ನ್ಯಾಯಮೂರ್ತಿಗಳ ಮಹಿಳೆಯರ ಕುರಿತ ಪಾಳೆಯಗಾರಿ ಮನಸ್ಥಿತಿ – ವಿಮೋಚನಾ ಸಂಘ ಹಾಗು ಮಕ್ಕಳ ಹೋರಾಟ ಸಮಿತಿಗಳ ಖಂಡನೆ

ಬೆಂಗಳೂರು: ಮಹಿಳೆಯರ ಮೇಲಿನ ಪುರುಷ ಪ್ರಧಾನ ಪಾಳೆಯಗಾರಿ ದೌರ್ಜನ್ಯವನ್ನು ವಿವರಿಸುವ ಭರದಲ್ಲಿ ಮಹಿಳೆಯರ ಹಾಗು ದೇವದಾಸಿ ಮಹಿಳೆಯರ ಕುರಿತು ಆಡಿದ ಮಾತುಗಳು, ಅವರ ಹಾಗು ಅವರ ಕುಟುಂಬದ ಸದಸ್ಯರನ್ನೇ ನಿಂದಿಸಿ, ಅವಹೇಳನ ಮಾಡಿದಂತಿವೆ ಎಂದುವಿಮೋಚನಾ ಸಂಘದ ಗೌರವಾದ್ಯಕ್ಷರಾದ ಯು.ಬಸವರಾಜ ತಿಳಿಸಿದ್ದಾರೆ. ನ್ಯಾಯಮೂರ್ತಿ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಮಾನ್ಯ ವೇದವ್ಯಾಸಾಚಾರ್ ಶ್ರೀಶಾನಂದರವರು ಆಡಿದ ಈ ಅನಗತ್ಯ ಮತ್ತು ಆಕ್ಷೇಪಾರ್ಹ ಮಾತುಗಳು ಉಚ್ಛ ನ್ಯಾಯಾಲಯದ ಹಾಗು ನ್ಯಾಯ ಮೂರ್ತಿಗಳ ಘನತೆಗೆ ತಕ್ಕುದಾಗಿಲ್ಲವೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ತಿಳಿಸ ಬಯಸುತ್ತವೆ.

ಅದು ಅವರ ಪಾಳೆಯಗಾರಿ ಹಾಗು ಲಿಂಗ ಮತ್ತು ಜಾತಿ ತಾರತಮ್ಯದ ಕೀಳು ಮನೋಸ್ಥಿತಿಯನ್ನು ಬಿಂಬಿಸುತ್ತದೆಂದು ಅಭಿಪ್ರಾಯ ಪಡುತ್ತವೆ.

ಇದನ್ನೂ ಓದಿ : ಬಳ್ಳಾರಿ| 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

ಸಮಾಜದಲ್ಲಿ ನಮ್ಮದಲ್ಲದ ತಪ್ಪಿಗೆ ದಿನ ನಿತ್ಯ ನಾವುಗಳು ಮತ್ತು ನಮ್ಮ ಕುಟುಂಬದ ಸದಸ್ಯರು ಅಪಮಾನ ಹಾಗು ಅವಹೇಳನದ ಸಂಕಟಕ್ಕೊಳಗಾಗುತ್ತಿರುವಾಗ, ಮಾನ್ಯ ನ್ಯಾಯಮೂರ್ತಿಗಳು ಹಾಗು ಘನ ನ್ಯಾಯಾಲಯ, ಸಮಾಜದ ಅತ್ಯಂತ ಕಟ್ಟಕಡೆಯ ದಲಿತ ಮಹಿಳೆಯರು ಹಾಗು ಅವರ ಕುಟುಂಬದ ಸದಸ್ಯರಾದ ನಮ್ಮನ್ನು ಹೀಗೆ ಅಪಮಾನಿಸಬೇಕಾ ? ನ್ಯಾಯಾಲಯವೇ ಹೀಗಾದರೆ ನಮಗಾರು ರಕ್ಷಕರು ? ಎಂದು ವಿಮೋಚನಾ ಸಂಘ ಹಾಗು ಮಕ್ಕಳ ಹೋರಾಟ ಸಮಿತಿಗಳು ಪ್ರಶ್ನಿಸಿವೆ.

ಹಿಂದೆಯೂ ಮಹಿಳಾ ವಕೀಲರೊಬ್ಬರ ವಿಚಾರದಲ್ಲು ಇದೇ ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದ ಕಲಾಪದಲ್ಲಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ.

ಸಾರ್ವಜನಿಕ ವೀಕ್ಷಣೆಯಲ್ಲಿರುವ ಮುಕ್ತ ನ್ಯಾಯಾಲಯದಲ್ಲಿ ನ್ಯಾಯ ಮೂರ್ತಿಗಳು ಮಾತನಾಡುವಾಗ ನ್ಯಾಯ ಸ್ಥಾನದ ಘನತೆಗೆ ತಕ್ಕುದಾಗಿ ನಡೆದುಕೊಳ್ಳಬೇಕು. ಸಾಮಾಜಿಕ ತಾರತಮ್ಯದ ಹಾಗು ದೌರ್ಜನ್ಯಕ್ಕೊಳಗಾದ ಮಹಿಳೆಯರು, ಅಲ್ಪ ಸಂಖ್ಯಾತರ ಮತ್ತು ದಲಿತ ಹಾಗು ಇತರೆ ದುರ್ಬಲ ಸಮುದಾಯಗಳ ವಿಚಾರದಲ್ಲಿ ನ್ಯಾಯ ಮೂರ್ತಿಗಳು ಮಾತನಾಡುವಾಗ ಮತ್ತಷ್ಠು ಎಚ್ಚರಿಕೆ ವಹಿಸುವಂತೆ ಸಂಘಗಳು ಆಗ್ರಹಿಸುತ್ತವೆ.

ಈ ಕುರಿತಂತೆ ಸೂಚನೆ ನೀಡಿ ನ್ಯಾಯಾಲಯದ ಘನತೆಯನ್ನು ರಕ್ಷಿಸ ಬೇಕೆಂದು ಸುಪ್ರಿಂಕೋರ್ಟ ನ ಮುಖ್ಯ ನ್ಯಾಯ ಮೂರ್ತಿಗಳಿಗೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳ ರಾಜ್ಯ ಘಟಕಗಳು ಬಹಿರಂಗ ಮನವಿ ಮಾಡಿವೆ ಎಂದು ವಿಮೋಚನಾ ಸಂಘದ ಅಧ್ಯಕ್ಷರಾದ ಹುಲಿಗೆಮ್ಮ, ಮಂಜುನಾಥ ಡಗ್ಗಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಮಾಳಮ್ಮ , ,ರಮೇಶ ತಿಳಿಸಿದ್ದಾರೆ.

ಇದನ್ನೂ ನೋಡಿ : ಬಳ್ಳಾರಿ ವಿಶ್ವವಿದ್ಯಾಲಯ : ಕಿರುಕುಳಕ್ಕೆ ಹಂಗಾಮಿ ನೌಕರ ಆತ್ಮಹತ್ಯೆ – ಎಸ್ಎಫ್ಐ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *