ಗದಗ : ಗದಗದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಅಟ್ಟಹಾಸ ಮೆರೆದಿದ್ದು, ಸಾಲ ಪಡೆದಿದ್ದ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ವ್ಯಕ್ತಿಯನ್ನು ರೂಮ್ ನಲ್ಲಿ ಕೂಡಿಹಾಕಿ ಇಡೀ ರಾತ್ರಿ ಹಲ್ಲೆ ನಡೆಸಿದ್ದಾರೆ. ಗದಗ -ಬೆಟಗೇರಿ ಅವಳಿ ನಗರದಲ್ಲಿ ಅಮಾನುಷ ಕೃತ್ಯ ನಡೆದಿದೆ.
ಸಾಲ ಪಡೆದ ಗದಗ ನಗರದ ಡಿಸಿ ಮಿಲ್ ನಿವಾಸಿ ದಶರಥ ಬಳ್ಳಾರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ರೌಡಿಶೀಟರ್ ಡಿಸ್ಕವರಿ ಮಂಜು, ಮಂಜುನಾಥ ಹಂಸನೂರು, ಮಹೇಶ ಹಂಸನೂರು, ಹನುಮಂತ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.
1 ಲಕ್ಷ ರೂ. ಸಾಲ ಪಡೆದಿದ್ದ ದಶರಥ ಮೇಲೆ ರೂಮ್ ನಲ್ಲಿ ಕೂಡಿ ಹಾಕಿ ಬಾಯಿಗೆ ಬಟ್ಟೆ ಕಟ್ಟಿ ಮಾರಣಾಂತಿಕವಾಗಿ ಹನ್ನೆ ಮಾಡಲಾಗಿದೆ. ಸತತ ಆರು ಗಂಟೆ ಕೇಬಲ್ ವೈರ್, ಬೆಲ್ಟ್ ನಿಂದ ಕಿರಾತಕರು ಹಲ್ಲೆ ನಡೆಸಿದ್ದಾರೆ. ಜನವರಿ 21ರಂದು ರಾತ್ರಿ ಬೆಟಗೇರಿಯ ಸೆಟಲ್ಮೆಂಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ರೂಮ್ ನಿಂದ ತಪ್ಪಿಸಿಕೊಂಡು ಬಂದ ದಶರಥ ಜೀವ ಉಳಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ದಶರಥ ಗದಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಗದಗ -ಬೆಟಗೇರಿಯಲ್ಲಿ ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಯಾರಿಗೆ ಫೋನ್ ಮಾಡ್ತೀಯಾ ಮಾಡು ಎಂದು ದಂಧೆಕೋರರು ಆವಾಜ್ ಹಾಕಿದ್ದಾರೆ. ಹೆಚ್.ಕೆ. ಪಾಟೀಲ್, ಡಿ.ಆರ್. ಪಾಟೀಲ್ ಗೆ ಫೋನ್ ಮಾಡ್ತೀಯಾ ಎಂದು ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಹೇಳ್ತೀಯಾ ಎಂದು ಹಲ್ಲೆ ನಡೆಸಿದ್ದು, ಇವರಿಗೆ ಯಾರ ಭಯವೂ ಇಲ್ಲ ಎಂದು ಗಾಯಾಳು ದಶರಥ ಆರೋಪಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬದವರು ಒತ್ತಾಯಿಸಿದ್ದಾರೆ.
ನಿನ್ನೆಯಷ್ಟೇ ಈ ಮೀಟರ್ ಬಡ್ಡಿ ದಂಧೆಗೆ ಯಾದಗಿರಿಯಲ್ಲಿ ಯುವಕನೊಬ್ಬ ಬಲಿಯಾಗಿದ್ದಾನೆ. ಕೇವಲ 35 ಸಾವಿರ ರೂ. ಗೆ ಯುವಕನಿಗೆ ಮಾರಣಾಂತಿಗೆ ಹಲ್ಲೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜೀವ ಬಿಟ್ಟಿದ್ದಾನೆ. ಖಾಸೀಂ ಅಲಿಯಾಸ್ ಬಿಲ್ಲಿ ಎನ್ನುವ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ನಡೆದಿದ್ದು ಬಡ್ಡಿ ದಂದೆಗೆ ಕಡಿವಾಣ ಹಾಕಬೇಕು ಎಂಬ ಕೂಗು ಕೇಳಿ ಬಂದಿದೆ.