ಕಾರ್ಮಿಕರ ಕಾನೂನುಹಕ್ಕಿನ ಮೇಲೆ ಕಾನೂನುಬಾಹಿರ ಕ್ರಮ-ಸಿಪಿಐ(ಎಂ) ಗ್ರಾಮೀಣ ಉದ್ಯೋಗ ಖಾತ್ರಿ
ನವದೆಹಲಿ : ಬೇಡಿಕೆ ಆಧಾರಿತ ಗ್ರಾಮೀಣ ಉದ್ಯೋಗ ಖಾತರಿ ಕಾನೂನಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MNREGA)ಯಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಯ ಹೇರಿಕೆ ಈ ಕಾಯ್ದೆ ಬಗ್ಗೆ ಮೋದಿ ಸರ್ಕಾರದ ಸಕ್ರಿಯ ಹಗೆತನದ ಹೊಚ್ಚಹೊಸ ಅಭಿವ್ಯಕ್ತಿ ಯಾಗಿದೆ, ಅದರ ಅನುಷ್ಠಾನಕ್ಕೆ ಇದ್ದ ಗಡುವು ಡಿಸೆಂಬರ್ 31 ರಂದು ಮುಕ್ತಾಯಗೊಂಡಿದೆ. MNREGA ಪ್ರಕಾರ, ಪ್ರತಿಯೊಬ್ಬ ಗ್ರಾಮೀಣ ಕಾರ್ಮಿಕರಿಗೆ ಒಂದು ಜಾಬ್ ಕಾರ್ಡ್‌ನ ಹಕ್ಕಿದೆ ಮತ್ತು ಪ್ರತಿಯೊಬ್ಬ ಜಾಬ್ ಕಾರ್ಡ್ ಹೊಂದಿರುವವರಿಗೆ ಕನಿಷ್ಠ 100 ದಿನಗಳ ಕೆಲಸದ ಹಕ್ಕಿದೆ. ಎಬಿಪಿಸ್ ನ ಹೇರಿಕೆ ಕೋಟಿಗಟ್ಟಲೆ ಕಾರ್ಮಿಕರ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಕ್ರಮವನ್ನು ಬಲವಾಗಿ ಖಂಡಿಸಿದೆ.
ಜಾಬ್ ಕಾರ್ಡ್ ಹೊಂದಿರುವವರನ್ನು ಎಬಿಪಿಎಸ್‌ಗೆ ಅರ್ಹರು ಮತ್ತು ಅನರ್ಹರು ಎಂದು ವಿಂಗಡಿಸುವುದು ಒಕ್ಕೂಟ ಸರ್ಕಾರ ಈ ಕಾನೂನಿಗೆ ಸಂಬಂಧಪಟ್ಟಂತೆ ಮಾಡಿರುವ ಮೊದಲ ಉಲ್ಲಂಘನೆಯಾಗಿದೆ. ಸರ್ಕಾರದ ಪ್ರಕಾರ, 25.25 ಕೋಟಿ ನೋಂದಾಯಿತ ಕಾರ್ಮಿಕರಲ್ಲಿ 14.35 ಕೋಟಿ ಜನರು ಮಾತ್ರ ಅರ್ಹರಾಗಿದ್ದಾರೆ, ಏಕೆಂದರೆ ಅವರು ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಒಂದು ದಿನದ ಕೆಲಸವನ್ನು ಮಾಡಿದ್ದಾರೆ. ಜಾಬ್ ಕಾರ್ಡ್ ಹೊಂದಿರುವವರು, ಈ ಹಿಂದೆ ಇದರಡಿಯಲ್ಲಿ ಕೆಲಸ ಮಾಡಿರದವರು, ಈಗ ತಾನು MNREGA ಸೈಟ್‌ನಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಿದರೆ, ಅವರು ಹಾಗೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ಈಗ ಅವರು ಅನರ್ಹರು ಎಂದು ಘೋಷಿಸಲ್ಪಟ್ಟಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಕಾನೂನಿನ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದುವ ಎಲ್ಲ ಹಕ್ಕನ್ನು ಹೊಂದಿರುವ 10 ಕೋಟಿಗೂ ಹೆಚ್ಚು ಕಾರ್ಮಿಕರನ್ನು ಎಬಿಪಿಎಸ್ ಪಡೆಯಲು ಅನರ್ಹರೆಂದು ಘೋಷಿಸಲಾಗಿದೆ ಮತ್ತು ಅದರಿಂದಾಗಿ MNREGA ಸೈಟ್‌ನಲ್ಲಿ ಕೆಲಸ ಮಾಡುವ ಹಕ್ಕನ್ನು ಅವರಿಗೆ ನಿರಾಕರಿಸಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ
ಇದನ್ನೂ ಓದಿ : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಸರಕಾರದ ದಾಳಿ – ಗ್ರಾಮೀಣ ಬಡವರ ಮೇಲೆ ಅಘೋಷಿತ ಯುದ್ಧ-ಬೃಂದಾ ಕಾರಟ್
ಅರ್ಹ ಜಾಬ್ ಕಾರ್ಡ್‍ದಾರರು ಎನ್ನಲಾದ 14.35 ಕೋಟಿ ಜನರಲ್ಲೂ 12. 7 ಪ್ರತಿಶತದಷ್ಟು, ಅಂದರೆ ಸುಮಾರು 1.8 ಕೋಟಿ ಕಾರ್ಮಿಕರು ಎಬಿಪಿಎಸ್ ಹೊಂದಿಲ್ಲ , ಅದರಿಂದಾಗಿ MNREGA ನಲ್ಲಿ ಕೆಲಸ ಮಾಡಲು ಅರ್ಹರಾಗಿರುವುದಿಲ್ಲ. ಈ ಹಿಂದೆ ಸರ್ಕಾರವು ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಹೇರಿತ್ತು, ಇದರ ಫಲಿತಾಂಶವಾಗಿ ಕಳಪೆ ಸಂಪರ್ಕವನ್ನು ಹೊಂದಿರುವ ಗ್ರಾಮೀಣ ಭಾರತದ ಹೆಚ್ಚಿನ ಭಾಗಗಳಲ್ಲಿ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಉಪಸ್ಥಿತಿಯನ್ನು ಸ್ವೀಕರಿಸಿಲ್ಲ. ಆನ್‌ಲೈನ್ ನೋಂದಣಿ ಇಲ್ಲದ್ದರಿಂದ ಅವರಿಗೆ ಕೂಲಿಯನ್ನು ನಿರಾಕರಿಸಲಾಗುತ್ತಿತ್ತು ಮತ್ತು ನಿರಾಕರಿಸಲಾಗುತ್ತಿದೆ.
ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಮೇಲಿನ ನೇರ ದಾಳಿಯಾಗಿದೆ. ಕೆಲಸದ ಮೇಲೆ 100 ದಿನಗಳ ಮಿತಿಯಿಂದಾಗಿ ಇದೇನೂ ಸಮರ್ಪಕವಾದ ಕಾಯ್ದೆಯಾಗಿಲ್ಲವಾದರೂ, ಗ್ರಾಮೀಣ ಬಡವರ ಒಂದು ಜೀವನಾಡಿ ಎಂದು ಸಾಬೀತಾಗಿದೆ, ವಿಶೇಷವಾಗಿ ನಿರುದ್ಯೋಗದಿಂದ ಉಂಟಾದ ಹೆಚ್ಚಿನ ಗ್ರಾಮೀಣ ಸಂಕಷ್ಟದ ಸಮಯದಲ್ಲಿ. ಮೋದಿ ಸರ್ಕಾರ ಒಂದು ಕಾನೂನಾತ್ಮಕ ಅಧಿಕಾರದ ಮೇಲೆ ದಾಳಿ ಮಾಡಲು ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಸಿಪಿಐ(ಎಂ) ಟಿಪ್ಪಣಿ ಮಾಡಿದೆ.
ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಖಾತರಿಪಡಿಸಿರುವ ಕಾರ್ಮಿಕರ ಹಕ್ಕುಗಳ ಮೇಲಿನ ಅಕ್ರಮ ದಾಳಿ ಎಂದು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ ಕಡ್ಡಾಯವಾಗಿ ತಳುಕು ಹಾಕಬೇಕು ಎಂಬ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿ
ಈ ವಿಡಿಯೋ ನೋಡಿ : ಉದ್ಯೋಗ ಖಾತ್ರಿ ಮೂಲಕ ಕೆರೆ ಹೂಳೆತ್ತಿ ಜಲಪಾತ ಸೃಷ್ಟಿಸಿದ ಅತ್ತಾಜೆ ಗ್ರಾಮಸ್ಥರು