ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೌಚಾಲಯದ ಬಳಿ ಭಾರೀ ಸ್ಫೋಟ

Please follow and like us:

ಮೈಸೂರು: ಬೆಳಗಾವಿಯಿಂದ ಮೈಸೂರಿಗೆ ಆಗಮಿಸುತ್ತಿದ್ದ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ  ನಿಗೂಢ ಸ್ಫೋಟವೊಂದು ಸಂಭವಿಸಿ ಆತಂಕ ಮೂಡಿಸಿದೆ. ರೈಲು ಪಾಂಡವಪುರ ಜಂಕ್ಷನ್ ತಲುಪುತ್ತಿದ್ದಂತೆ ಬೋಗಿಯ ಶೌಚಾಲಯದ ಬಳಿ ಭಾರೀ ಸ್ಫೋಟದ ಸದ್ದು ಕೇಳಿ, ಬೆಂಕಿ ಕಾಣಿಸಿಕೊಂಡಿದೆ. ವಿಶ್ವಮಾನವ

ಪ್ರಯಾಣಿಕರು ಕೂಡಲೇ ರೈಲಿನ ಚೈನ್ ಎಳೆದಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ತ್ರಿನಾಥ್ ಎಂಬ ಯುವಕ ಬೆಂಕಿ ನಂದಿಸಿದ್ದಾನೆ. ರೈಲು ನಿಂತಿದ್ದೇ ತಡ ಜನ ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಸಂಸತ್ ಚುನಾವಣೆ : ಎಡ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು

ನವೆಂಬರ್ 15 ರ ಸಂಜೆ ಸುಮಾರು 7.20 ಕ್ಕೆ ಈ ಘಟನೆ ಸಂಭವಿಸಿದ್ದು, ಘಟನೆಯ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು ಹಾಗೂ ಜ್ಞಾನದಳ ತಪಾಸಣೆ ಕೈಗೊಂಡಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಶಾರ್ಟ್‌ ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ತನಿಖೆ ಕೈಗೊಂಡಿದ್ದಾರ

ಇದನ್ನೂ ನೋಡಿ: ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ

Please follow and like us:
Donate Janashakthi Media

Leave a Reply

Your email address will not be published. Required fields are marked *