ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆ (ಶುಕ್ರವಾರ) ತಜ್ಞರ ಸಭೆ ಕರೆಯಲಾಗಿದ್ದು, ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ತಜ್ಞರ ಸಭೆ
ಈ ಕುರಿತು ಎಚ್.ಕೆ. ಪಾಟೀಲ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾವೇರಿ ನದಿ ನೀರು ಕಡಿಮೆಯಾಗುತ್ತಿರುವುದರಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಹಿತಕ್ಕೆ ಯಾವೆಲ್ಲ ಕ್ರಮಕೈಗೊಳ್ಳಬೇಕು ಅವೆಲ್ಲವನ್ನೂ ಮಾಡುತ್ತೇವೆ.ಇಂತಹ ಸಂಕಷ್ಟ ಕಾಲದಲ್ಲಿ ನಾವು ಕಾನೂನಾತ್ಮಕವಾಗಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ಈ ಹಿನ್ನೆಲ್ಲೆಯಲ್ಲಿ ಮೂಖ್ಯಮಂತ್ರಿಯವರು ಸುಪ್ರೀಂಕೋರ್ಟ್, ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿರಾದ ನ್ಯಾಯಮೂರ್ತಿಗಳ, ವಕೀಲರ, ಜಲತಜ್ಞರ ಹಾಗೂ ಅನುಭವಿಗಳ ಸಭೆ ಕರೆದಿದ್ದಾರೆ. ಅವರ ಜೊತೆ ಸಮಾಲೋಚಿಸಿ, ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಇದನ್ನೂ ಓದಿ: ರೈತರು ನೀರಿನ ಬಳಕೆ ಕಡಿಮೆ ಮಾಡಲು ತಂತ್ರಜ್ಞಾನ ಬಳಸಿ: ಸಚಿವ ಚಲುವರಾಯಸ್ವಾಮಿ
ಸಂಕಷ್ಟದ ಸೂತ್ರ ಕಂಡುಹಿಡಿಯಲು ಸುಪ್ರೀಂಕೋರ್ಟ್ ಮತ್ತು ಸಿಡಬ್ಲ್ಯೂಎಂಎಗೆ ನಾವು ಒತ್ತಾಯ ಮಾಡುತ್ತಲೇ ಇದ್ದೇವೆ ಎಂದು ಹೇಳಿದರು.ಕಾವೇರಿ ನದಿಯಲ್ಲಿ ನೀರು ಎಷ್ಟು ಹರಿಯುತ್ತಿದೆ,ಅಣೆಕಟ್ಟೆಯಲ್ಲಿ ಎಷ್ಟು ನೀರು ಕಡಿಮೆಯಾಗಿದೆ ಎನ್ನುವುದು ತೆರೆದ ಪುಸ್ತಕ.ಬೆಂಗಳೂರಿನ ಜನತೆಗೆ ಕುಡಿಯಲು ನಾವು ನೀರನ್ನು ಉಳಿಸಿಕೊಳ್ಳಬೇಕು. ಬರದ ಈ ಸನ್ನಿವೇಶದ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು. ಇದು ರಾಜ್ಯಗಳ ನಡುವೆ ವಿಶ್ವಾಸ ವೃದ್ದೀಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಡಿಯೋ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್ Janashakthi Media