ತುಮಕೂರು: ಮೈಕ್ರೋ ಫೈನಾನ್ಸ್ ಕಿರುಕುಳ ರಾಜ್ಯದಲ್ಲಿ ಮಿತಿಮೀರಿದೆ. ತುಮಕೂರಿನಲ್ಲಿ ಫೈನಾನ್ಸ್ ನಿಂದ ಹಣಪಡೆದವರ ಸ್ಥಿತಿ ಶೋಚನೀಯವಾಗಿದೆ. 4.66 ಲಕ್ಷ ಸಾಲಕ್ಕೆ 7.20 ಲಕ್ಷ ರೂಪಾಯಿ ಬಡ್ಡಿ ಕಟ್ಟಿ ಇಲ್ಲೊಂದು ಕುಟುಂಬ ಕಂಗಾಲಾಗಿದೆ. ಮೈಕ್ರೋ
ಫೇನಾನ್ಸ್ ಕಂಪನಿಯಿಂದ ಸಾಲಗಾರ ಸತ್ತರು ಕುಟುಂಬಸ್ಥರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬಡ್ಡಿ, ಚಕ್ರಬಡ್ಡಿ ಕಟ್ಟಿ ಸೈಯದ್ ಸಮಿವುಲ್ಲಾ ಎಂಬ ವ್ಯಕ್ತಿ ಸಾವನ್ನೊಪ್ಪಿದ್ದೂ, ಆ ಬಳಿಕ ತುಮಕೂರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿ ಕೈಗೆ ಸಿಲುಕಿ ಇವರದ್ದೇ ಕುಟುಂಬ ನರಳುತ್ತಿದೆ.
ಇದನ್ನೂ ಓದಿ: ಗೀಸರ್ ನಲ್ಲಿ ಹಿಡನ್ ಕ್ಯಾಮೆರಾ: ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ತುಮಕೂರಿನ ಲೇಬರ್ ಕಾಲೋನಿ ವಾಸಿ ಸೈಯದ್ ಸಮಿವುಲ್ಲಾ ,ಮನೆ ನಿರ್ಮಾಣಕ್ಕಾಗಿ 4.66 ಲಕ್ಷ ರೂಪಾಯಿ ಸಾಲ ಮಾಡಿದ್ರು. ಫೈವ್ ಸ್ಟಾರ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಿದ್ದ ಸಮಿವುಲ್ಲಾ ಹಣ ಕಟ್ಟಿದ್ದರೂ , ಇನ್ನೂ ಕೂಡ ಬಾಕಿ ಇದೆ ಎಂದು ಕಂಪನಿ ಸಿಬ್ಬಂದಿ ಪೀಡಿಸುತ್ತಿದ್ದರು. ಇದೇ ಕೊರಗಲ್ಲಿ ಸಮಿವುಲ್ಲಾ ಪ್ರಾಣಬಿಟ್ಟಿದ್ದರು. ಈಗ ಕಂಪನಿ ಸಿಬ್ಬಂದಿ ಕುಟುಂಬದ ಸದಸ್ಯರಿಗೆ ತೊಂದರೆ ನೀಡ್ತಿರೋ ಆರೋಪ ಕೇಳಿಬಂದಿದೆ.
2019 ಜನವರಿಯಲ್ಲಿ ಸಾಲ ಮಾಡಿದ್ದ ಸೈಯದ್ ಸಮಿವುಲ್ಲಾ.ವರ್ಷಕ್ಕೆ 24.55 % ಬಡ್ಡಿದರಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದರು.2024 ಮೇನಲ್ಲಿ ಹೃದಯಾಘಾತದಿಂದ ಸೈಯದ್ ಸಮಿವುಲ್ಲಾ ಸಾವನ್ನಪ್ಪಿದ್ದಾರೆ.ಮನೆ ಮುಂದೆ ಹೋಗಿ ಸಿಬ್ಬಂದಿ ಸೈಯದ್ ಹೆಂಡತಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ನೋಡಿ: ತುಮಕೂರು | 7.20 ಲಕ್ಷ ಬಡ್ಡಿ ಕಟ್ಟಿದರೂ ತೀರದ ಅಸಲು : ಸಾಲಗಾರ ಸತ್ತರು ಕುಟುಂಬಸ್ಥರಿಗೆ ನಿಲ್ಲದ ಕಿರುಕುಳ