ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ರದ್ದುಪಡಿಸಿ: ಸಿಪಿಐ(ಎಂ)

ಬೆಂಗಳೂರು: ಸಾಹಿತಿಗಳು, ಪ್ರಗತಿಪರರು, ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ ಸಹ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ನಾಚಿಕೆ ಇಲ್ಲದೇ ಪಠ್ಯ ಪುಸ್ತಕ ಮರು ಪರಿಷ್ಕರಣೆ ಸಮಿತಿಯನ್ನು ಮತ್ತು ಅದು ಮಾಡಿದ ಪರಿಷ್ಕರಣ ಪಠ್ಯ ಕ್ರಮಗಳನ್ನು ಮುಂದುವರೆಸುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಕೂಡಲೆ ಮರು ಪರಿಷ್ಕರಿಸಿದ ಪಠ್ಯ ಕ್ರಮಗಳನ್ನು ಹಾಗೂ ಮರು ಪರಿಷ್ಕರಣೆ ಸಮಿತಿಯನ್ನು ರದ್ದುಪಡಿಸಬೇಕೆಂದು ಬಲವಾಗಿ ಒತ್ತಾಯಿಸುತ್ತೇವೆ.

ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ, ನಾಡಿನ ಗಣ್ಯ ಮಾನ್ಯರಾದ ಡಾ. ಕುವೆಂಪುರವರ ಕುರಿತಂತೆ ಮತ್ತು ಅವರ ಬರೆದಿರುವ ʻನಾಡಗೀತೆʼಯ ಕುರಿತಂತೆ ನಿಂದನೆ ಹಾಗೂ ಅಪಮಾನ ಮಾಡುವುದೆಂದರೆ ನಾಡಿಗೆ ಅಪಮಾನ ಮಾಡಿದಂತೆ. ಇಂತಹವರನ್ನು ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿಸಿರುವುದು ಮತ್ತು ನಿಂದಿಸಿದವರ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳದಿರುವುದು ರಾಜ್ಯದ ಬಿಜೆಪಿ ಪಕ್ಷದ ನಡೆಯು ಸಹ ಅವುಗಳನ್ನು ಬೆಂಬಲ ವ್ಯಕ್ತಪಡಿಸಿ, ಪುಂಡಾಟಿಕೆಯನ್ನು ಸಮರ್ಥಿಸುವಂತಿವೆ.

ಇಂತಹ ನಡೆಗಳು ನಾಡಿನ ಗಣ್ಯರನ್ನು ದುರುದ್ದೇಶದಿಂದಲೇ ಅಪಮಾನ ಮಾಡಲಾಗಿದೆಯೆಂಬುದನ್ನು ತೋರುತ್ತದೆ ಎಂದು ಸಿಪಿಐ(ಎಂ) ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *