ಕೊವೀಡ್ ಪರಿಹಾರ ಮೂರು ಸಾವಿರ ಬೇಡ : ಹತ್ತು ಸಾವಿರ ಕ್ಕೆ ಕಟ್ಟಡ ಕಾರ್ಮಿಕರ ಆಗ್ರಹ

ಮೇ 21 ರಂದು ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಎರಡನೆ‌ ಕೊವೀಡ್ ಅಲೆಗೆ ಸಿಲುಕಿನಿರುದ್ಯೋಗಿಗಳಾಗಿರುವ ರಾಜ್ಯದ ನೋಂದಾಯಿತ/ವಲಸೆ ಕಾರ್ಮಿಕರ ‌ಕಟ್ಟಡ ಕಾರ್ಮಿಕ ಕುಟುಂಬಗಳಿಗೆ  ಪ್ರತಿ ತಿಂಗಳಿಗೆ 10 ಸಾವಿರ ಸಹಾಯಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ನಿರ್ಮಾಣ ವಲಯದ ಕಾರ್ಮಿಕರು ಮೇ 15 ರಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇದೀಗ ಸರ್ಕಾರ ಕೇವಲ ‌ರೂ 3000 ಪರಿಹಾರ ಘೋಷಿಸಿದೆ, ಇದನ್ನು ಕೂಡಲೇ ಮಾರ್ಪಡಿಸಿ ಕೂಡಲೇ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮುಂದಿನ ಮೂರು ತಿಂಗಳವರೆಗೆ ಮಾಸಿಕ‌ 10 ಸಾವಿರ ಪರಿಹಾರ ನೀಡಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆಗೊಂಡಿರುವ  ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆಗ್ರಹಪಡಿಸಿದೆ.

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ ಸುಮಾರು 9 ಸಾವಿರ ಕೋಟಿ ಸೆಸ್ ಸಂಗ್ರಹವಾಗಿದೆ. ವಾರ್ಷಿಕವಾಗಿ ಸುಮಾರು 600 ಕೋಟಿಯಷ್ಟು ‌ಸೆಸ್‌ ಸಂಗ್ರಹವಾಗುತ್ತಿದೆ ರಾಜ್ಯದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಕಳೆದ ಒಂದು ವರ್ಷದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಕಳೆದ ಎರಡು ತಿಂಗಳಿಂದ ಮತ್ತೆ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕನಿಷ್ಟ 4-5 ಜನರಿರುವ ಕುಟುಂಬಗಳಿಗೆ ವಾರಕ್ಕೆ ಕನಿಷ್ಟ 3000 ರುಪಾಯಿಗಳು ಅಗತ್ಯವಿದೆ ಎಂದು ಸಮನ್ವಯ ಸಮಿತಿಯ ಕೆ.ಮಹಾಂತೇಶ್ ಆಗ್ರಹಿಸಿದ್ದಾರೆ.

ನಿರುದ್ಯೋಗಳಾಗಿರುವ ಕಟ್ಟಡ ಕಾರ್ಮಿಕರಿಗೆ ವಾರಕ್ಕೆ ಕನಿಷ್ಟ 2500 ರುಪಾಯಿ ಮತ್ತು ಮಾಸಿಕ ರೂ 10000 ಕೊವೀಡ್ ಪರಿಹಾರ ಕಲ್ಯಾಣ ಮಂಡಳಯಿಂದ ನೀಡಬೇಕೆಂಬುದು ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳ ಆಗ್ರಹವಾಗಿತ್ತು, ಆದರೆ ನಮ್ಮ ಬೇಡಿಕೆಯನ್ನು ಸರ್ಕಾರ ಭಾಗಶಃ ಮೂರನೇ ಒಂದು ಭಾಗವನ್ನು ಮಾತ್ರ ಈಡೇರಿಸಿದೆ ಇದು ಸ್ವಾಗತಾರ್ಹವಾದರೂ ಇದು ಕಟ್ಟಡ ಕಾರ್ಮಿಕರ ಬದುಕಿಗೆ ಕಿಂಚಿತ್ತೂ ಸಹಕಾರಿಯಾಗುವುದಿಲ್ಲ ಎಂದು ಮಹಾಂತೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಕೋವಿಡ್‌ ವಿಶೇಷ ಪ್ಯಾಕೇಜ್‌ ಘೋಷಿಸಿದ ರಾಜ್ಯ ಸರಕಾರ : ರೂ 1250 ಕೋಟಿಯಲ್ಲಿ ಯಾರ ಪಾಲು ಎಷ್ಟು?

ಕಾರ್ಮಿಕ ಸಚಿವರು ಮತ್ತು ಕಲ್ಯಾಣ ಮಂಡಳಿ ಹಾಗೂ‌ ಸರ್ಕಾರ‌ಕೂಡಲೇ ಈ ಪರಿಹಾರವನ್ನು 10 ಸಾವಿರಕ್ಕೆ ಹೆಚ್ಚಿಸಿ ಮಾರ್ಪಡಿಸಿ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ರಾಜ್ಯ ಸರ್ಕಾರವನ್ನು ಮತ್ತು ಕಾರ್ಮಿಕ ಸಚಿವರು ಹಾಗೂ‌ ಕಲ್ಯಾಣ‌ ಮಂಡಳಿ ಅಧಿಕಾರಿಗಳನ್ನು ಆಗ್ರಹಪಡಿಸಿದೆ

ಮೇ 17 ರಿಂದ 21 ರವರೆಗೂ ಕಟ್ಟಡ ಕಾರ್ಮಿಕರು ನಡೆಸುತ್ತಿರುವ ಪ್ರಚಾರಾಂದೋಲನ ‌ಭಾಗವಾಗಿ‌ ರೂ 3000 ಬೇಡ 10 ಸಾವಿರ ಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಮೇ 21 ರಂದು ರಾಜ್ಯದ ಕಾರ್ಮಿಕ ನಿರೀಕ್ಷಕರ ಕಚೇರಿಗಳು ಮತ್ತು ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿ ಹಾಗೂ ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ‌ಮುಂದೆ ದೈಹಿಕ‌ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್

Donate Janashakthi Media

Leave a Reply

Your email address will not be published. Required fields are marked *