ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಆಸ್ತಿ ಘೋಷಣೆ ಮಾಡದ ಆರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿದೆ. ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದು ಘೋಷಿಸಲಾಗಿದೆ.
ಈ ಸದಸ್ಯರಿಗೆ ಆಸ್ತಿ ವಿವರ ನೀಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಉತ್ತರ ನೀಡದ ಕಾರಣ ಸದಸ್ಯತ್ವ ರದ್ದು ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಲಾಡ್ಕೀ-ಲಾಡ್ಲೀ ಯೋಜನೆಗಳು ಓಕೆಯಾದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಕೆ ಬೇಡ ?
ಚಿಕ್ಕಮಗಳೂರು ಜಿಲ್ಲೆ ಅತ್ತಿಕೂಡಿಗೆ ಗ್ರಾಪಂ ಚೈತ್ರ ರಘು, ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಪಂನ ಎಸ್.ಹೆಚ್. ಚಂದ್ರಶೇಖರ, ಕಲಬುರಗಿ ಜಿಲ್ಲೆ ಆಳಂದ ತಾಲೂಕು ಅಳಂಗಾ ಗ್ರಾಪಂನ ಗಣಪತಿ, ಕಮಲಾಪುರ ತಾಲೂಕು ವಿ.ಕೆ. ಸಲಗರ ಗ್ರಾಮ ಪಂಚಾಯಿತಿಯ ಇಸ್ಮಾಯಿಲ್ ಖಾನ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕಾಂಶಿ ಹೊಸೂರು ಗ್ರಾಮ ಪಂಚಾಯಿತಿಯ ಮಂಜುಳಾ ರಾಜಪ್ಪ, ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಕಳಕೇರಿ ಗ್ರಾಮ ಪಂಚಾಯಿತಿಯ ಬಿ.ವಿ. ಪ್ರಮೀಳಾ ಅವರನ್ನು ಗ್ರಾಮ ಪಂಚಾಯತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಡಿ ಆಸ್ತಿ ಘೋಷಣೆ ಮಾಡಿಕೊಳ್ಳದ ಸದಸ್ಯರ ಸದಸ್ಯತ್ವ ರದ್ದತಿಗೆ ಅವಕಾಶವಿದ್ದು, ಈ ಕಾಯ್ದೆ ಬಳಸಿಕೊಂಡು ರಾಜ್ಯ ಚುನಾವಣಾ ಆಯೋಗ ಆರು ಮಂದಿ ಸದಸ್ಯರನ್ನು ಅನರ್ಹಗೊಳಿಸಿದೆ. ಈ ಸದಸ್ಯ ಸ್ಥಾನಗಳು ಖಾಲಿ ಎಂದು ಘೋಷಣೆ ಮಾಡಲಾಗಿದೆ.
ಇದನ್ನೂ ನೋಡಿ: ಕುವೆಂಪು 120| ಕುವೆಂಪು ಓದು – ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ Janashakthi Media