ಮಣಿಪುರದಲ್ಲಿ ಗಂಭೀರ ಪರಿಸ್ಥಿತಿ-ಕೇಂದ್ರಸರಕಾರ ಬಲವಾಗಿ ಮಧ್ಯಪ್ರವೇಶಿಸಬೇಕು: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಮಣಿಪುರ :ಮಣಿಪುರದಲ್ಲಿ ಜನಾಂಗೀಯ ನೆಲೆಯಲ್ಲಿ ಹತ್ಯೆಗಳು ಮತ್ತು ಪ್ರತಿಹತ್ಯೆಗಳಿಂದಾಗಿ ಹಿಂಸಾಚಾರ ತೀವ್ರಗೊಂಡಿದೆ. ಇದರಿಂದಾಗಿ ಒಂದು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ 7 ರಿಂದ ವಿವಿಧ ಘಟನೆಗಳಲ್ಲಿ 20 ಜನರ ಹತ್ಯೆಯಾಗಿದೆ.. ಇದಕ್ಕೆ ಮೊದಲು ಹಿಂದೆ ಭೀಕರ ಘಟನೆಯೊಂದರಲ್ಲಿ ಅಪಹರಣಕ್ಕೊಳಗಾದ ಐವರು ಮಹಿಳೆಯರು ಮತ್ತು ಮಕ್ಕಳ ಶವಗಳು ಪತ್ತೆಯಾಗಿರುವುದು ಕಣಿವೆಯಲ್ಲಿ ಪರಿಸ್ಥಿತಿಗೆ ಉರಿ ಹಚ್ಚಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಖ ವ್ಯಕ್ತಪಡಿಸಿದೆ.

ಅರಂಭದಿಂದಲೂ ಪರಿಸ್ಥಿತಿ‌ ಹದಗೆಡಲು  ಮುಖ್ಯಮಂತ್ರಿ ಬಿರೇನ್ ಸಿಂಗ್ ಕಾರಣರಾಗಿದ್ದರು, ಆದರೂ ಕೇಂದ್ರ ಸರ್ಕಾರ ಮತ್ತು ಆಳುವ ಪಕ್ಷವಾಗಿ ಬಿಜೆಪಿ ಅವರನ್ನು ತೆಗೆದುಹಾಕಲು ನಿರಾಕರಿಸಿತು ಮತ್ತು ಅವರಿಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಈಗ ರಾಜ್ಯ ಸರ್ಕಾರ ಮತ್ತು ಆಡಳಿತವನ್ನು ಯಾರೂ ಲೆಕ್ಕಿಸದ ಪರಿಸ್ಥಿತಿ ಉದ್ಭವಿಸಿದೆ.

ಇದೀಗ ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಲು ಕೇಂದ್ರ ಸರ್ಕಾರವು ಬಲವಾಗಿ ಮಧ್ಯಪ್ರವೇಶಿಸಬೇಕಾದ ಸಮಯ. ಅದು ಶಾಂತಿಯನ್ನು ಮರುಸ್ಥಾಪಿಸುವ ಮತ್ತು ರಾಜ್ಯದ ಎಲ್ಲಾ ಜನಾಂಗೀಯ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಒಂದು ರಾಜಕೀಯ ಇತ್ಯರ್ಥಕ್ಕಾಗಿ ಗಂಭೀರವಾದ ಕೆಲಸವನ್ನು ಪ್ರಾರಂಭಿಸಬೇಕಾಗಿದೆ ಎಂದು  ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

 

Donate Janashakthi Media

Leave a Reply

Your email address will not be published. Required fields are marked *