ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ; ಸದಸ್ಯೆ ರೇಷ್ಮಾ ಶ್ರೀಧರ ಸದಸ್ಯತ್ವ ರದ್ದು

Please follow and like us:
ಹುಮನಾಬಾದ್: ಇಲ್ಲಿನ ಪುರಸಭೆ ಸದಸ್ಯೆ ರೇಷ್ಮಾ ಶ್ರೀಧರ ಸದಸ್ಯತ್ವವನ್ನು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವುದು ರುಜುವಾತು ಆಗಿರುವುದರಿಂದ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ.

ಜೆಡಿಎಸ್ ಮುಖಂಡ ಶಿವಪುತ್ರ ಮಾಳಗೆ ಎಂಬುವರುಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ, ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಸೆಕ್ಷೆನ್‌ 41(1) ಅನ್ವಯ ಸದಸ್ಯತ್ವ ರದ್ದುಪಡಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಭೇಟಿ

‘ತಂದೆಯ ಜಾತಿ ಆಧರಿಸಿ ಅವರ ಮಕ್ಕಳಿಗೆ ಆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೆ, ಪತಿಯ ಜಾತಿ ಪತ್ನಿಗೆ ವರ್ಗಾವಣೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ. 2019ರ ಚುನಾವಣೆಯಲ್ಲಿ ರೇಷ್ಮಾ ಆಯ್ಕೆಯಾಗಿದ್ದರು.

ಇದನ್ನೂ ನೋಡಿ: ಓದುವ ಹಿಗ್ಗು ಉತ್ಸವ ಉದ್ಘಾಟನಾ ಕಾರ್ಯಕ್ರಮ | ರೆಡ್‌ ಬುಕ್‌ ಡೇ , ಮಾತೃಭಾಷಾ ದಿನದ ನೆನಪಿನಲ್ಲಿ

Please follow and like us:
Donate Janashakthi Media

Leave a Reply

Your email address will not be published. Required fields are marked *