ನ್ಯೂಜಿಲ್ಯಾಂಡ್ ಸರ್ಕಾರದ ವಿರುದ್ದ ತಿರುಗಿ ಬಿದ್ದ ಮಾವೋರಿ ಜನಾಂಗ: ಸರ್ಕಾರದ ನೀತಿಗಳನ್ನು ವಿರೋಧಿಸಿ ಬೃಹತ್‌ ಪ್ರತಿಭಟನೆ

ಲಿಂಗ್ಟನ್: ನ್ಯೂಜಿಲ್ಯಾಂಡ್ ಸರ್ಕಾರ ಹಾಗೂ ಸ್ಥಳೀಯ ಜನಾಂಗವಾದ ಮಾವೋರಿ ನಡುವೆ ಭಾರೀ ತಿಕ್ಕಾಟ ಏರ್ಪಟ್ಟಿದ್ದು, ಮಾವೋರಿ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ವಿರೋಧಿಸಿ ಸಮುದಾಯದ ಸದಸ್ಯರು ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ನ್ಯೂಜಿಲ್ಯಾಂಡ್

ಇಲ್ಲಿನ ಪಾರ್ಲಿಮೆಂಟ್ ಎದುರು ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಧ್ವಜಗಳೊಂದಿಗೆ ಬೀದಿಗಿಳಿದು ಪ್ರತಿಭಟಿಸಿದರು. ಅದಲ್ಲದೇ ವಿಶೇಷ ಮಾವೋರಿ ಉಡುಗೆ ತೊಟ್ಟು, ಗರಿಗಳಿರುವ ಶಿರಸ್ತ್ರಾಣ ಧರಿಸಿ, ಮಾವೋರಿ ಆಯುಧಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : ಮಣಿಪುರದಲ್ಲಿ ಗಂಭೀರ ಪರಿಸ್ಥಿತಿ-ಕೇಂದ್ರಸರಕಾರ ಬಲವಾಗಿ ಮಧ್ಯಪ್ರವೇಶಿಸಬೇಕು: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಪ್ರತಿಭಟನಾಕಾರರು ಬ್ರಿಟಿಷ್ ಕಾಲದ ಟೀಟಿ ಆಫ್ ವೈತಾಂಗಿಯ ತಿದ್ದುವಡಿಯನ್ನು ವಿರೋಧಿಸಿ ಬೀದಿಗಿಳಿದಿದ್ದು, ನೂರಾರು ಮಾವೊರಿ ಬುಡಕಟ್ಟು ಜನರ ಹಕ್ಕುಗಳನ್ನು ಕಸಿಯಲಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದ್ದಾರೆ. ನ್ಯೂಜಿಲ್ಯಾಂಡ್

184 ವರ್ಷ ಹಳೆಯ ಒಪ್ಪಂದದ ತಿದ್ದುಪಡಿಯನ್ನು ವಿರೋಧಿಸುತ್ತಿರುವ ಮಾವೋರಿಗಳು ಇದು ನಮ್ಮ ಅಸ್ಮಿತೆಗೆ ಧಕ್ಕೆಯುಂಟುಮಾಡುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಇಲ್ಲಿನ ಹೆಚ್ಚಿನ ಪಕ್ಷಗಳು ಈ ಮಸೂದೆಗೆ ಮತ ಹಾಕುವ ನಿರೀಕ್ಷೆ ಇಲ್ಲದಿರುವುದರಿಂದ ಇದು ಅಂಗೀಕಾರವಾಗುವ ನಿರೀಕ್ಷೆಯಿಲ್ಲ. ಆದರೂ ಮಸೂದೆಯ ತಿದ್ದುಪಡಿಯ ವಿಚಾರವೇ ನೂಜಿಲ್ಯಾಂಡ್‌ನಲ್ಲಿ ರಾಜಕೀಯ ಕ್ರಾಂತಿಯನ್ನು ಹುಟ್ಟುಹಾಕಿದೆ.

22 ವರ್ಷ ವಯಸ್ಸಿನ ಸಂಸದೆ ‘ಹಾನಾ ರಾಫಿಟಿ ಮೈಪಿ ಕ್ಲಾರ್ಕ್‌’ ಅವರ ‘ಮೌರಿ’ ಸಂಪ್ರದಾಯದ ‘ಹಾಕಾ’ ನೃತ್ಯ ಮಾಡುವ ಮೂಲಕ ಮಸೂದೆಯೊಂದರ ಪ್ರಸ್ತಾಪಕ್ಕೆ ವಿರೋಧ ತೋರಿದ್ದರು. ಈ ವಿಡಿಯೋ ನ್ಯೂಜಿಲೆಂಡ್‌ ಹೊರಗೂ ಬಹಳಷ್ಟು ಜನರ ಗಮನ ಸೆಳೆದಿದೆ. ಒಪ್ಪಂದಕ್ಕೆ ಸಂಬಂಧಿಸಿದ ಮಸೂದೆಯೊಂದು ವಿವಾದದ ಸ್ವರೂಪ ಪಡೆದಿದ್ದು, ಆ ಮಸೂದೆಯ ಪ್ರತಿಯನ್ನು ಹಾನಾ ಅವರು ಸಂಸತ್ತಿನಲ್ಲಿ ನಾಟಕೀಯ ಶೈಲಿಯಲ್ಲಿ ಹರಿದು ಹಾಕುವ ಜೊತೆಗೆ ಸಾಂಪ್ರದಾಯಿಕ ಹಾಕಾ ನೃತ್ಯದ ಮೂಲಕ ಪ್ರತಿಭಟನೆ ದಾಖಲಿಸಿದರು. ಹಾನಾ ಧ್ವನಿ ಎತ್ತುತ್ತಿದ್ದಂತೆ ಇತರೆ ಸಂಸದರೂ ಅವರೊಂದಿಗೆ ಜೊತೆಯಾದರು. ಹಾಗೇ ಪಬ್ಲಿಕ್‌ ಗ್ಯಾಲರಿಯಲ್ಲಿ ಕುಳಿತಿದ್ದ ಸಾರ್ವಜನಿಕರೂ ಎದ್ದು ನಿಂತು ಹಾಡಲು ಶುರು ಮಾಡಿದರು.

ಹಾಕಾ ನೃತ್ಯ ಇಡೀ ಸಂಸತ್ತಿನಲ್ಲಿ ಸದ್ದು ಮಾಡುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಜನರನ್ನು ಅಧಿಕಾರಿಗಳು ಹೊರಗೆ ದೂಡಿದರು. ಸಭಾಪತಿಯವರು ಸಂಸದೆ ಹಾನಾ ರಾಫಿಟಿ ಮೈಪಿ ಕ್ಲಾರ್ಕ್‌ ಅವರನ್ನು ಅಮಾನತು ಮಾಡಿದರು. ಈ ಗಲಾಟೆಯ ನಡುವೆಯೂ ಸಂಸತ್ತಿನಲ್ಲಿ ಮಸೂದೆಯ ಮೊದಲ ಮಂಡನೆಯು ಆಗಿದೆ. ಮತ್ತೊಂದು ಸುತ್ತು ಮತಕ್ಕೆ ಹಾಕುವುದಕ್ಕೂ ಮುನ್ನ ಮಸೂದೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಕ್ಕೆ ಕಾದಿರಿಸಲಾಗಿದೆ.

ಇದನ್ನೂ ನೋಡಿ : ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media

Donate Janashakthi Media

Leave a Reply

Your email address will not be published. Required fields are marked *