ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಮನು ಭಾಕರ್,ಸರಬ್ ಜಿತ್ ಸಿಂಗ್,   ಕಂಚಿನ ಪದಕ

ಪ್ಯಾರೀಸ್: ಭಾರತದ ಮನು ಭಾಕರ್,ಸರಬ್ ಜಿತ್ ಸಿಂಗ್, ಪ್ಯಾರೀಸ್ ಒಲಂಪಿಕ್ಸ್ ನಲ್ಲಿ  ಕಂಚಿನ ಪದಕ ಗೆಲ್ಲುವ ಗುರಿ ಖಚಿತಗೊಂಡಿದೆ. 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪ್ರವೇಶಿಸಿರುವಂತ ಈ ಜೋಡಿಗೆ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ದೇಶದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಈಗಾಗಲೇ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿರುವ ಮನು ಭಾಕರ್ ಅವರು ಮಿಶ್ರ ತಂಡದಲ್ಲಿಯೂ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ.

ಸೋಮವಾರ ಫ್ರಾನ್ಸ್ ನ ಚಟೌರೊಕ್ಸ್ ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿರುವ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ. ಒಲಂಪಿಕ್ಸ್ 

ಇದನ್ನು ಓದಿ : ಪ್ಯಾರಿಸ್ ಒಲಿಂಪಿಕ್ಸ್‌ ಭಾರತಕ್ಕೆ ಮೊದಲ ಪದಕವನ್ನು ಗೆದ್ದ ಮನು ಭಾಕರ್

ಈ ಜೋಡಿಯು ಮಂಗಳವಾರ ನಡಯೆಲಿರುವ ರಿಪಬ್ಲವಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಜೋಡಿಯನ್ನು ಎದುರಿಸಲಿದೆ. ಭಾರತ ದೇಶದ ಜೋಡಿಯು ಒಟ್ಟು 580 ಅಂಕಗಳೊಂದಿಗೆ ಕಂಚಿನ ಪದಕದ ಅರ್ಹತೆಯನ್ನು ಪಡೆಯಿತು.

ಸರ್ಬಿಯಾದ ಅರುನೋವಿಕ್ ಝೋರಾನಾ ಮತ್ತು ಮೈಕೆಕ್ ದಮಿರ್ ಜೋಡಿಯು 581 ಅಂಕಗಳೊಂದಿಗೆ ಚಿನ್ನದ ಪದಕದ ಹೋರಾಟಕ್ಕೆ ಅರ್ಹತೆ ಪಡೆಯಿತು.

ಕಣದಲ್ಲಿದ್ದ ಭಾರತೀಯರಾದ ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು 576 ಅಂಕಗಳೊಂದಿಗೆ ಹತ್ತನೇ ಸ್ಥಾನ ಪಡೆದರಲ್ಲದೆ, ಪದಕ ಪಡೆಯುವ ಸುತ್ತಿನ ಪ್ರವೇಶ ಪಡೆಯಲು ವಿಫಲರಾದರು.

ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅವರು ಇತಿಹಾಸ ಸೃಷಅಟಿಸಲು ಮುಂದಾಗಿದ್ದು, ಒಂದು ಆವೃತ್ತಿಯಲ್ಲಿ ಬಹುಪದಕ ಗೆಲ್ಲುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಡೆಯಲಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ನ ವೈಯಕ್ತಿಕ ಸ್ಪರ್ಧೆಯಲ್ಲಿ ಈಗಾಗಲೇ ಕಂಚನಿ ಪದಕವನ್ನು ಗೆಲ್ಲುವ ಮೂಲಕ ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಖಾತೆಯನ್ನು ತೆರೆದಿದ್ದಾರೆ.

ಇದನ್ನು ನೋಡಿ : ಜಲಾವೃತಗೊಂಡ ರಸ್ತೆಗಳು : ಇದು “ಗುಜರಾತ್‌ ಮಾಡಲ್‌” ಎಂದು ಕಾಲೆಳೆದ ನೆಟ್ಟಿಗರು!Janashakthi Media

Donate Janashakthi Media

Leave a Reply

Your email address will not be published. Required fields are marked *