ಹುಬ್ಬಳ್ಳಿ : ಅಮಾನವೀಯವಾಗಿ ದಾಳಿ ನಡೆಸಿ ಹತ್ಯೆ ನಡೆಸಿದ ಕೃತ್ಯವನ್ನು ತಾಲೂಕು ಇನಾಂ ವೀರಾಪೂರ ಗ್ರಾಮದ ಗರ್ಭಿಣಿ ಯುವತಿಯ ಮೇಲೆ ಆಕೆಯ ಹೆತ್ತ ತಂದೆ ಮತ್ತು ಸಂಬಂಧಿಕರು ಮಾಡಿರುವ ಕೊಲೇಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಧಾರವಾಡ ಜಿಲ್ಲಾ ಸಮಿತಿ ಮೃತ ಮಾನ್ಯಾ ದೊಡ್ಡಮನಿ ಆಕೆಯ ಪತಿ ವಿವೇಕಾನಂದ ಅವರ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಎಂದು ಸಿಪಿಐಂ ಜಿಲ್ಲಾ ಕಾರ್ಯದರ್ಶಿ ಮಹೇಶ್ ಪತ್ತಾರ ಆಗ್ರಹಿಸಿದರು.
ಘಟನೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನ್ಯಾ ಹಾಗೂ ವಿವೇಕಾನಂದ ಅವರ ಕುಟುಂಬದ ಸದಸ್ಯರನ್ನು ಸಿಪಿಐ(ಎಂ) ನಿಯೋಗ ಭೇಟಿ ಮಾಡಿ ಸಾಂತ್ವನ, ಧೈರ್ಯ ಹೇಳಿ ಘಟನೆಯ ವಿವರಗಳನ್ನು ಪಡೆಯಿತು. ಕುಟುಂಬದ ಆತಂಕದಂತೆ ಮಾನ್ಯಾಳ ಪತಿ ವೀವೇಕಾನಂದ ಅವರಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಸಿಪಿಐ(ಎಂ) ನಿಯೋಗ ಆಗ್ರಹಿಸಿತು.
ಇದನ್ನೂ ಓದಿ : ಬೆಂಗಳೂರ | ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಿಂದ ತೆರವುಗೊಂಡ ಕುಟುಂಬಗಳಿಗೆ ಆಶ್ರಯ ಒದಗಿಸಿ ಸಿಪಿಐ(ಎಂಎಲ್) ಒತ್ತಾಯ
ಸಮಾಜದಲ್ಲಿ ಇಂದಿಗೂ ಮೇಲಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನೋಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆದರೆ ಬಸವಣ್ಣನವರು 800 ವರ್ಷಗಳ ಹಿಂದೆಯೇ ಅಂತರಜಾತಿ ವಿವಾಹವನ್ನು ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದ್ದರು ಇನ್ನೂ ಇಂತಹ ಘಟನೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಹೆಳಿದರು.
ಗರ್ಭೀಣಿ ಯುವತಿ ಮಗಳನ್ನೆ ಅಮಾನುಷವಾಗಿ ತಂದೆಯೇ ಕೊಲ್ಲುವುದಾದರೆ ಹುಟ್ಟಿಗೇನು ಅರ್ಥ ?. ಈ ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ ನಿರ್ಭೀಜಗೊಳಿಸದೇ ಸಮಾಜದ ಬೆಳವಣಿಗೆ, ಸಾಮರಸ್ಯ ತರಲು ಸಾಧ್ಯವಿಲ್ಲ.
ಮೃತ ಯುವತಿ ಮಾನ್ಯ ದೊಡ್ಡಮನಿ ಹಾಗೂ ಆಕೆಯ ಪತಿ ವಿವೇಕಾನಂದ ಪ್ರಾಪ್ತವಯಸ್ಕರು ಮಾತ್ರವಲ್ಲ ಉತ್ತಮ ಶಿಕ್ಷಣ ಪಡೆಯುತ್ತಾ ಉತ್ತಮ ಭವಿಷ್ಯದ ಕನಸು ಕಾಣುತ್ತಾ ಹೊಸ ಬದುಕು ಕಟ್ಟಿಕೊಂಡಿದ್ದರು. ಆದರೆ ಜಾತಿಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡ ಮೃತ ಮಾನ್ಯಳ ತಂದೆ ಮನೆಯವರು ಮಗಳು ದಲಿತ ಯುವಕನನ್ನು ಮದುವೆಯಾದ ಒಂದು ನೆಪಮಾಡಿ ಅಮಾನುಷವಾಗಿ ಹತ್ಯೆ ಮಾಡಿರುವುದು ಪ್ರಜ್ಞಾವಂತ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರ ಅಂತರಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ರಕ್ಷಣ ನೀಡಬೇಕು ಮತ್ತು ಮಾರ್ಯದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಆ ಕುರಿತಾಗಿ ಕಾನೂನು ಶೀಘ್ರವಾಗಿ ಜಾರಿಗೊಳಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ನಿಯೋಗದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ವಕೀಲರಾದ ಬಸವರಾಜ ಕೋರಿಮಠ, ಒಂಟಿ ಮಹಿಳೆಯರ ಸಂಘಟನೆಯ ಜಿಲ್ಲಾಧ್ಯಕ್ಷೆ ಮಂಜುಳಾ ಪವಾರ, ಎಸ್‌ಎಫ್‌ಐ ಮುಖಂಡ ನಾಗರಾಜ ಚಲವಾದಿ, ಕಾರ್ಮಿಕ ಮುಖಂಡ ದುರ್ಗಪ್ಪ ಚಿಕ್ಕತುಂಬಳ, ಪ್ರಕಾಶ ಬೀರಲದಿನ್ನಿ, ರವಿ ಬೆಟಗೇರಿ, ಪರಶುರಾಮ ಹುನ್ನೂರ ಮುಂತಾದವರು ಇದ್ದರು.
ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಕೊಂದವರು ಯಾರು? ಎಂಬುದು ಹೊರಬರಲಿ – ಡಾ. ನಾಗಲಕ್ಷ್ಮೀ ಚೌಧರಿJanashakthi Media
