ನ. 29ರಂದು ಕರ್ನಾಟಕದ ಸಿಎಂ ಸ್ಥಾನ ಕುರಿತು ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ

ವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಕುರಿತ ಬಣ ರಾಜಕೀಯ ಹಾಗೂ ಸಂಪುಟ ಸ್ಥಾನಾಕಾಂಕ್ಷಿಗಳ ಕುರಿತು ನವೆಂಬರ್‌ 29ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಹೈಕಮಾಂಡ್‌ನ ಮಹತ್ವದ ಸಭೆ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಇಬ್ಬರೂ ಸಭೆಗೆ ತೆರಳುವ ಸಾಧ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳಲಿದೆ. ಸಿಎಂ- ಡಿಸಿಎಂ ಮುಖಾಮುಖಿಗೂ ಮುನ್ನ ಹೈಕಮಾಂಡ್‌ ಇಂದು ನಿರ್ಣಾಯಕ ಸಭೆ ನಡೆಸಲಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

ದೆಹಲಿಯ ಕಾಂಗ್ರೆಸ್‌ ಭವನದಲ್ಲಿ ನವೆಂಬರ್‌ 27ರಂದು ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ನಡೆಯಲಿದ್ದು, ಯಾರು ಸಿಎಂ ಆಗಿರಬೇಕು ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ರ ಅನಿವಾರ್ಯತೆಯನ್ನು ರಾಹುಲ್‌ ಗಾಂಧಿಗೆ ಮನವರಿಕೆ ಮಾಡಿದ ರಾಜ್ಯ ನಾಯಕರು

ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಒಟ್ಟು ಸೇರಿ ಇಂದು ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದಿನ ಸಭೆಯಲ್ಲಿ, ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಏನಿರಬೇಕು ಎಂಬ ವಿಚಾರದಲ್ಲಿ ಒಂದು ಸ್ಪಷ್ಟತೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಎಂ- ಡಿಸಿಎಂ ಇಬ್ಬರ ನಡುವಿನ ಸಂಧಾನ ಸೂತ್ರಕ್ಕೆ ಯಾವ ಮಾನದಂಡ, ಏನು ಸೂತ್ರ ಎಂಬುದನ್ನು ಹೈಕಮಾಂಡ್ ಇಂದು ನಿಗದಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಹಿಂದೆ ಸಿಎಂ ಸ್ಥಾನದ ಅಧಿಕಾರಾವಧಿಯನ್ನು 50:50 ಎಂದು ಹಂಚಲಾಗಿದೆ ಎಂಬುದನ್ನು ಕ್ಯಾಬಿನೆಟ್‌ನ ಹಲವು ಸಚಿವರೇ ನಿರಾಕರಿಸಿದ್ದರು. ಅಂಥ ಒಪ್ಪಂದ ಆಗಿತ್ತಾ ಎಂಬುದನ್ನು ಸ್ವತಃ ಡಿಕೆ ಶಿವಕುಮಾರ್‌ ಕೂಡ ಸ್ಪಷ್ಟಪಡಿಸಿರಲಿಲ್ಲ. ಆದರೆ ಡಿಕೆ ಶಿವಕುಮಾರ್‌ ಬಣದವರು ಅಧಿಕಾರಕ್ಕಾಗಿ ಒತ್ತಡ ತಂತ್ರದ ಮೊರೆ ಹೋಗಿದ್ದರು. ಪ್ರತಿಯಾಗಿ ಸಿದ್ದರಾಮಯ್ಯ ಬಣದವರು ಕೂಡ ಡಿನ್ನರ್‌ ಮೀಟಿಂಗ್‌ ಇತ್ಯಾದಿ ನಡೆಸಿದ್ದರು.

ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಬರುವಾಗ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿ ಸುಮಾರು 20 ನಿಮಿಷಗಳ ಚರ್ಚೆ ನಡೆಸಿದ್ದಾರೆ. ಅಲ್ಲದೇ ಇಂದು (ಗುರುವಾರ) ಬೆಂಗಳೂರಿಂದ ಮತ್ತೆ ದೆಹಲಿಗೆ ಖರ್ಗೆ ಹೋಗಲಿದ್ದು, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಸಂಜೆ ಹೈವೋಲ್ಟೇಜ್ ಮೀಟಿಂಗ್ ನಡೆಸಲಿದ್ದಾರೆ.

ನ.29ರ ಸಭೆಗೂ ಮೊದಲು ರಾಜ್ಯದ ಬೆಳವಣಿಗೆಯ ಬಗ್ಗೆ ಹೈಕಮಾಂಡ್ ನಾಯಕರು ಗಂಭೀರವಾಗಿ ಚರ್ಚಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಸಮಸ್ಯೆಯನ್ನು ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡಿದ್ದಾರೆ. ಪಕ್ಷದಲ್ಲಿ ಸಮಸ್ಯೆ ಇದೆ. ಹೈಕಮಾಂಡ್ ಮದ್ದರೆಯಲಿದೆ ಅಂದಿದ್ದಾರೆ.

ಇದನ್ನೂ ನೋಡಿ: ICDS ಯೋಜನೆ ಖಾಯಂ ಮಾಡಿ| ವೇತನ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ 1 ರಿಂದ ಅಂಗನವಾಡಿ ನೌಕರರ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *