ಬೆಂಗಳೂರು, ಜ.3 : ಮೆಜೆಸ್ಟಿಕ್ ನಿಂದ ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ 10 ರೂ ಹಣಕೊಟ್ಟು 1ಗಂಟೆಯಲ್ಲಿ ತಲುಪಬಹುದು.
ಏನಿದು ಅಚ್ಚರಿ ಅಂತಿರಾ, ನಾಳೆಯಿಂದ ಮೂರು ಜೋಡಿ ರೈಲುಗಳು ಬೆಂಗಳೂರು ರೈಲು ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸಲಿದೆ. ಏರ್ಪೋರ್ಟ್ ತಲುಪಬೇಕಾದರೆ ಟ್ರಾಫಿಕ್, ದುಬಾರಿ ಹಣ, 2 ಗಂಟೆ ಪ್ರಯಾಣ ಎಂದು ಯೋಚಿಸಲಾಗುತ್ತಿತ್ತು ₹300 ನೀಡಿ ವಜ್ರ ಬಸ್ ಗಳಲ್ಲಿ, ₹ 1000 ನೀಡಿ ಟ್ಯಾಕ್ಸಿಗಳಲ್ಲಿ ಸಂಚಿರಸಬೇಕಿತ್ತು ಈಗ ಅದಕ್ಕೆ ಬ್ರೆಕ್ ಬಿದ್ದಿದ್ದು ನಾಳೆಯಿಂದ 10 ರೂ ಹಣ ಕೊಟ್ಟು, 1 ಗಂಟೆಯಲ್ಲಿ ಏರ್ಪೊರ್ಟ್ ತಲುಪಬಹುದು.
ರೈಲ್ವೇ ಇಲಾಖೆ ಇಂತಹ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ ಮೂರು ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲುಗಳನ್ನು ಶುಕ್ರವಾರ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ತಿಳಿಸಿದ್ದಾರೆ. ಎರಡು ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗೆ ಸಂಚರಿಸಿದರೆ, ಮತ್ತೊಂದು ಯಲಹಂಕದಿಂದ ದೇವನಹಳ್ಳಿಯವರೆಗೂ ಸಂಚರಿಸಲಿದೆ. ಮೊದಲ ರೈಲು ಬೆಳಿಗ್ಗೆ 4-45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ನಿರ್ಗಮಿಸಿದರೆ ರಾತ್ರಿ 9ಕ್ಕೆ ಕೊನೆಯ ರೈಲು ಇದೆ. ಮೊದಲ ರೈಲು ಬೆಳಗ್ಗೆ 4.45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ಹೊರಡಲಿದ್ದು, ಬೆಳಗ್ಗೆ 5.50ಕ್ಕೆ ಏರ್ ಪೋರ್ಟ್ ತಲುಪಲಿದೆ.
ಬೆಂಗಳೂರು ಕಂಟೊನ್ಮೆಂಟ್ ಮತ್ತು ಬಂಗಾರಪೇಟೆ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚರಿಸುವ ಮತ್ತು ಬಂಗಾರಪೇಟೆಯಿಂದ ಕೋಲಾರ ಮಾರ್ಗವಾಗಿ ಯಶವಂತಪುರದವರೆಗೂ ಸಂಚರಿಸುವ ಎರಡು ರೈಲುಗಳು ಕೂಡಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ನಲ್ಲಿ ನಿಲುಗಡೆಯಾಗಲಿವೆ ಎಂದು ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ವಾಣಿಜ್ಯಾತ್ಮಕ ಮ್ಯಾನೇಜರ್ ಎಎನ್ ಕೃಷ್ಣ ರೆಡ್ಡಿ ಈ ನಿಲುಗಡೆಯನ್ನು ಖಾತ್ರಿಪಡಿಸಿದ್ದಾರೆ.