ಹೊಸಕೋಟೆ | ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆಗೆ ದಲಿತ ಸಂಘಟನೆಗಳ ಪೂರ್ವಭಾವಿ ಸಭೆ

ಹೊಸಕೋಟೆ: ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆ ಸಂಬಂಧ ನಗರದ ಅಂಬೇಡ್ಕರ್ ವಸತಿನಿಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದವು.

ಭೀಮ ಕೊರೆಗಾಂವ್ ವಿಜಯೋತ್ಸವ  ಜನವರಿ 1 ಬೆಳಗ್ಗೆ ಮೆರವಣಿಗೆ ಆಚರಿಸಲು   ತೀರ್ಮಾನ ಕೈಗೊಳ್ಳಲಾಯಿತು.  ಕಾಲೇಜು ರಸ್ತೆಯಿಂದ ಮೋರ್, ಕೆಇಬಿ ಸರ್ಕಲ್ ಮೂಲಕ ತಾಲ್ಲೂಕು ಕಚೇರಿ ಅವರಣದವರೆಗೆ ಕೊರೆಂಗಾವ್ ವಿಜಯಸ್ತಂಭ ಹಿಡಿದು ಮೇರೆವಣಿಗೆ ನಡೆಸಲು ಅಂದಾಜಿಸಲಾಯಿತು.

ಇದನ್ನೂ ಓದಿ : ಬೆಂಗಳೂರು | ಸಾಹಿತ್ಯದಲ್ಲಿ ವಿಮರ್ಶೆಗೆ ಅವಕಾಶಗಳು ಕಡಿಮೆಯಾಗುತ್ತಿವೆ – ರಾಜೇಂದ್ರ ಚೆನ್ನಿ

ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆದ ಸಭೆ ನಡೆಸಲು ಅಗತ್ಯ ಸಿದ್ಧತೆ ಆರಂಭಿಸಲು ಚರ್ಚೆ ನಡೆಯಿತು. ದಲಿತರ ಹಕ್ಕಿಗಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಗೈದವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯದಂತೆ ಮಾಡಿದ ಈ ದೇಶದ ಇತಿಹಾಸಕಾರರಿಗೆ ಏನೆಂದು ಹೇಳಬೇಕೆಂದು ತಿಳಿಯುತ್ತಿಲ್ಲ. ಇನ್ನಾದರೂ ನಮ್ಮ ಸಮುದಾಯದ ಇತಿಹಾಸವನ್ನು ನಮ್ಮವರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ತಿಳಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ಮಹಾಜನ ಸೇನೆಯ ಅಧ್ಯಕ್ಷ ಮಂಜುನಾಥ್ ಹೇಳಿದರು.

ಕಾರ್ಯಕ್ರಮಗಳನ್ನು ಆಯೋಜಿಸುವುವುದು ದೊಡ್ಡದಲ್ಲ. ನಮ್ಮವರ ಧ್ವನಿ ಗಟ್ಟಿಯಾಗಿಸಲು ನಾವೆಲ್ಲಾ ಒಗ್ಗೂಡಬೆಕಿದೆ. ಶಿಕ್ಷಣ, ಸಂಘಟನೆ, ಹೊರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ದಲಿತ ಸಮುದಾಯವನ್ನು ಜಾಗೃತಗೊಳಿಸಬೇಕಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಚಿನ್ನಸ್ವಾಮಿ ಹೇಳಿದರು.

ಇದನ್ನೂ ನೋಡಿ : ಹಿಜಾಬ್ ಗೆ ಕೈ ಹಾಕಿನಿತೀಶ್ ಕುಮಾರ್ ಮಾಡಿದ ಎಡವಟ್ಟು, ಕ್ಷಮಾಯಾಚನೆಗೆ ಪಟ್ಟು Janashakthi Media

 

 

Donate Janashakthi Media

Leave a Reply

Your email address will not be published. Required fields are marked *