾಗಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ದೇಶದಲ್ಲಿರುವ 63 ಲಕ್ಷ ಪಿ.ಎಫ್. ಪಿಂಚಣಿದಾರರು ತಮ್ಮ ಇಳಿ ವಯಸ್ಸಿನಲ್ಲಿ 800- 1000 ರೂ ಮಾಸಿಕ ಪಿಂಚಣಿಯಲ್ಲಿ ಬದುಕು ನಿರ್ವಹಣೆಯು ಕಷ್ಟಕರವಾಗಿದೆ. ಹಾಗಾಗಿ ಭಾರತ ಸರ್ಕಾರ ಕನಿಷ್ಟ ಪಿಂಚಣಿಯ ಹೆಚ್ಚಳಕ್ಕೆ ಮತ್ತು ಪಿಂಚಣಿಗೆ ತುಟ್ಟಿ ಭತ್ಯೆಯನ್ನು ಜೋಡಿಸಿ ನೀಡಲು ಕ್ರಮ ವಹಿಸುವಂತೆ ದೇಶದ್ಯಂತ ಪಿ.ಎಫ್ ಪಿಂಚಣಿದಾರರು ಒತ್ತಾಯಿಸುತ್ತಾ ಬಂದಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರು ಹಾಗೂ ಪಿಂಚಣಿದಾರರ ಸಂಘಟನೆಯ ಮಖಂಡರು ಹಾಜರಿದ್ದರು.
ಇದನ್ನೂ ನೋಡಿ: ಓದುವ ಹಿಗ್ಗು ಉತ್ಸವ ಉದ್ಘಾಟನಾ ಕಾರ್ಯಕ್ರಮ | ರೆಡ್ ಬುಕ್ ಡೇ , ಮಾತೃಭಾಷಾ ದಿನದ ನೆನಪಿನಲ್ಲಿ