ಇಂಫಾಲ: ದೇಶಾದ್ಯಂತ ಭಾರೀ ಅಕ್ರೋಶಕ್ಕೆ ಗುರಿಯಾಗಿರುವ ಮಣಿಪುರನಲ್ಲಿ ನಡೆದ ಹಿಂಸಾಚಾರದ ವೇಳೆ ಕುಕಿ-ಜೋ ಸಮುದಾಯದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿದೆ. ಆ ಘಟನೆಯಲ್ಲಿನ ಸಂತ್ರಸ್ತ ಒಬ್ಬ ಮಹಿಳೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದು ದುಷ್ಕರ್ಮಿಗಳ ಗುಂಪಿನೊಂದಿಗೆ ಪೊಲೀಸರೇ ನಮನ್ನು ಒಪ್ಪಿಸಿದ್ದು ಎಂದು ತಿಳಿಸಿದ್ದಾರೆ. ಎಂದು indianexpress.com ವರದಿ ಮಾಡಿದೆ.
ತಮ್ಮ ಹಳ್ಳಿಯ ಮೇಲೆ ಜನರ ಗುಂಪೊಂದು ದಾಳಿ ಮಾಡಿದ ನಂತರ ಜನಸಮೂಹದಿಂದ ತಪ್ಪಿಸಿ ಹತ್ತಿರದ ಕಾಡಿನಲ್ಲಿ ಆಶ್ರಯಕ್ಕಾಗಿ ಓಡಿಹೋದೆವು. ನಂತರ ತೌಬಲ್ ಪೊಲೀಸರು ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ಯುವಾಗ ಗುಂಪೊಂದು ದಾರಿಯಲ್ಲಿ ಅಡ್ಡಗಟ್ಟಿತು. ಪೊಲೀಸ್ ಠಾಣೆ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವಾಗಲೇ ಪೊಲೀಸರ ಕಸ್ಟಡಿಯಿಂದ ನಮ್ಮನ್ನು ಅವರು ವಶಪಡಿಸಿಕೊಂಡರು ಎಂದು ಸಂತ್ರಸ್ತರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಸಂತ್ರಸ್ತೆಯ ಗಂಡ ಮನೆಯಿಂದ ಫೋನ್‌ನಲ್ಲಿ ಮಾತನಾಡುತ್ತ 20ವರ್ಷದ ಮಹಿಳೆ ಆರೋಪಿಸಿದ್ದನು ಹೇಳಿದ್ದಾರೆ. ನಮ್ಮ ಹಳ್ಳಿಯ ಮೇಲೆ ದಾಳಿ ಮಾಡುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಅಲ್ಲಿದ್ದರು. ಪೋಲೀಸರು ನಮ್ಮನ್ನು ಮನೆಯ ಹತ್ತಿರದಿಂದ ಕರೆದುಕೊಂಡು ಹೋಗಿ, ಹಳ್ಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಗುಂಪಿನೊಂದಿಗೆ ರಸ್ತೆಯಲ್ಲಿ ಬಿಟ್ಟರು. ಪೊಲೀಸರು ನಮ್ಮನ್ನು ಅವರಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ
ದಾಳಿಯಲ್ಲಿ ತನ್ನ ತಂದೆ ಮತ್ತು ಸಹೋದರನ್ನು ಕಳೆದುಕೊಂಡಿರುವ ಇನ್ನೊಬ್ಬ ಸಂತ್ರೆಸ್ತೆ ಕೂಡಾ ಪೊಲೀಸರ ಮೇಲೆ ಆರೋಪ ಹೊರಿಸಿದ್ದಾರೆ.ಎಂದು The wire ವರದಿ ಮಾಡಿದೆ.
ಸಂತ್ರಸ್ತರು ತಮ್ಮ ದೂರಿನಲ್ಲಿ ನಾವು ಐವರು ಒಟ್ಟಿಗೆ ಇದ್ದೇವು. ವೀಡಿಯೊದಲ್ಲಿ ಕಾಣುವ ಇಬ್ಬರು ಮಹಿಳೆಯರು ಮತ್ತು 50ವರ್ಷದ ಇನ್ನೊಬ್ಬ ಮಹಿಳೆಯನ್ನು ಸಹ ವಿವಸ್ತ್ರಗೊಳಿಸಲಾಗಿದೆ.
ಈ ಘಟನೆಯ ವಿಡಿಯೋ ಸೆರೆಹಿಡಿದಿರುವ ಬಗ್ಗೆ ನಮಗೆ ತನಗೆ ಮತ್ತು ತನ್ನ ಕುಟುಂಬಕ್ಕೆ ತಿಳಿದಿಲ್ಲ. ಅದು ವೈರಲ್ ಆದಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಪೊಲೀಸರು ಮತ್ತು ರಾಜ್ಯ ಸರ್ಕಾರ ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಮಹಿಳೆ ಹೇಳಿದರು.
ಮಣಿಪುರದಲ್ಲಿ ಇಂಟರ್ನೆಟ್ ಇಲ್ಲ, ನಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು. ಆ ಜನಸಮೂಹದ ಭಾಗಿಯಾಗಿರುವರಲ್ಲಿ ಕೆಲವರನ್ನು ಗುರುತಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.