ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ಡಿ.ಕೆ. ಶಿವಕುಮಾರ್ ಶಾಲಾ ಮಕ್ಕಳನ್ನು ಭೇಟಿ ಮಾಡಿರುವುದು ಈ ಸಂಕಷ್ಟಕ್ಕೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ(ಎನ್‌ಸಿಪಿಸಿಆರ್) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.
ಶಿವಕುಮಾರ್ ಅವರು ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ ಮಕ್ಕಳ ಗುಂಪಿನ ನಡುವೆ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಧರಿಸದೇ ಫೋಟೊ ತೆಗೆಸಿಕೊಂಡಿದ್ದು ಟೀಕೆಗೆ ಗುರಿಯಾಗಿತ್ತು. ಬಹಳಷ್ಟು ಜನ ಮಕ್ಕಳನ್ನು ರಾಜಕೀಯದ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು.
ಪಾದಯಾತ್ರೆ ವೇಳೆ ಶಾಲಾ ಮಕ್ಕಳನ್ನು ಶಿವಕುಮಾರ್ ಭೇಟಿಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಎನ್‌ಸಿಪಿಸಿಆರ್ ಪತ್ರ ಬರೆದಿದೆ. ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಶಾಲಾ ಮಕ್ಕಳ ಜತೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದರು. ಶಿವಕುಮಾರ್ ಕೊವಿಡ್ ನಿಯಮ ಪಾಲಿಸದೇ ಮಕ್ಕಳ ಜತೆ ಬೆರೆತಿದ್ದಾರೆ. ಮಾಸ್ಕ್ ಧರಿಸಿದೇ ಶಾಲಾಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಪ್ರವೀಣ್ ಸೂದ್ಗೆ ಪತ್ರ ಬರೆಯಲಾಗಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ಆಯೋಗ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದೆ. ಕೊವಿಡ್ ನಿಯಮ ಉಲ್ಲಂಘನೆ ಆರೋಪದಡಿ ಕೇಸ್ ದಾಖಲು ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
7 ದಿನಗಳ ಒಳಗಡೆ ವರದಿ ನೀಡುವಂತೆ ಸೂಚಿಸಿದೆ. ಪತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಇರುವ ವಿಡಿಯೋದ ಟ್ವಿಟ್ಟರ್ ಲಿಂಕ್ ಅನ್ನು ಉಲ್ಲೇಖಿಸಿದೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಯೋಗ ಸೂಚಿಸಿದೆ.
ಶಾಲೆ ಮಕ್ಕಳ ಜೊತೆ ಬೆರೆತಿರುವ ಬಗ್ಗೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, ಡಿಕೆ ಶಿವಕುಮಾರ್ ನಡೆಯನ್ನು ಟೀಕಿಸಿದ್ದು, ಮಾನ್ಯ ಡಿಕೆಶಿ ಅವರೇ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು. ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ. ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದೆ.