ಬೆಂಗಳೂರು : ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಮಾರ್ಚ್ 22ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ತಿಳಿಸಿದರು.
ನಗರದ ಸರ್ವಜ್ಞ ಪಾರ್ಕ್ ನಲ್ಲಿ ಶನಿವಾರ ವಿವಿಧ ಪ್ರಗತಿಪರ ಮತ್ತು ರೈತ ಸಂಘಟನೆಗಳಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿರುವಾಗಲೇ ಇನ್ನೊಂದೆಡೆ ಜನತೆಯ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸುತ್ತಿದೆ ರೈತರ ಭೂಮಿಯನ್ನು ಅಂಬಾನಿ ಅದಾನಿ ಮುಂತಾದ ದೇಶಿಯ ಕಂಪನಿಗಳಿಗೆ ಬಾಯಿಗೆ ಹಾಕುತ್ತಿದ್ದಾರೆ ಆರ್ಥಿಕ ಬಿಕ್ಕಟ್ಟು ಹಾಗೂ ಲಾಕ್ ಡೌನ್ ಸಂಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಿರುವ ಜನತೆಯ ಮೇಲೆ ಅಪಾರವಾದ ತೆರಿಗೆ ಭಾರ ಹೊರಿಸಿ ನರಳುವಂತೆ ಮಾಡಲಾಗುತ್ತಿದೆ ಇದರ ವಿರುದ್ದ ವಿಧಾನಸೌಧ ಚಲೋ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ರಾಜ್ಯ ಸರಕಾರ ಇತ್ತೀಚಿನ ಬಜೆಟ್ ಗಳಂತೂ ಜನರನ್ನು ಸುಲಿಗೆ ಮಾಡುವ ಸಾಧನಗಳಾಗಿ ಕಾರ್ಪೊರೇಟ್ ಕಂಪನಿಗಳ ಜೋಬು ತುಂಬಿಸುತ್ತವೆ ರೈತರ, ಕಾರ್ಮಿಕರ,ದಲಿತರ ಹಾಗೂ ಇನ್ನಿತರ ಎಲ್ಲಾ ದುಡಿಯುವ ಜನ ಸಾಮಾನ್ಯರ ಬೆನ್ನಿಗೆ ಚೂರಿ ಹಾಕುತ್ತಿವೆ ಈಗಾಗಲೇ ಸಾಲದಲ್ಲಿ ಮುಳುಗಿರುವ ರೈತರ ಬದುಕು ಕಂಗಾಲಾಗಿದೆ ಪೆಟ್ರೋಲ್ ಡೀಸೆಲ್ ಗ್ಯಾಸ್ ವಿದ್ಯುತ್ ದಿನಸಿ ಸಾರಿಗೆ ಹೀಗೆ ಪ್ರತಿಯೊಂದರ ಬೆಲೆಗಳು ತೀವ್ರಗತಿಯಲ್ಲಿ ದುಬಾರಿಯಾಗುತ್ತಿದೆ ಎಂದು ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಕೂಟೇರಿ ನಾಗರಾಜ್ ಮಾತನಾಡಿ ದೇಶದ ಮತ್ತು ರಾಜ್ಯದ ವರಮಾನವನ್ನು ಖಾಸಗಿ ಕಂಪನಿಗಳಿಗೆ ಬಿಟ್ಟುಕೊಡಲಾಗುತ್ತಿದೆ. ಸುಲಿಗೆ ಮಾಡಲು ಮುಕ್ತ ಅವಕಾಶ ನೀಡಲಾಗಿದೆ.ಅದ್ದರಿಂದ ನಾವು ಒಗ್ಗಟ್ಟಿನಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಕಾನೂನುಗಳನ್ನು ರದ್ದು ಮಾಡಬೇಕು ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಸರ್ಕಾರಗಳು ಜಾರಿ ಮಾಡುತ್ತಿಲ್ಲ ಆದ್ದರಿಂದ ಕೂಡಲೇ ಈ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಇದನ್ನು ಓದಿ : ದಿಲ್ಲಿ ಗಡಿಗಳಲ್ಲಿ ನೂರು ದಿನಗಳು – ನಡೆದಿದೆ ಒಂದು ಅನನ್ಯ ಹೋರಾಟ
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎನ್.ಶ್ರೀರಾಮ್, ರಾಜೇಶ್,ಸುಗಟೂರು ಶ್ರೀಧರ್ ಫಾರೂಖ್, ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ತಾಲೂಕು ಅಧ್ಯಕ್ಷ ದಿನ್ನೆ ಹೊಸಹಳ್ಳಿ ರಮೇಶ್,ವಿಶ್ವನಾಥಪುರ ಮಂಜುನಾಥಗೌಡ,ನರಸಿಂಹಮೂರ್ತಿ ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣದ ,ವೆಂಕಟೇಶಪ್ಪ ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು.