ಬೆಳಗಾವಿ: ಕಿಡಿಗೇಡಿಗಳು ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿ ಗ್ರಾಮದಲ್ಲಿ ನಡೆದಿದೆ.
ಮುಂಜಾನೆ ನಮಾಜ್ಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯ ಹಿಂದೂ-ಮುಸ್ಲಿಂ ಹಿರಿಯರು ಕೂಡಿಕೊಂಡು ಮಸೀದಿ ಮೇಲಿನ ಕೇಸರಿ ಧ್ವಜ ತೆಗೆಸಿದ್ದಾರೆ.
ಈ ಗ್ರಾಮದಲ್ಲಿ ಎಲ್ಲ ಸಮುದಾಯವರು ಸೇರಿ ಒಟ್ಟು 645 ಜನರು ವಾಸವಿದ್ದಾರೆ. ಈ ಕೃತ್ಯ ಎಸಗಿರುವುದು ಯಾರು? ಎಂದು ಪೊಲೀಸರು ರ್ಶೋಧಕಾರ್ಯ ನಡೆಸುತ್ತಿದ್ದಾರೆ.
ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಲು ಎರಡೂ ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ರಾಜ್ಯದಲ್ಲಿ ಮೂರ್ನಾಲ್ಕು ತಿಂಗಳಿಂದ ಸೌಹಾರ್ದತೆ ಹಾಳು ಮಾಡುವ ಕೃತ್ಯಗಳು ಹೆಚ್ಚಾಗುತ್ತಲೆ ಇವೆ. ಕೋಮು ಗಲಭೆ ಸೃಷ್ಟಿಸುತ್ತಿರುವವರ ಮೇಲೆ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು ಜರುಗಿಸದ ಕಾರಣ ಇಂತಹ ಕೃತ್ಯಗಳು ಹೆಚ್ವಾಗುತ್ತಿವೆ. ಸಾಮರಸ್ಯವನ್ನು ಹಾಳು ಮಾಡುವವರ ಮೇಲೆ ಕ್ರಮಜರುಗಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.