ಮೀನು ಸಂಸ್ಕರಣಾ ಘಟಕದಲ್ಲಿ ಸಾವಿಗೀಡಾದ ಸಂತ್ರಸ್ತ ಮನೆಗೆ ಪಶ್ಚಿಮ ಬಂಗಾಳ ಸಿಪಿಐ(ಎಂ) ಪಕ್ಷದ ನಿಯೋಗ ಭೇಟಿ

ಕೋಲ್ಕತಾ: ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾದ ಪಶ್ಚಿಮ ಬಂಗಾಳದ 5 ಸಂತ್ರಸ್ತ ಕಾರ್ಮಿಕರ ಮನೆಗಳಿಗೆ 24 ನಾರ್ತ್ ಪರಗಣ ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

24 ನಾರ್ಥ್‌ ಪರಗಣ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮ್ರಿನಲ್ ಚಕ್ರವರ್ತಿ ಮಾತನಾಡಿ, ದುರಂತದಲ್ಲಿ ಮಡಿದ ವಲಸೆ ಕಾರ್ಮಿಕರಿಗೆ ತಲಾ 25 ಲಕ್ಷ ಪರಿಹಾರ ನೀಡಬೇಕು ಹಾಗೂ ಪಶ್ವಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದು ಆ ಕಾರಣಕ್ಕಾಗಿ ಇವತ್ತು ಅಲ್ಲಿನ ಕಾರ್ಮಿಕರು ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಎಂದು ಹೇಳಿದರು.

ಇದನ್ನು ಓದಿ: ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಸ್ವಚ್ಛಗೊಳಿಸುವ‌ ಸಂದರ್ಭ ಐವರು ಕಾರ್ಮಿಕರ ಸಾವು

ಮಂಗಳೂರಿನಲ್ಲಿ ನಡೆದ ವಲಸೆ ಕಾರ್ಮಿಕರ ಸಾವಿಗೆ ಮಮತಾ ಬ್ಯಾನರ್ಜಿ ಸರಕಾರವೇ ನೇರ ಹೊಣೆ ಎಂದು ದೂರಿದ ಮ್ರಿನಲ್‌ ಚಕ್ರವರ್ತಿ, ಈಗಾಗಲೇ ಪಶ್ಚಿಮ ಸರಕಾರ ಘೋಷಿಸಿದ 2 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು. ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದ ಮಾಲಿಕರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನು ಓದಿ: ಮಂಗಳೂರು ಮೀನು ಕಾರ್ಖಾನೆಯಲ್ಲಿ ದುರ್ಮರಣ: ತಲಾ 15 ಲಕ್ಷ ರೂ. ಪರಿಹಾರ ಘೋಷಣೆ

ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಸದಸ್ಯ ನಿರಪದ ಸರದಾರ್, ಮೃತರ ಕುಟುಂಬಸ್ಥರಿಗೆ ಶ್ರೀ ಉಲ್ಕಾ ಕಂಪೆನಿ ಮಧ್ಯಂತರ ಪರಿಹಾರವಾಗಿ ತಲಾ 15 ಲಕ್ಷ ರೂಪಾಯಿಗಳನ್ನು ಘೋಷಿಸಿದೆ. ಅದು ಸಾಕಾಗುವುದಿಲ್ಲ, ಪರಿಹಾರವನ್ನು ಹೆಚ್ಚಿಸಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಸಹ ಪರಿಹಾರ ಧನವನ್ನು ಘೋಷಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಅಹಮದ್ ಆಲಿ ಖಾನ್, ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಜ್ ಹುಸೈನ್ ಹಾಗೂ ಪಕ್ಷದ ಸ್ಥಳೀಯ ಸಮಿತಿ ಮುಖಂಡರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *