ಬೆಂಗಳೂರು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಜನಾರ್ಪಣೆ ಕಾರ್ಯಕ್ರಮವು ಮಾರ್ಚ್ 12(ಶನಿವಾರ)ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಬೆಂಗಳೂರು ನಗರದ ಕುಮಾರ ಪಾರ್ಕ್ (ಪೂರ್ವ) ನಲ್ಲಿರುವ ಗಾಂಧಿ ಭವನ(ಮಹಾದೇವ ದೇಸಾಯಿ ಸಭಾಂಗಣ) ಇಲ್ಲಿ ಅಭಿರುಚಿ ಪ್ರಕಾಶನ(ಮೈಸೂರು ಹಾಗೂ ನಾಡೋಜ ಡಾ. ಬರಗೂರು ಪ್ರತಿಷ್ಠಾನ(ಬೆಂಗಳೂರು) ಇವರ ವತಿಯಿಂದ ನಡೆಯಲಿದೆ.
ಸಾಹಿತ್ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದೊಂದಿಗೆ, ಮಹಿಳಾ ಕವಿಗೋಷ್ಠಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಪ್ರಧಾನ, ಸಿನಿಮಾ ಕ್ಷೇತ್ರದ ಗಣ್ಯರಿಗೆ ಸಂತೋಷದ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ.
ಸಮಗ್ರ ಸಾಹಿತ್ಯ ಸಂಪುಟಗಳ ಜನಾರ್ಪಣೆಯನ್ನು ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾದ ಪ್ರಸಿದ್ಧ ವಿಮರ್ಶಕ ಬಸವರಾಜ ಕಲ್ಗುಡಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ವಹಿಸಕೊಂಡಿದ್ದಾರೆ. ಅಭಿರುಚಿ ಪ್ರಕಾಶನದ ಗಣೇಶ್ ಉಪಸ್ಥಿತಲಿದ್ದಾರೆ.
ಮೈಸೂರಿನ ಅಭಿರುಚಿ ಪ್ರಕಾಶನದ ʻಬೆವರು ನನ್ನ ದೇವರುʼ ಸಾಹಿತ್ಯ ಸಂಪುಟಗಳಲ್ಲಿ ಒಟ್ಟು 14 ಕೃತಿಗಳಿದ್ದು, ಸಾಹಿತ್ಯ-ಸಂಸ್ಕೃತಿ, ಸಾಮಾಜಿಕ-ರಾಜಕಾರಣ, ಭಾಷೆ-ಶಿಕ್ಷಣ-ರಾಜಕಾರಣ- ಭಾಷೆ-ಶಿಕ್ಷಣ-ಸಿನಿಮಾ, ಅಂಕಣ ಬರಹಗಳು, ಪುಸ್ತಕಾವಲೋಕನ, ಕತೆ-ನೀಳ್ಗತೆ, ಕಿರು ಕಾದಂಬರಿಗಳು, ಕಾದಂಬರಿಗಳು, ಕವಿತೆಗಳು ಒಳಗೊಂಡ ಪುಸ್ತಕಗಳು ಇವೆ.
ಇದೇ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಇತ್ತೀಚಿನ ಸಿನಿಮಾಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಹರಿಪ್ರಿಯ(ಅಮೃತಮತಿ), ಕುಮಾರ್ ಗೋವಿಂದ್(ಮೂಕ ನಾಯಕ), ರೇಖಾ(ಮೂಕ ನಾಯಕ), ಶಮಿತಾ ಮಲ್ನಾಡ್(ಬೆಕ್ಕು) ಅವರಿಗೆ ಸಂತೋಷದ ಸನ್ಮಾನ ಕಾರ್ಯಕ್ರಮವಿದೆ.
ರಾಜಲಕ್ಷ್ಮಿ ಬರಗೂರು ಜನ್ಮದಿನದ ಅಂಗವಾಗಿ ʻಮಹಿಳಾ ಕವಿಗೋಷ್ಠಿʼ ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಕಾರ್ಯಕ್ರಮದ ಆಶಯ ನುಡಿ ತಾರಿಣಿ ಶುಭದಾಯಿನಿ ಮಾಡಲಿದ್ದಾರೆ. ಗೋಷ್ಠಿ ಅಧ್ಯಕ್ಷತೆ ದು. ಸರಸ್ವತಿ ವಹಿಸಿಕೊಳ್ಳಲಿದ್ದಾರೆ. ಕವಿತಾ ವಾಚನದಲ್ಲಿ ಇಂದಿರಾ ಕೃಷ್ಣಪ್ಪ, ಮುಮ್ತಾಜ್ ಬೇಗಂ, ಎನ್.ಕೆ. ಲೋಲಾಕ್ಷಿ, ಕೆ. ಶರೀಫಾ, ಗೀತಾ ವಸಂತ, ಬಾ.ಹ. ರಮಾಕುಮಾರಿ, ಸುಧಾ ಚಿದಾನಂದಗೌಡ, ಶೋಭಾನಾಯಕ, ಜಿ.ಎಸ್. ಮಧುಮತಿ, ಅನಸೂಯ ಕಾಂಬ್ಳೆ, ಎಚ್.ಎನ್. ಆರತಿ, ಅಶ್ವಿನಿ ಮದನಕರ್, ಸುಜಾತ ಲಕ್ಷ್ಮೀಪುರ, ಮಮತಾ ಅರಸೀಕೆರೆ, ಡಿ. ಅರುಂಧತಿ, ಮಲ್ಲಿಕಾ ಬಸವರಾಜ್ ಮಾಡಲಿದ್ದಾರೆ. ನಿರ್ವಹಣೆಯನ್ನು ಆಶಾರಾಣಿ ಕೆ. ಮಾಡಲಿದ್ದಾರೆ.
ಸಂಜೆ 4.30ಕ್ಕೆ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಎಚ್.ಟಿ. ಪೋತೆ, ಕೇಶವ ಶರ್ಮ ಕೆ., ಮತ್ತು ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ಕಲಾವಿದ ಸುಂದರರಾಜ್ ಮತ್ತು ಲೇಖಕಿ ಎಚ್.ಎಲ್. ಪುಷ್ಪ ಭಾಗವಹಿಸಲಿದ್ದಾರೆ. ಬರಗೂರು ಪ್ರತಿಸ್ಥಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆವರು ನನ್ನ ದೇವರು – ಸಮಗ್ರ ಸಾಹಿತ್ಯ ಸಂಪುಟಗಳು 5256 ಪುಟಗಳನ್ನು ಒಳಗೊಂಡಿದೆ. ಮೂಲ ಬೆಲೆ ರೂ.5950 ಆಗಿದೆ.