ಮಡಿಕೇರಿ 4 ಕಿ.ಮಿ ದೂರದಲ್ಲಿ ಲಘು ಭೂಕಂಪ

ಮಡಿಕೇರಿ: ಮಡಿಕೇರಿ ನಗರಕ್ಕೆ 4 ಕಿ.ಮೀ ದೂರದಲ್ಲಿ 1.6 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.

ತಾಲ್ಲೂಕಿನ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. 2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಗ್ರಾಮ ಸೇರಿದಂತೆ ಕೆಲವೆಡೆ ಬುಧವಾರ ಬೆಳಿಗ್ಗೆ 10.50 ರ ಸುಮಾರಿನಲ್ಲಿ ಭೂಮಿ ಕಂಪಿಸಿದೆ ಎಂಬ ಸುದ್ದಿ ವಾಟ್ಸ್ ಆ್ಯಪ್ ಗ್ರೂಪ್ ಹರಿದಾಡಿತು.

ಇದನ್ನು ಓದಿ:“ದ್ವೇಷಕಾರಲು ‘ಪಾಕಿಸ್ತಾನ’ ಎಂಬ ಪದವನ್ನು ಚತುರತೆಯಿಂದ ಹೆಣೆದಿದ್ದಾರೆ”

ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಮದೆ ಗ್ರಾಮ‌ಪಂಚಾಯಿತಿ ಸಮೀಪ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ಹಾರಂಗಿ ಜಲಾಶಯದಿಂದ 23.8 ಕಿ.ಮೀ ದೂರದಲ್ಲಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪಬ್ಲಿಕ್ ಟಿವಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ್ ಅವರನ್ನು ಸಂಪರ್ಕಿಸಿದಾಗ ಅವರು ಇದು ತೀರಾ ಅತ್ಯಲ್ಪ ಪ್ರಮಾಣದ ಲಘು ಕಂಪನವಾಗಿದ್ದು ಯಾವುದೇ ಆತಂಕಕ್ಕೆ ಕಾರಣ ಇಲ್ಲ ಎಂದು ಹೇಳಿದರು.

ಇದನ್ನು ಓದಿ:ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂದಿದ್ದಕ್ಕೆ ಎಫ್‌ಐಆರ್? – ಸುಪ್ರಿಂ ಕೋರ್ಟ್ ಪ್ರಶ್ನೆ

Donate Janashakthi Media

Leave a Reply

Your email address will not be published. Required fields are marked *