ಮ್ಯಾನ್ಮಾರ್ ದೇಶವು ಭೀಕರ ಭೂಕಂಪದ ಪರಿಣಾಮ ಭಾರೀ ಪ್ರಾಣಹಾನಿಯನ್ನು ಎದುರಿಸುತ್ತಿದ್ದು, 2000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಮತ್ತು 270 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಜನತೆಗೆ ತೀವ್ರ ಆಘಾತವನ್ನುಂಟುಮಾಡಿದ್ದು, ಸರ್ಕಾರ ಒಂದು ವಾರದ ಕಾಲ ಶೋಕಾಚರಣೆಯನ್ನು ಘೋಷಿಸಿದೆ.
ಭೂಕಂಪದ ತೀವ್ರತೆಯು ಸಾಕಷ್ಟು ಪ್ರಭಾವ ಬೀರುತ್ತಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ. ನೂರಾರು ಜನರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಆರೋಗ್ಯ ತಂಡಗಳು ನಿರತರಾಗಿವೆ.
ಇದನ್ನೂ ಓದಿ:ಬಿಬಿಎಂಪಿ ಬಜೆಟ್ – ಬಂಡವಾಳಪರ ಯೋಜನೆಗಳಿಗೆ ಅನುದಾನ
ಮ್ಯಾನ್ಮಾರ್ ಸರ್ಕಾರ, ರಕ್ಷಣಾ ಪಡೆಗಳು ಹಾಗೂ ಜನಸೇವಾ ಸಂಘಟನೆಗಳು ಪರಿಷ್ಥಿತಿಯನ್ನು ನಿಭಾಯಿಸಲು ಶ್ರಮಿಸುತ್ತಿವೆ. ಹಲವೆಡೆ ಅತಿವೃಷ್ಟಿ ಮತ್ತು ಭೂಕಂಪದ ಅಟ್ಟಹಾಸದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಕಂಪದ ಕೇಂದ್ರ ಬಿಂದುವಿನ ಸುತ್ತಮುತ್ತ ಹೆಚ್ಚು ಹಾನಿ ಸಂಭವಿಸಿದ್ದು, ಪುನರ್ ನಿರ್ಮಾಣ ಕಾರ್ಯಗಳು ಮುಂದಿನ ದಿನಗಳಲ್ಲಿ ಗಂಭೀರವಾಗಲಿವೆ.
ಭೂಕಂಪದ ಪರಿಣಾಮ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಜನರು ಆಶ್ರಯಕ್ಕಾಗಿ ಹಾಹಾಕಾರ ಮಾಡುತ್ತಿದ್ದಾರೆ. ಮ್ಯಾನ್ಮಾರ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಪರಿಹಾರ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ:ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ಇಬ್ಬರ ಬಂಧನ