ಮಠ ಮಾನ್ಯಗಳಿಗೆ ನೀಡಿದ ದೇಣಿಗೆಯನ್ನು ವಾಪಸ್‌ ಪಡೆಯಿರಿ: ಹೆಚ್‌.ವಿಶ್ವನಾಥ್

ಮೈಸೂರು: ಕೋವಿಡ್ ಸಂಕಷ್ಟ ಪರಿಸ್ಥಿತಿಯು ತುಂಬಾನೇ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಜೊತೆಯಲ್ಲಿ ಮಠ ಮಾನ್ಯಗಳಿಗೆ ನೀಡಲಾಗಿರುವ ನೂರಾರು ಕೋಟಿ ದೇಣಿಗೆ ಹಣವನ್ನು ಸರಕಾರ ವಾಪಸ್ಸುಪಡಬೇಕೆಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾರೆ.

ಇದನ್ನು ಓದಿ: ಮೇ 10 ರಿಂದ 24ರ ವರೆಗೆ ರಾಜ್ಯದ್ಯಂತ ಲಾಕ್‌ಡೌನ್: ಸಿಎಂ ಯಡಿಯೂರಪ್ಪ ಘೋಷಣೆ

ಮೈಸೂರಿನಲ್ಲಿ ಇಂದು ಮಾತನಾಡಿ ರಾಜ್ಯ ಸರಕಾರ ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಮಠ ಮಾನ್ಯಗಳಿಗೆ ಸರ್ಕಾರದ ಖಜಾನೆಯಿಂದ ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದೆ. ಈಗ ಸಂಕಷ್ಟದ ಸಮಯ ಹಣ ವಾಪಸ್ಸು ಪಡೆದುಕೊಳ್ಳಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ. ಸಂಕಷ್ಟವನ್ನು ಎದುರಿಸುತ್ತಿರುವ ಜನರ ಸಹಾಯಕ್ಕೆ ಮಠಗಳು ಮುಂದಾಗಬೇಕು. ಅಗತ್ಯವಿರುವವರಿಗೆ ಊಟ, ಔಷಧಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಬೇಕೆಂದು ತಿಳಿಸಿದ್ದಾರೆ.

ನಾನು ಶಕ್ತಿಪೀಠದಲ್ಲಿ ಕುಳಿತ ಸಿಎಂ ಬಗ್ಗೆ ಮಾತಾಡಿದ್ದೇನೆ. ಶಕ್ತಿಕೇಂದ್ರ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ ಎಂದಿದ್ದೆ. ಆ ಶಕ್ತಿ ಕೇಂದ್ರದ ಕಣ್ಣು, ಕಿವಿ ಬಗ್ಗೆ ಹೇಳಿಕೆ ನೀಡಿದ್ದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಬಾಯಿ ಮುಚ್ಚಿ ಎಂದು ಹೇಳುವ ಧೈರ್ಯ ಸಿಎಂಗೆ ಇಲ್ಲ. ಶಕುನಿಗಳ ಮಾತು ರೈಲು ಹತ್ತಿಸುವವರ ಮಾತು ಕೇಳಬೇಡಿ ಎಂದಿದ್ದೆ ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಬೆಡ್ ಹಗರಣದ ಹಿಂದೆ ಯಾರಿರಬಹುದು?

ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಬರೀ ಅಧಿಕಾರಿಗಳ ಮಾತು ಕೇಳದೆ, ನೇರವಾಗಿ ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತವಾಗುತ್ತದೆ. ಮೈಸೂರಿನಲ್ಲಿ ಡಿಎಚ್‌ಓ ಅವರೂ ಅಸಹಾಯಕರಾಗಿದ್ದಾರೆ. ಕರ್ನಾಟಕದ ಆಡಳಿತದವರಿಗೆ ಗರ ಬಡಿದಿದೆ. ಇಬ್ಬರು ಜಿಲ್ಲಾಧಿಕಾರಿಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಿಕೊಂಡಿದ್ದಾರೆ.

ಹೆಚ್.ವಿಶ್ವನಾಥ್ ಅವರು ಬಿಬಿಎಂಪಿ ಆಸ್ಪತ್ರೆಗಳಲ್ಲಿನ ಕೋವಿಡ್‌ ರೋಗಿಗಳ ಹಾಸಿಗೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ.? ಒಬ್ಬ ಎಂಪಿ ಈ ಹಗರಣವನ್ನು ಬಯಲು ಮಾಡಬೇಕಾಗಿತ್ತಾ.? ಸರ್ಕಾರ ಏನು ಮಾಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಆಂಧ್ರ ಪ್ರದೇಶ ಮಾದರಿ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *