ಮುಂಬೈ | ಮರಾಠ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ

ಮುಂಬೈ: ನಗರದ ಆಜಾದ್ ಮೈದಾನದಲ್ಲಿ ಸತ್ಯಾಗ್ರಹವನ್ನು ಅವರು ಆರಂಭಿಸಿದ್ದು ಮರಾಠ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಮನೋಜ್ ಜರಾಂ ಶುಕ್ರವಾರ ಆರಂಭಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು  ಧಾವಿಸುತ್ತಿದ್ದಾರೆ.

ಇದನ್ನೂ ಓದಿ: ಮಾಲೆಗಾಂವ್ ಬಾಂಬ್ ಸ್ಫೋಟ: ಖುಲಾಸೆಯಾದವರು ನಿಜವಾಗಿಯೂ ಅಮಾಯಕರೇ?

ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಬರುತ್ತಿದ್ದವರಿಂದಾಗಿ ಟರ್ಮಿನಸ್‌ನಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಉಪನಗರ ರೈಲು ಮತ್ತುಮುಂಬೈ ಲೋಕಲ್ಸ್‌ ಮೂಲಕ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನತ್ತು ಬರುತ್ತಿದ್ದಾರೆ ಎಂದು ವರದಿಯಾಗಿದೆ.

ಅಹಿತಕರ ಘಟನೆ ನಡೆಯದಂತೆ ಪೊಲೀಸ್‌, ರೈಲ್ವೆ ಸುರಕ್ಷಾ ದಳ ಸಿಬ್ಬಂದಿ ಭದ್ರತೆ ಕೈಗೊಂಡಿದ್ದಾರೆ. ಗಣೇಶ ಹಬ್ಬದ ವಾತಾವರಣವೂ ಇರುವುದರಿಂದ ಹೆಚ್ಚುವರಿಯಾಗಿ ಮಹಾರಾಷ್ಟ್ರ ಭದ್ರತಾ ದಳವನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ: ‘ಷಡ್ಯಂತ್ರ’ ಯಾರದ್ದು??ದೂರುದಾರನನ್ನು ಬಂಧಿಸಿದ್ದು‌‌ಯಾಕೆ??? Janashakthi Media

Donate Janashakthi Media

Leave a Reply

Your email address will not be published. Required fields are marked *